ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ

ಬೆಂಗಳೂರು: ವಸಂತನಗರದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ದ. ಸಂ. ಸ ಚಳುವಳಿಗೆ 50 ವರ್ಷದ ಸಂಭ್ರಮಾಚರಣೆ ಮತ್ತು ಸಂವಿಧಾನದ ಸಂಪೂರ್ಣ ಅನುಷ್ಠಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗೋವಿಂದ್ ರಾಜ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳು:-

1) ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೆ ತರುವುದು ಸಂವಿಧಾನ ಬದ್ದವಾಗಿದ್ದು ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ದತ್ತಾಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರವು ಹೊರಡಿಸುವ ಅಧಿಕಾರವನ್ನು ಈ ಕುರಿತು ಆದೇಶ ಹೊಂದಿದೆ ಎಂದು 01/08/2024 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಅದರಂತೆ ರಾಜ್ಯ ಸರ್ಕಾರವು ಪರಿಶಿಷ್ಟ ಒಳಮೀಸಲಾತಿಗಾಗಿ ಸರ್ಕಾರಿ ಆದೇಶ ಹೊರಡಿಸಬೇಕು.

2) ಶೋಷಿತ ಜಾತಿಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಮತ್ತಿತರ ಕ್ಷೇತ್ರಗಳಲ್ಲಿ ಜಾತಿ ಜನಸಂಖ್ಯಾವಾರು ಮೀಸಲಾತಿ ಕಲ್ಪಿಸಲು ಕೋರ್ಟ್ ತೀರ್ಪುಗಳ ಪ್ರಕಾರ ಅಗತ್ಯವಿರುವ ದತ್ತಾಂಶಗಳಗಳನ್ನು ಒಳಗೊಂಡಿರುವ ರಾಜ್ಯ ಸರ್ಕಾರವು ರಚಿಸಿರುವ ಕಾಂತರಾಜ ಅಧ್ಯಕ್ಷತೆಯ ಆಯೋಗದ ಮತ್ತು ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷರಾದ ಜಯ ಪ್ರಕಾಶ ಹೆಗ್ಡೆ ನೇತೃತ್ವದ ಪರಿಷ್ಕತ ವರದಿಯನ್ನು ರಾಜ್ಯ ಸರ್ಕಾರವು ಅಂಗೀಕರಿಸಿ ಅನುಷ್ಠಾನಗೊಳಿಸಬೇಕು.

3) Goods & Services (ಸರಕು ಮತ್ತು ಸೇವೆ)ಗಳಲ್ಲಿ ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗಗಳಿಗೆ ಜನಸಂಖ್ಯಾವಾರು ಮೀಸಲಾತಿಯನ್ನು ರೂ.1 ಲಕ್ಷ ಗರಿಷ್ಠ ಮಿತಿ ಇರುವಂತೆ ಹೊರಡಿಸಲಾಗಿರುವ ಸರ್ಕಾರಿ ಆದೇಶ : SWD 34 BCA 2004 ದಿನಾಂಕ: 10/03/2005 ಕ್ಕೆ ಗರಿಷ್ಠ | ಕೋಟಿ ಮಿತಿ ಏರಿಕೆ ತಿದ್ದುಪಡಿ ಮಾಡಿ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಪರಿಶಿಷ್ಟರಿಗೆ ಸ್ವಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕು.

4) SCSP & TSP ಕಾಯ್ದೆ ಸೆಕ್ಷನ್ 7(C) ಪ್ರಕಾರ ಪರಿಶಿಷ್ಟರ ಸಾವಿರಾರು ಕೋಟಿ ಅನುದಾನವು ಇತರ ಎಲ್ಲಾ ಜಾತಿಗಳು ಮತ್ತು ಧರ್ಮ ದವರಿಗೆ ಡೈವರ್ಟ್ ಆಗುತ್ತಿದೆ. ಈ ದುರ್ಭಳಿಕೆ ತಡೆಯಲು ಸೆಕ್ಷನ್ 7(C) ರದ್ದು ಗೊಳಿಸಬೇಕು. ಸೆಕ್ಷನ್ 7(d) ರದ್ದುಗೊಳಿಸಿದ್ದು ಸ್ವಾಗತಾರ್ಹ.

5) PTCL 5 ជំថ្ម 3(1) (b) កំ “Certain Lands” ಎಂದು ತಿದುಪಡಿ ಮಾಡುವ ಮೂಲಕ ಭೂ ಸುಧಾರಣ ಕಾಯ್ದೆ, ಇನಾಂ ರದ್ದಿ ಯಾತಿ ಕಾಯ್ದೆಗಳ ಪರಿಶಿಷ್ಟ ಗೇಣಿದಾರರಿಗೂ ಮತ್ತು ತೋಟಿ, ಕುಲವಾಡಿಕೆ ಮತ್ತು ತಳವಾರಿಕೆ ಗ್ರಾಮೀಣ ಸೇವೆಗಳ ಭೂಮಿ ಹೊಂದಿದ ಪರಿಶಿಷ್ಟರಿಗೂ ಸದರಿ ಕಾಯ್ದೆ ಅನ್ವಯಿಸುವಂತೆ ಮುಂದಿನ ಅಧಿವೇಶನದಲ್ಲಿ ಕಾನೂಣು ಕ್ರಮ ಕೈಗೊಳ್ಳಬೇಕು.

6 ) PTCL ಕಾಯ್ದೆ ಅಡಿಯಲ್ಲಿ ಪರಿಶಿಷ್ಟರು ಮೊದಲ ಬಾರಿಗೆ AC ಕೋರ್ಟ್ ಗೆ ಸಲ್ಲಿಸಲು శాలమితి ಅನ್ವಯಿಸುದಿಲ್ಲವೆಂದು ಸೆಕ್ಷನ್ (5)ಕ್ಕೆ ಸರ್ಕಾರವು ತಿದ್ದುಪಡಿ ತಂದಿದ್ದು 2023 ರಲ್ಲಿ ಸಂಪೂರ್ಣ ಪ್ರಯೋಜನಕಾರಿಯಾಗಿಲ್ಲ. ಆದ್ದರಿಂದ ಸದರಿ ಸೆಕ್ಷನ್ಗೆ

ಇನ್ನಷ್ಟು ತಿದ್ದುಪಡಿಗಳನ್ನು ತರಬೇಕು ಮತ್ತು ನೆಕ್ಕಂಟಿ ರಾಮಲಕ್ಷ್ಮಿ V/s ಕರ್ನಾಟಕ ಸರ್ಕಾರ ತೀರ್ಪಿಗೆ ಸುಪ್ರೀಂ ಕೋರ್ಟ್ನಲ್ಲಿ ರಿವ್ಯು ಪಟಿಷನ್ ಸಲ್ಲಿಸಬೇಕು.

ಸರ್ಕಾರವು PTCL ಕಾಯ್ದೆ ಸೆಕ್ಷನ್ (5)ಕ್ಕೆ 2023 ರಲ್ಲಿ ತಂದಿರುವ ತಿದ್ದುಪಡಿಯು ಡಿಲೆ ಸಮಸ್ಯೆಗೆ ಪರಿಹಾರ ನೀಡಿಲ್ಲವೆಂದು ಹೈಕೋರ್ಟ್ ವಿಭಾಗಿಯ ಪೀಠ 2024ರಲ್ಲಿ ತನ್ನ ಗೌರಮ್ಮ V/s ಜಿಲ್ಲಾಧಿಕಾರಿ ಹಾವೇರಿ ತೀರ್ಪು ನೀಡಿದ್ದು ಇದಕ್ಕೆ ಪರಿಹಾರವಾಗಿ ಸರ್ಕಾರವು ಹೈಕೋರ್ಟ್ನಲ್ಲಿ ರಿವ್ಯು ಪಿಟಿಷನ್ ಸಲ್ಲಿಸಬೇಕು. ಮತ್ತು ಸೆಕ್ಷನ್ (5) ಕ್ಕೆ ಇನ್ನಷ್ಟು ತಿದ್ದುಪಡಿಗಳನ್ನು ತರಬೇಕು.

