ಅತ್ಯಾಚಾರ ಪ್ರಕರಣದಲ್ಲಿ (Rape Case) ಬಂಧಿತರಾಗಿರುವ ಶಾಸಕ ಮುನಿರತ್ನ (MLA Muniratna) ಸಧ್ಯ ಎಸ್ಐಟಿ (SIT) ಕಸ್ಟಡಿಯಲ್ಲಿದ್ದು, ಇಂದು 42 ನೇ ಎಸಿಎಂಎಂ ನ್ಯಾಯಾಲಯದ (42nd ACMM Court) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರ (Judge) ಅನುಮತಿ ಪಡೆದು ಮುನಿರತ್ನ ಅವರ ಡಿಎನ್ ಎ ಟೆಸ್ಟ್ (DNA Test) ಮಾಡಿಸುವ ಉದ್ದೇಶದಿಂದ ಎಸ್ಐಟಿ ಅಧಿಕಾರಿಗಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಡಿಎನ್ ಎ ಪರೀಕ್ಷೆಗೆ ಅನುಮತಿ
ಮುನಿರತ್ನ ಅವರ ಡಿಎನ್ ಎ ಪರೀಕ್ಷೆ ಮಾಡಿಸಲು ನ್ಯಾಯಾಧೀಶರ ಅನುಮತಿ ಕೇಳಲು ಎಸ್ಐಟಿ ಬಂದಿದ್ದರು. ಈ ವೇಳೆ ನ್ಯಾಯಲಯ ಡಿಎನ್ ಎ ಪರೀಕ್ಷೆ ನಡೆಸಲು ಅನುಮತಿ ನೀಡಿತು. ನ್ಯಾಯಾಧೀಶರ ಸಮ್ಮುಖದಲ್ಲಿಯೇ ಮುನಿರತ್ನ ರಕ್ತದ ಮಾದರಿ ಸಂಗ್ರಹ ಮಾಡಲು ಮುಂದಾದರು.
ಸ್ಯಾಂಪಲ್ಸ್ ತೆಗೆದುಕೊಳ್ಳಲು ಎಸ್ಐಟಿ ಅಧಿಕಾರಿಗಳಿಗೆ ಸೂಚನೆ
ಎಸ್ ಐಟಿ ಅಧಿಕಾರಿಗಳು ವೈದ್ಯರೊಂದಿಗೆ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಮುನಿರತ್ನವ ಅವರು, ತಮ್ಮ ವಕೀಲರು ಬರಬೇಕು, ಅವರ ಮುಂದೆಯೇ ಸ್ಯಾಂಪಲ್ಸ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮನವಿಯನ್ನ ಪುರಸ್ಕರಿಸಿ, ವಕೀಲರು ಬಂದ ಮೇಲೆ ಸ್ಯಾಂಪಲ್ಸ್ ತೆಗೆದುಕೊಳ್ಳಲು ಎಸ್ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಏನಿದು ಪ್ರಕರಣ?
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೋವಿಡ್ ಸಮಯದಲ್ಲಿ ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ಮುನಿರತ್ನ ಕರೆ ಮಾಡಿದ್ದರು. ಅದರಂತೆ ಭೇಟಿಯಾದ ಸಂತ್ರಸ್ತೆ ಹಾಗೂ ಮುನಿರತ್ನ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಾಗ ವಿಡಿಯೊ ಕಾಲ್ ಮೂಲಕ ಮಾತನಾಡುತ್ತಿದ್ದರು. ಹೀಗೊಂದು ದಿನ ನಗ್ನವಾಗಿ ವಿಡಿಯೊ ಕರೆ ಮಾಡುವಂತೆ ಒತ್ತಾಯಿಸಿದಾಗ ಸಂತ್ರಸ್ತೆ ನಿರಾಕರಿಸಿದ್ದರಂತೆ.
ಸಂತ್ರಸ್ತೆ ಆಕ್ಷೇಪ
ಇದಾದ ಬಳಿಕ ಸಂತ್ರಸ್ತೆಯನ್ನು ಗೋಡೌನ್ಗೆ ಕರೆಸಿಕೊಂಡು ನಿನ್ನ ನೋಡಿದರೆ ಮೈ ಜುಮ್ ಎನಿಸುತ್ತೆ ಎಂದೇಳಿ ತಬ್ಬಿಕೊಳ್ಳಲು ಮುಂದಾಗಿದ್ದರಂತೆ. ಇದಕ್ಕೆ ಸಂತ್ರಸ್ತೆ ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲಾ ಕಾಮನ್ ಎಂದಿದ್ದಾರೆ. ನಾನು ಕಿರುಚಿಕೊಳ್ಳುತ್ತೇನೆ ಎಂದಾಗ ನಾನು ಶಾಸಕ, ಅಪಾರ ಜನಬೆಂಬಲವಿದೆ ಸುಮ್ಮನಿದ್ದರೆ ಸರಿ , ಇಲ್ಲವಾದರೆ ನಿನ್ನ ವಿರುದ್ಧವೇ ಕಂಪ್ಲೆಂಟ್ ನೀಡುತ್ತೇನೆ ಎಂದು ಹೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರಂತೆ. ಅತ್ಯಾಚಾರದ ಬಳಿಕ ಈ ರೂಂನಲ್ಲಿ ಸೀಕ್ರೆಟ್ ವೀಡಿಯೊ ರೆಕಾರ್ಡರ್ ಇಟ್ಟಿದ್ದು, ಎಲ್ಲಾ ದೃಶ್ಯಗಳು ಸೆರೆಯಾಗಿದೆ. ನಿನ್ನ ವಿಡಿಯೊ ಎಡಿಟ್ ಮಾಡಿ ಹಂಚುತ್ತೇನೆ. ಹೇಳಿದಂತೆ ಕೇಳಬೇಕು ಅಂತಾ ಹನಿಟ್ರ್ಯಾಪ್ ಮಾಡುವಂತೆ ಹೇಳಿ ನನ್ನನ್ನು ಬಳಸಿಕೊಂಡರು ಎಂದು ಸಂತ್ರಸ್ತೆ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಬ್ಲ್ಯಾಕ್ಮೇಲ್ ಆರೋಪ
ಜತೆಗೆ ಚಿತ್ರೀಕರಿಸಿದ ವಿಡಿಯೊಗಳನ್ನು ಟಿವಿಯಲ್ಲಿ ಹಾಕಿ ತೋರಿಸುತ್ತಾ, 2020 ರಿಂದ 2022ರ ಅವಧಿಯಲ್ಲಿ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಇದೇ ವೇಳೆ ಹನಿಟ್ರ್ಯಾಪ್ಗು ಬಳಕೆ ಮಾಡಿಕೊಂಡಿದ್ದಾರೆ. ಹೇಳಿದಂತೆ ಕೇಳಲಿಲ್ಲ ಅಂದರೆ ಗಂಡ ಮತ್ತು ಮಕ್ಕಳಿಗೆ ವಿಡಿಯೊ ತೋರಿಸೋದಾಗಿ ಬೆದರಿಕೆ ಹಾಕಿದ್ದಾರೆ. ತನಗೆ ಪರಿಚಯ ಇರುವ ಮತ್ತೊಬ್ಬ ಮಹಿಳೆ ಜತೆ ಸೇರಿ ಆತ ಹೇಳಿದವರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮರ್ಯಾದೆ ಹಾಗು ಪ್ರಾಣಕ್ಕೆ ಅಂಜಿ ಶಾಸಕ ಮುನಿರತ್ನ ಹೇಳಿದಂತೆ ಕೇಳಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.