ಮಂಜುಳ.ಬಿ.ಕೆ. ಶಿಕ್ಷಕಿ.ಸಿರಾ
ಮನುಷ್ಯ ತನ್ನ ಜೀವನದ ಪ್ರತಿ ಘಟ್ಟದಲ್ಲಿ ವಾಸ್ತವವನ್ನು ನಂಬಿ ಬದುಕುವುದಕ್ಕಿಂತ ಕಲ್ಪನೆಗಳ ಜೊತೆಗೆ ಭ್ರಮೆಯ ಬದುಕನ್ನು ಇಷ್ಟಪಡುವುದೇ ಹೆಚ್ಚು. ಕೆಲವೊಮ್ಮೆ ಅದು ಅನಿವಾರ್ಯ ಇದ್ದರು ಕೂಡ ಅದು ತನ್ನ ಮಿತಿಯನ್ನು ದಾಟಿದರೆ ಬದುಕನ್ನೇ ಕಸಿಯಬಹುದು. ಕಷ್ಟವಾದರೂ ನಾವು ವಾಸ್ತವದ ಸತ್ಯಗಳನ್ನು ಅರಿತು ಬದುಕುವುದು ಅವುಗಳನ್ನು ಅರಗಿಸಿಕೊಳ್ಳುವುದು ಮತ್ತು ಸಂಕಟಗಳನ್ನು ಸಹಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಮಾನಸಿಕವಾಗಿ ಸದೃಢರಾಗಿ ಸಮಸ್ಯೆಗಳಿಗೆ ಚಿಂತೆ ಮಾಡುವುದಕ್ಕಿಂತ ಚಿಂತನೆ ಕಡೆ ಸಾಗಬೇಕು.
ಇಂದಿನ ಯುವ ಪೀಳಿಗೆ ಈ ಭ್ರಮೆಯ ಲೋಕದಲ್ಲಿ ಬದುಕುತ್ತಿರುವುದು ಸತ್ಯ ಸಂಗತಿಯಾಗಿರುವುದರಿAದ ಇದರ ಪರಿಣಾಮ ಕೂಡ ಗಂಭೀರವಾಗಿರುವುದರಿAದ ನಾವು ಈ ವಿಚಾರವನ್ನು ಪರಿಗಣಿಸುವುದು ಅತ್ಯಂತ ಮುಖ್ಯವಾಗಿದೆ.ಕೆಲವೊಂದು ಸಂಗತಿಗಳು ಹತ್ತಿರದಿಂದ ತುಂಬ ಸರಳವಾಗಿ, ಸುಂದರವಾಗಿ ಕಾಣುತ್ತವೆ. ಆದರೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಗಾದೆ ಮಾತಿನಂತೆ ಕಂಡರು ವಾಸ್ತವ ಬೇರೆಯೇ ಆಗಿರುತ್ತದೆ.
ಆದ್ದರಿಂದ ನಾವು ವಾಸ್ತವದಲ್ಲಿ ಬದುಕುವುದು ಕಷ್ಟವಾದರೂ ಸೂಕ್ತವಾಗಿರುತ್ತದೆ. ಭಾವನೆಗಳು, ಕಲ್ಪನೆಗಳು, ಆಸೆಗಳು ಈ ಎಲ್ಲವು ಭ್ರಮೆಯ ಲೋಕದಲ್ಲಿ ವಿಹರಿಸುವ ಅಲೆಗಳ ಹಾಗೆ. ಅವುಗಳು ನಿರಂತರ ಬಂದು ಹೋಗುತ್ತಿರುತ್ತದೆ. ಆದರೆ ಅವುಗಳನ್ನು ಮೀರಿ ನಾವು ದಡ ಸೇರಬೇಕು. ಈ ಅಲೆಗಳು ಮದ್ಯೆಯೇ ಸಿಲುಕಿಕೊಂಡರೆ ಅನೇಕ ಸುಳಿಗಳ ನಡುವೆ ನಮ್ಮ ಬದುಕಿನ ದೋಣಿ ದಡ ಸೇರದೆ ಮುಳುಗಿ ಹೋಗಬಹುದು.