8) ಸ.ಕ.ಇಲಾಖೆಯ ಎಲ್ಲಾ ಕ್ರೈಸ್ ವಸತಿ ಪ್ರೌಢಶಾಲೆಗಳನ್ನುವಸತಿ ಕಾಲೇಜಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಮತ್ತು ಎಲ್ಲಾ ವಸತಿ ಕಾಲೇಜುಗಳಲ್ಲಿ ನೂತನವಾಗಿ ಪಿ.ಯು.ಸಿ. ಕಾರ್ಮಸ್ ವಿಭಾಗವನನ್ನು ಆರಂಭಿಸಬೇಕು. ಪ್ರಸುತ್ತ ಸಾಲಿನಲ್ಲಿ ಆರಂಬಿಸಿರುವ CET/JEE/NEET/ ಉಚಿತ ತರಬೇತೆ ಯೋಜನೆಯನ್ನು ಬಜೆಟ್ನಲ್ಲಿ ಸೇರಿಸಿ ಶಾಶ್ವತ ಯೋಜನೆ ರೂಪಿಸಬೇಕು.ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು 17% ಗೆ ಮತ್ತು

9) ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು 7% ಗೆ ಏರಿಕೆ ಮಾಡಿ ರಾಜ್ಯ ಸರ್ಕಾರವು 2022ರಲ್ಲಿ ಸರ್ಕಾರಿ ಆದೇಶ ಹೊರಡಿಸಿದ್ದು ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಮೀಸಲಾತಿಯ ಪ್ರಮಾಣವನ್ನು 50% ನಿಂದ 56% ಗೆ ಏರಿಕೆ ಆಗಿದ್ದು ಇದನ್ನು ರಕ್ಷಿಸಲು ಕೇಂದ್ರ ಸರ್ಕಾರವು ಸದರಿ ಏರಿಕೆಯನ್ನು ಸಂವಿಧಾನದ 9ನೇ ಷೆಡ್ಯೂಲ್ಗೆಸೇರಿಸುವಂತೆ ರಾಜ್ಯ ಆಗ್ರಹಿಸಬೇಕು. ಸರ್ಕಾರವು ಕೇಂದ್ರವನ್ನು

10) ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದವರು ಮತ್ತು ನೀಡಿದ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಬೇಕು.

11) ರಾಜ್ಯ ಸರ್ಕಾರವು 2023ರಲ್ಲಿ ಹೊರಮೂಲ (Out Source) ನೇಮಕಾತಿಯಲ್ಲಿ ST/SC/OBC/ ಮಹಿಳೆರಿಗೆ ಹೊರಡಿಸಿರುವ ಮೀಸಲಾತಿ ಆದೇಶದಲ್ಲಿ ಇರುವ ದೋಷಗಳನ್ನು ಸರಿ ಪಡಿಸಿ ತಿದ್ದುಪಡಿ ಆದೇಶ ಹೊರಡಿಸಬೇಕು.

12) ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989 ಅಡಿಯಲ್ಲಿ ಕೇಂದ್ರ ಸರ್ಕಾರವು ಕಲಂ 18ಎ ಸೇರ್ಪಡೆ ಗೊಳಿಸಿದ್ದು ಇದನ್ನು ಕರ್ನಾಟಕದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ, ಸೆಷನ್ ಕೋರ್ಟ್ಗಳಲ್ಲಿ, ನ್ಯಾಯಾಂಗ ಇಲಾಖೆಯಲ್ಲಿ ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಬೇಕು.

