ಬೆಂಗಳೂರು : ಕರ್ನಾಟಕದಲ್ಲಿ ಡ್ರಗ್ ಹಾವಳಿ ಜಾಸ್ತಿಯಾಗ್ತಿರುವುದು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹಲವರು ದೂರು ನೀಡಿದ್ದಾರೆ ಮತ್ತು ಮಾಧ್ಯಮಗಳಲ್ಲೂ ವರದಿಯಾಗಿದೆ. ಬೆಂಗಳೂರಿನಲ್ಲಿ 50% , ಮಂಗಳೂರಿನಲ್ಲಿ 22%, ಬೇರೆ ಬೇರೆ ಜಿಲ್ಲೆಗಳಲ್ಲಿ 11 % ಜಾಸ್ತಿ ಇದೆ ಎಂದು ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಸಭೆ ನಡೆಸಿ ಹೇಳಿಕೆ ನೀಡಿದ್ದಾರೆ.
ರಾಜ್ಯ ಮಟ್ಟದಲ್ಲಿ ಸಿಎಸ್ ನೇತೃತ್ವದಲ್ಲಿ ಸಮಿತಿ ಇದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಇದೆ. ಪೊಲೀಸ್, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇರ್ತಾರೆ. ಡಾ.ವಿಶಾಲ್ ರಾವ್ ರಾಜ್ಯದ ಸಮಿತಿ ಸದಸ್ಯರಿದ್ದಾರೆ. ಅವರ ಪ್ರಕಾರ ಹೆಚ್ಚು ಪರಿಣಾಮಕಾರಿಯಾಗಿ ಜಾಗೃತಿ (Awareness) ಮತ್ತು ಕ್ರಮ (enforcements) ಆಗಬೇಕೆಂದು ತಿಳಿಸಿದ್ದಾರೆ.
ಬೆಂಗಳೂರು ಪೂರ್ವದಿಂದ ಹೆಚ್ಚು ಸಪ್ಲೈ ಆಗುತ್ತಿದ್ದು ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ ಮಾಡಲು ತೀರ್ಮಾನ ಮಾಡಲಾಗಿದೆ. ಗೃಹ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ ಸಚಿವರು ಆಗಾಗ ಸಭೆ ಮಾಡಿ ಕ್ರಮಕ್ಕೆ ಸೂಚನೆ ನೀಡಲಿದ್ದಾರೆ. ಸಿಂಥೆಟಿಕ್ ಟ್ಯಾಬ್ಲೆಟ್ ಬಂದಿದೆ. ಇದು ವಾಸನೆ ಬರೋದಿಲ್ಲ ಇದರ ಕ್ರಮಕ್ಕೂ ಕೂಡ ಮುಂದಾಗಿದ್ದಾರೆ.
ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಗೊತ್ತಿಲ್ಲದೆ ನಡೆಯಲ್ಲ ಕೆಲಸ ಮಾಡುವ ಪೊಲೀಸರಿಗೆ ಗೊತ್ತಿರ್ತದೆ. ಎಸಿಪಿ, ಡಿಸಿಪಿ, ಎಸ್ಪಿಗೆ ಜವಾಬ್ದಾರಿಯನ್ನು ಫಿಕ್ಸ್ ಮಾಡಿದ್ದೇವೆ. ಕಾನೂನನ್ನು ಬಲಗೊಳಿಸಲು ಏನು ಮಾಡಲು ಚೆರ್ಚೆ ತಿದ್ದುಪಡಿ ಅಥವಾ ಹೊಸ ಕಾನೂನು ರೂಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.
ನಾನ್ ಬೇಲಬಲ್ ಆಗಿದ್ದು ಕನಿಷ್ಟ 10 ವರ್ಷ ಹಾಗೂ ಜೀವಾವಧಿ ಶಿಕ್ಷೆ ಮಾಡಲು ತೀರ್ಮಾನ ಮಾಡಲಾಗಿದೆ. ಸ್ಟೂಡೆಂಟ್ ಪೋಲೀಸ್, ಎಸ್ ಸಿಸಿ, ಸ್ಕೌಟ್ಸ್ ಮತ್ತು ಗೌಡ್ಸ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ರೆಸಿಡೆನ್ಸ್ ಅಸೋಷಿಯನ್ ಗಳು ಬಲಗೊಳಿಸಲು ನಿರ್ಧಾರ ಮಾಡಲಾಗಿದೆ. ಸ್ಪೆಷಲ್ ಕೋರ್ಟ್, ಮನಃ ಪರಿವರ್ತನೆ ಸೆಂಟರ್ ಗಳು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಯುವಕರು, ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಡ್ರಗ್ಸ್ ಕೊಲೆ, ಸುಲಿಗೆ,ಕಳ್ಳತನ ಹೆಚ್ಚಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು ಮತ್ತೆ ಮುಂದುವರೆಸಲು ಕ್ರಮ ಕೈಗೊಳ್ಳಲಾಗುವುದು. 2022 ರಲ್ಲಿ ಭಾರತೀಯರು 75,71,123 ವಿದೇಶಿಗರು ವಿರುದ್ದ ಪ್ರಕರಣ ದಾಖಲಾಗಿದೆ. 2024 ರಲ್ಲಿ 1021 ಭಾರತೀಯರು ವಿದೇಶಿಗರು ಹೆಚ್ಚಾಗಿದೆ. ಹರಿಯಾಣ, ಒರಿಸ್ಸಾ ಅಂಧ್ರದಿಂದ ಬರುತ್ತಿದೆ ಎಂದು ಹೇಳಿದ್ದಾರೆ.