ಪ್ರಸ್ತುತ ವಾಸ್ತವ ಸಮಾಜದಲ್ಲಿ ನಾವು ಹೆಚ್ಚು ಕಲ್ಪನೆಗಳ ನಡುವೆ ಜೀವನ ಮಾಡುತ್ತೇವೆ ಎಂದುಕೊAಡರೆ ಸಮಸ್ಯೆಗಳ ಸರಣಿಯಲ್ಲಿ ಸಿಲುಕುವುದು ನಿಶ್ಚಿತ. ಭಾವನೆಗಳು ಬದುಕಿಗೆ ಬೇಕು. ನಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುವವರಿಗೆ ನಮ್ಮ ಭಾವನೆಗಳಿಂದ ಸ್ಪಂದಿಸಬೇಕು. ನಂಬಿಕೆಗೆ ಅರ್ಹರಾದವರನ್ನು ಗುರುತಿಸುವ ಕೌಶಲ್ಯ ಹೊಂದಿರಬೇಕು. ಸತ್ಯ -ಮಿಥ್ಯಗಳ ನಡುವಿನ ವ್ಯತ್ಯಾಸ ತಿಳಿಯುವ ಬುದ್ದಿವಂತಿಕೆ ಇರಬೇಕು. ಕಲ್ಪನೆಗೂ ಮತ್ತು ವಾಸ್ತವಕ್ಕೂ ಜೀವನದ ಅಂತರ ಗೊತ್ತಿರಬೇಕು.
ಈ ಎಲ್ಲ ಪರಿಜ್ಞಾನ ಇಂದಿನ ಯುವ ಪೀಳಿಗೆಗೆ ಅತ್ಯಂತ ಅಗತ್ಯವಾಗಿ ಇದ್ದಾಗ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯ ಸ್ಪರ್ಧೆ ನೀಡಲು ಸಾಧ್ಯ. ಬದುಕನ್ನು ಗೆಲ್ಲಲು ಸಾಧ್ಯ.ನಾವು ಪ್ರೀತಿ, ಪ್ರೇಮ ಅತಿಯಾದ ನಂಬಿಕೆ ಜೊತೆ ಬದುಕಲು ಹೋಗಿ ವಾಸ್ತವದಲ್ಲಿ ಏನಾಗುತ್ತಿದೆ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂದು ನಾವು ತಿಳಿಯುವ ಪ್ರಯತ್ನ ಮಾಡದೆ ಹೋದರೆ ನಮ್ಮನ್ನು ವಂಚಿಸುವವರೇ ಹೆಚ್ಚು.
ಒಮ್ಮೆ ಚಿಂತನೆಯ ದರ್ಪಣದಲ್ಲಿ ನೋಡುವ ಪ್ರಯತ್ನ ಮಾಡಿ. ನಿಮ್ಮನ್ನು ನೀವು ಎಚ್ಚರಗೊಳಿಸಿ. ಸದಾ ಜಾಗೃತಗರಾಗಿ ಬದುಕಿನ ಪ್ರತಿ ಹೆಜ್ಜೆ ದಾರಿ ತಪ್ಪದಂತೆ ನೋಡಿಕೊಳ್ಳಿ. ಸಮಯ ಮೀರಿದ ಮೇಲೆ ಪಾಠ ಕಲಿಯುವುದಕ್ಕಿಂತ ಜೀವನ ದಾರಿ ತಪುö್ಪವ ಮುನ್ನವೇ ನಾವು ಜೀವನ ಸತ್ಯವನ್ನು ಅರಿತರೆ ಒಳಿತಲ್ಲವೇ ಯೋಚಿಸಿ ನೋಡಿ…