13) ಕರ್ನಾಟಕ ರಾಜ್ಯದಲ್ಲಿ ಹಾಸನ, ಬೆಂಗಳೂರು ಸೇರಿದಂತೆ 7ಜಿಲ್ಲೆಗಳ 10 ಊರುಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ರವರು ಬೇಟಿ ನೀಡಿದ್ದು ಅಲ್ಲೆಲ್ಲ ಸ್ಮಾರಕಗಳ ನಿರ್ಮಾಣಕ್ಕಾಗಿ ಸ್ವಲ್ಪ ಸರ್ಕಾರಿ ಭೂಮಿ ಸ್ವಲ್ಪ ಅನುದಾನ ಮಂಜೂರಿ ಮಾಡಿ ಸರ್ಕಾರಿ ಆದೇಶವಾಗಿದ್ದು ಇದು ಸಾಲದಾಗಿದೆ. ಪ್ರಸುತ್ತ ಸರ್ಕಾರವು 10 ಸ್ಮಾರಕಗಳಿಗೆ ತಲಾ ಹೆಚ್ಚುವರಿ 10 ಎಕರೆ ಸರ್ಕಾರಿ ಭೂಮಿ ಮತ್ತು ತಲಾ 10 ಕೋಟಿ ಹೆಚ್ಚುವರಿ ಅನುಧಾನವನ್ನು SCSP & TSP ಯೋಜನೆ ಅಡಿಯಲ್ಲಿ ಮಂಜೂರಿ ಮಾಡಬೇಕು.14)ಭಾರತ ಸರ್ಕಾರವು UGC ಪ್ರಕಾರ ಏಕಕಾಲದಲ್ಲಿ ಒಬ್ಬ ವಿದ್ಯಾರ್ಥಿ ಎರಡು ಡಿಗ್ರಿ ಅಧ್ಯಯನ ಮಾಡಲು ಅವಕಾಶ ನೀಡಿದೆ. ಆದರೆ ಸರ್ಕಾರವು ಒಂದು ಡಿಗ್ರಿಗೆ ಮಾತ್ರ ವಿದ್ಯಾರ್ಥಿ ವೇತನವನ್ನು ಬಡ ಪರಿಶಿಷ್ಟರಿಗೆ ಮಂಜೂರು ಮಾಡುತ್ತದೆ. ಪರಿಶಿಷ್ಟರಲ್ಲಿ Employability ಹೆಚ್ಚಿಸಲು ರಾಜ್ಯ ಸರ್ಕಾರವು ಬಡಪರಿಶಿಷ್ಟರಿಗೆ ಎರಡನೇ ಡಿಗ್ರಿ ಪಡೆಯಲು ಸಂಪೂರ್ಣ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಬೇಕು ಮತ್ತು ಉಚಿತ ಪ್ರವೇಶಾತಿಗಾಗಿ Freeship ಕಡ್ಡಾಯಗೊಳಿಸಬೇಕು. Card ಯೋಜನೆಯನ್ನು

14)ಬೆಲೆ ಏರಿಕೆ ಮತ್ತು ಹಣದುಬ್ಬರಗಳ ಹಿನ್ನೆಲೆಯಲ್ಲಿ ಸರ್ಕಾರಿ ಹಾಸ್ಟೆಲ್ಗಳಲ್ಲಿ ಭೋಜನೆ ವೆಚ್ಚವನ್ನು ಕನಿಷ್ಠ ಮಾಸಿಕ ರೂ.3000/- ಕ್ಕೆ ಏರಿಸಬೇಕು ಮತ್ತು ಬಡ ಪರಿಶಿಷ್ಟ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೇಖನ ಸಾಮಗ್ರಿ ಮತ್ತಿತರ ಸರಕುಗಳನ್ನು ರಾಜ್ಯ ಸರ್ಕಾರವು ಮಂಜೂರು ಮಾಡಬೇಕು.

15) ಬಡನದಿಂದಾಗಿ ಬಡ Dropouts ಪರಿಶಿಷ್ಟರಲ್ಲಿ ಕಾಲೇಜ್ ಇಂತಹ ಅಸಹಾಯಕರು ತಮ್ಮ ತಮ್ಮ ಸ್ವಉದ್ಯೋಗ ಕ್ಷೇತ್ರಗಳಲ್ಲಿ ಸಾಮರ್ಥ್ಯ ಮತ್ತು ಕ್ಷಮತೆಗಳ ವೃದ್ಧಿಗಾಗಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ employability ಹೆಚ್ಚಿಸಲು Dropouts ಗಳು ಸ್ನಾತಕ ಮತ್ತು ಸ್ನಾತಕೊತ್ತರ ಪದವಿಗಳನ್ನು ಉಚಿತವಾಗಿ ಪಡೆಯಲು ದೂರ ಶಿಕ್ಷಣ (Distance/Correspondence) ಮಾತ್ರ ಸಾಧ್ಯ. ಇದಕ್ಕಾಗಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಕಾಲೇಜ್ ಶಿಕ್ಷಣ ಇಲಾಖೆ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಮತ್ತು ಮೈಸೂರಿನ ಲ್ಲಿರುವ ಕರ್ನಾಟಕ ರಾಜ್ಯ Open University ಮತ್ತು ಬೆಂಗಳೂರಿನಲ್ಲಿರುವ Gandhi Open University Indira ಗಳ ಸಂಯುಕ್ತ ಆಶ್ರಯದಲ್ಲಿ “ಮರಳಿ ಬಾ ದೂರ ಶಿಕ್ಷಣ ಕಾಲೇಜ್ ಶಿಕ್ಷಣಕ್ಕೆ” ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರವು ಆರಂಬಿಸಬೇಕು.

16)ರಾಜ್ಯದ್ಯಂತ ಪರಿಶಿಷ್ಟ ವಸತಿ ಹೀನರಿಗೆ ವಸತಿ, ಭೂಹೀನರಿಗೆ ಭೂಮಿಯನ್ನು ಉಚಿತವಾಗಿ ಮಂಜೂರು ಮಾಡಬೇಕು.

17)ಬಡ ಪರಿಶಿಷ್ಟ ಮಹಿಳೆಯರು ಉದ್ಯಮಿಗಳಾಗಲು ಅವರಿಗೆ 0% ಬಡ್ಡಿದರ ಮತ್ತು KIADB ಔದ್ಯೋಗಿಕ ನಿವೇಶನಗಳ ಮತ್ತು ಮಿಷನರಿಗಳ ಮಂಜೂರಾತಿಯಲ್ಲಿ 95% ಸಬ್ಸಿಡಿ ನೀಡಿ ಪ್ರೇರಣೆ ನೀಡಬೇಕು.

18)ಮೈಸೂರು ರಾಜ್ಯದಲ್ಲಿ ಶೋಷಿತ ಜಾತಿಗಳಿಗೆ 75% ಮೀಸಲಾತಿ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರವರ ಜನ್ಮದಿನ ಜೂನ್ 4ರಂದು ರಜೆ ರಹಿತವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ವರ್ಷ ಜನ್ಮದಿನಾಚರಣೆ ಅಂಗವಾಗಿ ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು.

19)ಭಾರತದ ಆದಿ/ಮೂಲ ನಿವಾಸಿಗಳ ಮೂಲ ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕ ಚಂದ್ರಗುಪ್ತ ಮೌರ್ಯ ಚಕ್ರವರ್ತಿಯ ಸಮಾಧಿಯು ಕರ್ನಾಟಕ ರಾಜ್ಯದಲ್ಲಿದ್ದು ಆ ಊರಿನಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ “ಚಂದ್ರಗುಪ್ತ ಮೌರ್ಯ ಸ್ಮಾರಕ, ವಸ್ತು ಸಂಗ್ರಹಾಲಯ ಮತ್ತು ಸಂಶೋಧನ ಕೇಂದ್ರ” ವನ್ನು ಸ್ಥಾಪಿಸಲು 10 ಎಕರೆಸಕಾರಿ ಭೂಮಿ ಮತ್ತು 50 ಕೋಟಿ ಅನುಧಾನವನ್ನು ಮಂಜೂರು ಮಾಡಬೇಕು.

21) ಮಾನವಿಯತೆ ಮತ್ತು ಸಮಾನತೆಯ ಪ್ರತೀಕ ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಬೌದ್ಧ ಉಪಾಸಕ ಅಶೋಕ ಚಕ್ರವರ್ತಿಯ ಸ್ಮಾರಕ ವನ್ನು ರಾಜ್ಯ ಸರ್ಕಾರವು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಿ ಪ್ರತಿ ವರ್ಷ ಅಶೋಕ ಚಕ್ರವರ್ತಿಯ ಜನ್ಮದಿನವನ್ನು ರಜೆ ರಹಿತವಾಗಿ ಆಚರಿಸಬೇಕು. ಸಮಾವೇಶದಲ್ಲಿ ಸಂಘಟನೆಯ ಸಂಚಾಲಕ ವೆಂಕಟೇಶ್, ರಮೇಶ್ ಕೋಟ್ಯಾನು, ಬಿ ಎಂ ವೆಂಕಟೇಶ್, ಅಂಬಣ್ಣ, ಚಲವಾದಿ ರಾಘವೇಂದ್ರ, ಕಂಠೀರವ ಹೊಸಮನಿ, ಧರ್ಮಯ್ಯ, ರಾಯಪ್ಪ, ಪ್ರಕಾಶ್, ರಾಜಾರಾಮ್, ಕೆ ಮುನಿರಾಜ್, ಮಂಜುನಾಥ ಕರ್ಜೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *