ತಜ್ಞರ ಸಲಹೆ: ಯಾವಾಗ ಮತ್ತು ಯಾರಿಗೆ ತಣ್ಣೀರು ಕುಡಿಯಲು ನಿಷೇಧ
ಬಿಸಿಲಿನ ಧಗೆಯಿಂದ ಮುಕ್ತಿ ಪಡೆಯಲು ಹೆಚ್ಚಿನವರು ತಂಪಾದ ನೀರು ಕುಡಿಯುವುದಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಬಿಸಿಲು ಮತ್ತು ಬೆವರಿನಿಂದ ದಣಿದಿದ್ದವರಿಗೆ ತಣ್ಣೀರು ತಕ್ಷಣ ತಂಪು ಮತ್ತು ಆರಾಮವನ್ನು ನೀಡುತ್ತದೆ. ಹಾಗಾಗಿ ಫ್ರಿಜ್ನ ನೀರು ಅಥವಾ ಐಸ್ ಹಾಕಿದ ನೀರು ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಪ್ರತಿಯೊಂದು ಅಭ್ಯಾಸವೂ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ತಣ್ಣೀರು ಕೂಡ ಇದಕ್ಕೆ ಹೊರತಾಗಿಲ್ಲ. ಅದರಲ್ಲಿಯೂ ಕೆಲವರು ಪದೇ ಪದೇ ತಂಪಾಗಿರುವ ನೀರನ್ನು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ವಿಶೇಷವಾಗಿ ದೇಹ ಹೆಚ್ಚು ಬಿಸಿಯಾಗಿರುವಾಗ ಏಕಾಏಕಿ ತಣ್ಣೀರು ಕುಡಿಯುವುದರಿಂದ ಲಾಭಕ್ಕಿಂತ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇದು ಮುಂದೆ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಬಹುದು. ಹಾಗಾದರೆ ತಂಪಾದ ನೀರು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ, ಯಾರು ಇದರಿಂದ ದೂರವಿರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಂಪಾದ ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:
ತಜ್ಞರ ಪ್ರಕಾರ, ತುಂಬಾ ತಂಪಾದ ನೀರು ಅಥವಾ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಭಾರವಾಗುವುದು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳು ಕಂಡುಬರಬಹುದು. ಜೊತೆಗೆ, ತಣ್ಣೀರಿನಿಂದ ಗಂಟಲಿನಲ್ಲಿ ಕೆರೆತ ಅಥವಾ ಶೀತಕ್ಕೆ ಕಾರಣವಾಗಬಹುದು, ಅದರಲ್ಲಿಯೂ ಬೇಸಿಗೆಯಲ್ಲಿ ದೇಹ ಬಿಸಿಯಾಗಿರುವುದರಿಂದ ಒಮ್ಮೆಲೇ ತಣ್ಣೀರು ಕುಡಿದಾಗ ದೇಹದ ತಾಪಮಾನದಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ. ಕೆಲವರಿಗೆ ತಲೆನೋವು ಅಥವಾ ಸುಸ್ತು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ, ಇದು ರಕ್ತ ಸಂಚಾರದ ಮೇಲೂ ಪರಿಣಾಮ ಬೀರುತ್ತದೆ. ನಿರಂತರವಾಗಿ ತಣ್ಣೀರು ಕುಡಿಯುವ ಅಭ್ಯಾಸ ದೇಹದ ಸಹಜ ಪ್ರಕ್ರಿಯೆಗಳನ್ನು ನಿಧಾನಗೊಳಿಸಬಹುದು, ಇದರಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.
ತಂಪಾದ ನೀರು ಯಾರಿಗೆ ಒಳ್ಳೆಯದಲ್ಲ?
- ಜೀರ್ಣಕ್ರಿಯೆ ಸರಿಯಾಗಿ ಆಗದವರು ತಣ್ಣೀರು ಕುಡಿಯಬಾರದು.
- ಗಂಟಲು ಅಥವಾ ಸೈನಸ್ ಸಮಸ್ಯೆ ಇರುವವರಿಗೆ ಇದು ಹಾನಿಕಾರವಾಗಬಹುದು.
- ಆಗಾಗ ಶೀತ ಆಗುತ್ತಿದ್ದರೆ ನೀವು ತಂಪಾದ ನೀರಿನಿಂದ ದೂರವಿರುವುದು ಉತ್ತಮ.
- ಸಣ್ಣ ಮಕ್ಕಳು ಮತ್ತು ವೃದ್ಧರಿಗೆ ತಣ್ಣೀರು ಒಳ್ಳೆಯದಲ್ಲ.
- ಹೃದಯ ಅಥವಾ ರಕ್ತದ ಒತ್ತಡ (ಬ್ಲಡ್ ಪ್ರೆಶರ್) ಸಮಸ್ಯೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು.
ತಣ್ಣೀರು ಕುಡಿಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:
- ತುಂಬಾ ಐಸ್ ಅಥವಾ ಅತಿಯಾಗಿ ತಂಪಾಗಿರುವ ನೀರನ್ನು ಕುಡಿಯುವುದು ಒಳ್ಳೆಯದಲ್ಲ.
- ಬಿಸಿಲಿನಿಂದ ಬಂದ ತಕ್ಷಣವೇ ನೀರು ಕುಡಿಯದೆ, ಕೆಲವು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು.
- ದಿನವಿಡೀ ನೀರನ್ನು ಸ್ವಲ್ಪಸ್ವಲ್ಪವೇ ಕುಡಿಯಬೇಕು.
- ಗಂಟಲು ನೋವು ಅಥವಾ ಇತರ ಸಮಸ್ಯೆಗಳಿದ್ದರೆ ತಣ್ಣೀರು ಕುಡಿಯಬಾರದು.
For More Updates Join our WhatsApp Group :




