ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ SR ಶ್ರೀನಿವಾಸ್ ವಿರೋಧ

ಜಾತಿಗಣತಿ ಅನುಷ್ಠಾನಕ್ಕೆ ಕಾಂಗ್ರೆಸ್ ಶಾಸಕ SR ಶ್ರೀನಿವಾಸ್ ವಿರೋಧ

ತುಮಕೂರು: ಜಾತಿಗಣತಿ ವರದಿ ಅನುಷ್ಠಾನಕ್ಕೆ ತರುವ ವಿಚಾರದ ಕುರಿತು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಸ್ಆರ್ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದಾರೆ.

ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಜಾತಿಗಣತಿ ಅನುಷ್ಠಾನ ವಿರೋಧಿಸಿದ್ದು, ವರದಿಯ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಂತರ ಕ್ಯಾಬಿನೆಟ್ಗೆ ತರಲಿ ಎಂದು ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿ. ಎಲ್ಲಾ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು. ಆ ರೀತಿಯಲ್ಲಿ ವರದಿಯನ್ನು ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದರು.

ನಾನು ಹಿಂದೆ ಇದರ ಬಗ್ಗೆ ಒಂದು ಸಾರಿ ಪ್ರಸ್ತಾಪ ಮಾಡಿದ್ದೆ. ನಮ್ಮ ಒಕ್ಕಲಿಗರಲ್ಲಿ ಒಳಪಂಗಡಗಳು ಇವೆ. ಲಿಂಗಾಯತರಲ್ಲೂ ಒಳಪಂಗಡಗಳು ಇವೆ. ಕುಂಚಿಟಿಗರು ಕೇವಲ ಕುಂಚಿಟಿಗ ಅಂತ ಬರೆದಿರುತ್ತಾರೆ. ನಮ್ಮಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಬರೆದಿರಲ್ಲ. ಸರ್ಪ ಒಕ್ಕಲಿಗರು ಇದ್ದಾಗ ಕೇವಲ ಸರ್ಪರು ಅಂತ ಬರೆಯುತ್ತಾರೆ. ಅದ್ಯಾವುದು ಕೂಡ ಆಗ ನಮ್ಮ ಸಮುದಾಯದ ಪಟ್ಟಿಯಲ್ಲಿ ಬರಲ್ಲ. ಇವರು ವರದಿ ತಯಾರು ಮಾಡಿದವರು ಕೂಡಾ ಕುಂಚಿಟಿಗ ಅಂತ ಬರೆದುಕೊಂಡು ಹೋಗಿರುತ್ತಾರೆ.

ನಮ್ಮಲ್ಲಿ ವಿರೋಧ ಯಾಕೆ ಅಂದರೆ ಒಟ್ಟಿಗೆ ಒಕ್ಕಲಿಗ ಅಂತ ಮಾಡಲಿ ಅಂತ. ಲಿಂಗಾಯತ ಸಮುದಾಯದಲ್ಲೂ ಸಹ ಅದೇ ರೀತಿ ಆಗಿರಬಹುದು. ಅವರಲ್ಲಿಯೂ ಅನೇಕ ಒಳಪಂಗಡಗಳು ಇವೆ. ಆದ್ದರಿಂದ ಅದನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರಾ ಅನ್ನೋ ಅನುಮಾನ ಇದೆ. ಮಾಡದೇ ಇದ್ದಾಗ ಜನಾಂಗಕ್ಕೆ ಅನ್ಯಾಯ ಆಗುತ್ತೆ ಅನ್ನುವ ಕಳಕಳಿ ಎಲ್ಲರಲ್ಲಿ ಇದೆ. ಆ ದೃಷ್ಟಿ ಇಟ್ಟುಕೊಂಡು ಈ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ ಅಂತ ನನಗೆ ಅನಿಸುತ್ತಿದೆ. ವರದಿ ಯಾವ ರೀತಿ ತಯಾರು ಮಾಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದುವರೆಗೂ ಯಾರಿಗೂ ಗೊತ್ತಿಲ್ಲ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆ ರೀತಿಯಾದರೇ ಅನ್ಯಾಯ ಆಗುತ್ತದೆ ಎಂದರು.

ಸಿಎಲ್ಪಿ ಸಭೆಯಲ್ಲಿ ವರದಿ ಬಗ್ಗೆ ಚರ್ಚೆ ಆಗಲಿ ಎಂದು ಶಾಸಕರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಎಲ್ಲರಿಗೂ ಕೂಡ ಅದೊಂದು ದುಗುಡ ಇದೆ. ಯಾವ ರೀತಿಯಾಗಿ ಅವರು ತಯಾರು ಮಾಡಿದ್ದಾರೆ ಅನ್ನೊದು ನಮಗ್ಯಾರಿಗೂ ಸ್ಪಷ್ಟತೆ ಇಲ್ಲ. ಹಾಗಾಗಿ ಅದರ ಬಗ್ಗೆ ಸ್ಪಷ್ಟನೆ ನೀಡಿ, ಅದರ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡಿ ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *