ತುಮಕೂರು || ಜನತೆ ನಿರ್ಲಕ್ಷ್ಯ : ಯೋಜನೆಗಳು ವಿಫಲ

ತುಮಕೂರು || ಜನತೆ ನಿರ್ಲಕ್ಷ್ಯ : ಯೋಜನೆಗಳು ವಿಫಲ

ಹುಳಿಯಾರು : ಜನರ ನಿರ್ಲಕ್ಷ್ಯದಿಂದ ಅನೇಕ ಉಪಯುಕ್ತ ಯೋಜನೆಗಳು ವಿಫಲಗೊಳ್ಳುತ್ತಿವೆ ಎಂದು ಮಾಸ್ ಟ್ರಸ್ಟ್ ಅಧ್ಯಕ್ಷೆ ಮತ್ತು ಸಂಪನ್ಮೂಲ ವ್ಯಕ್ತಿ ಎನ್ ಇಂದಿರಮ್ಮ ವಿಷಾದಿಸಿದರು.

ಅವರು ಹುಳಿಯಾರು ಸಮೀಪದ ಚೌಳಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿ, ಸಹಜ ಬೇಸಾಯವೂ ಕೂಡ ಉಪಯುಕ್ತ ಯೋಜನೆ.  ರೈತರು ಅದನ್ನು ಉಪೇಕ್ಷಿಸಿದರೆ, ತಮಗೆ ತಾವೆ ದೊಡ್ಡ ಅನ್ಯಾಯವನ್ನು ಮಾಡಿಕೊಂಡAತಾಗುವುದು ಎಂದರು.

 ಸಂಪನ್ಮೂಲ ವ್ಯಕ್ತಿ ರಾಮಕೃಷ್ಣಪ್ಪ, ಸಹಜ ಬೇಸಾಯದಲ್ಲಿ ಅಳವಡಿಸುವ ಬೆಳೆಗಳು ಮತ್ತು ಅವುಗಳಿಂದ ದೊರೆಯುವ ಆದಾಯದ ಬಗ್ಗೆ ವಿವರಿಸಿದರು. ಪಂಚಾಯತಿ ಉಪಾಧ್ಯಕ್ಷೆ ಮಂಜಮ್ಮನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಸದಸ್ಯರಾದ ಶಾರದಮ್ಮ, ಸುಮಾ, ಪಂಚಾಯಿತಿ  ಕಾರ್ಯದರ್ಶಿ ರಂಗಸ್ವಾಮಿ, ಸಹಜ ಕೃಷಿಕ  ಹೇಮಂತ್ ಕುಮಾರ್, ಬಿಲ್ ಕಲೆಕ್ಟರ್ ಬಾಲರಾಜ್, ಪಶುಸಖಿ ಶೈಲಮ್ಮ, ಪಂಚಾಯತಿ ಸಿಬ್ಬಂದಿ ಹಾಗೂ ಸಹಜ ಬೇಸಾಯ ತರಬೇತಿಗೆ ಬಂದ ರೈತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *