ಬೆಂಗಳೂರು: ದಕ್ಷಿಣ ಭಾರತದ 09 ಕರಾವಳಿ ರಾಜ್ಯಗಳ ಪೈಕಿ 4-5 ರಾಜ್ಯಗಳಿಗೆ ಮತ್ತು ಚಂಡಮಾರುತದ ಭೀತಿ ಎದುರಾಗಿದೆ. ಕೇರಳದ ದಕ್ಷಿಣ ಕರಾವಳಿ ಹಾಗೂ ಶ್ರೀಲಂಕಾದಿಂದ ದೂರದಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಇದು ಆರಂಭಿಕ ಹಂತದಲ್ಲಿದೆ.
ತೀವ್ರಗೊಂಡರೆ ಕರ್ನಾಟಕ ಸೇರಿದಂತೆ ವಿವಿಧ ಕರಾವಳಿ ರಾಜ್ಯಗಳಿಗೆ ಮತ್ತೆ ಭಾರೀ, ಪ್ರವಾಹ ಸಂಕಷ್ಟ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸದ್ಯದ ಕರ್ನಾಟಕದ ಸಿನಾಪ್ಟಿಕ್ ವೈಶಿಷ್ಟ್ಯಗಳ ಬಗ್ಗೆ ಹವಾಮಾನ ಇಲಾಖೆ ಅಪ್ಡೇಟ್ ನೀಡಿದೆ. ದಕ್ಷಿಣ ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆ ಉಂಟಾಗಿದೆ. ಸದ್ಯ ಅದು ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿದೆ. ಸಮುದ್ರ ಮಟ್ಟದಿಂದ ಬೋರಬ್ಬರಿ ಸರಾಸರಿ 3.1 ಕಿಲೋ ಮೀಟರ್ ಎತ್ತರದ ವರೆಗೆ ಇದೆ ಎಂದು ಐಎಂಡಿ ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥರು ಆದ ವಿಜ್ಞಾನಿ ಡಾ.ಎನ್.ಪುವಿಯರಸನ್ ಮಾಹಿತಿ ನೀಡಿದ್ದಾರೆ.
ಬಂಗಾಳಕೊಲ್ಲಿಯ ಭಾಗದಲ್ಲಿ ಈ ಚಂಡಮಾರುತ ಹೆಚ್ಚು ಕೇಂದ್ರೀಕೃತವಾಗಿದೆ ಎನ್ನಲಾಗಿದೆ. ಚಂಡಮಾರುತದ ಪರಿಚಲನೆಯಿಂದ ಆಗ್ನೇಯ ಬಂಗಾಳ ಕೊಲ್ಲಿಯ ಸಮೀಪ ದಕ್ಷಿಣ ತಮಿಳುನಾಡಿಗೆ ಒಂದು ಟ್ರಫ್ (ಬಿರುಗಾಳಿ)
ಸಾಗಲಿದೆ. ಈ ಟ್ರಪ್ ಸಮುದ್ರ ಮಟ್ಟದಿಂದ ಸರಾಸರಿ 3.1 ಕಿಲೋ ಮೀಟರ್ವರೆಗೆ ಇದ್ದು, ಅದು ಸಾಗುವಾಗ ದಕ್ಷಿಣ ಭಾಗಕ್ಕೆ ವಾಲಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಯಾವೆಲ್ಲ ರಾಜ್ಯಗಳಿಗೆ ಚಂಡಮಾರುತ ಎಫೆಕ್ಟ್!
ಈ ಹವಾಮಾನ ವೈಪರಿತ್ಯದಿಂದ ದೇಶದ 09 ಕರಾವಳಿ ರಾಜ್ಯಗಳಾದ ಗೋವಾ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಓಡಿಶಾ ರಾಜ್ಯಗಳ ಪೈಕಿ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಕರ್ನಾಟಕ ಸೇರಿ ನಾಲ್ಕರಿಂದ ಐದು ರಾಜ್ಯಗಳಿಗೆ ಪರಿಣಾಮ ಭೀರಬಹುದು ಎನ್ನಲಾಗಿದೆ.
ಇದೇ ಅವಧಿಯಲ್ಲಿ ಉತ್ತರ ಭಾಗದ ರಾಜ್ಯಗಳಲ್ಲಿ ಒಣಹವೆ, ಶುಷ್ಕ ವಾತಾವರಣ, ಬೆಳಗ್ಗೆ ಹಾಗೂ ರಾತ್ರಿ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗಲಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಸದ್ಯ ಆರಂಭಿಕ ಹಂತದಲ್ಲಿರುವ ಈ ಚಂಡಮಾರುತ ಪರಿಚಲನೆ ಇನ್ನೂ ಕೆಲವೇ ದಿನಗಳಲ್ಲಿ ತೀವ್ರಗೊಂಡರೆ ಗಾಳಿಯ ವೇಗ ಹೆಚ್ಚಾಗುತ್ತದೆ. ಕರಾವಳಿ ರಾಜ್ಯಗಳ ಹತ್ತಾರು ಜಿಲ್ಲೆಗಳಿಗೆ ಭಾರೀ ಮಳೆ, ಅತಿವೃಷ್ಟಿ ಜೊತೆಗೆ ಪ್ರವಾಹ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ. ಅಪಾರ ಪ್ರಮಾಣದಲ್ಲಿ ಹಾನಿ ಆಗಲಿದೆ. ಈ ಆತಂಕದಲ್ಲಿ ಕರಾವಳಿ ರಾಜ್ಯಗಳ ಜನರಿದ್ದಾರೆ. ಒಡಿಶಾದಲ್ಲಿ ಡಾನಾ ಎಫೆಕ್ಟ್ಗೆ ರೂ.600 ಕೋಟಿಯಷ್ಟು ನಷ್ಟ
ಇತ್ತೀಚೆಗೆ ಅಬ್ಬರಿಸಿದ್ದ ‘ಡಾನಾ’ ಚಂಡಮಾರುತದಿಂದ ಒಡಿಶಾ ರಾಜ್ಯ ಸರ್ಕಾರ ಹಾನಿ ನಷ್ಟ ಮೌಲ್ಯಮಾಪನ ಮಾಡಿದೆ. ಒಟ್ಟು 600 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ವರದಿ ತಯಾರಿಸಿದೆ. ಅದನ್ನು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ರಾಜ್ಯ ವಿಪುತ್ತು ಖಾತೆ ಸಚಿವರು ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿರಲಿದೆ?
ಮಳೆಗಾಲದ ಹೊತ್ತಿನಲ್ಲಿ ಸಮುದ್ರಮಟ್ಟದಲ್ಲಿ ಚಂಡಮಾರುತ ಪರಿಚಲನೆ ಆಗಾಗ ಏಳುವುದು ಸಾಮಾನ್ಯ. ಅವು ತೀವ್ರಗೊಂಡರೆ ಮಾತ್ರವೇ ಆತಂಕ. ಇದೀಗ ಹೊಸ ಚಂಡಮಾರುತ ಅಬ್ಬರಿಸುವ ಲಕ್ಷಣಗಳು ಆರಂಭಿಕ ಹಂತದಲ್ಲಿಯೇ ಗೋಚರಿಸಿವೆ. ಇದರಿಂದ ಕರ್ನಾಟಕ ದಕ್ಷಿಣ ಒಳನಾಡಿನ ಒಂದಷ್ಟು ಜಿಲ್ಲೆಗಳಿಗೆ ಮಳೆ ಬರುವ ಲಕ್ಷಣ ಇದೆ. ಸದ್ಯ ಭಾರೀ ಮಳೆಯ ಲಕ್ಷಣಗಳು ಇಲ್ಲ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಚಂಡಮಾರುತ
ಹೌದು, ಅಟ್ಲಾಂಟಿಕ್ ಚಂಡಮಾರುತದ ಋತುವಿನ 18ನೇ ಹೆಸರಿನ ‘ಉಷ್ಣವಲಯದ ಚಂಡಮಾರುತ ರಾಫೆಲ್’ ಕೆರಿಬಿಯನ್ ಮೇಲೆ ಉಷ್ಣವಲಯದ ಖಿನ್ನತೆಯು ಬಲಗೊಂಡಂತೆ ಸೋಮವಾರ ರೂಪುಗೊಂಡಿದೆ. ಇದರಿಂದ ಮೆಕ್ಸಿಕೋ ದೇಶಕ್ಕೆ ಹೆಚ್ಚು ತೊಂದರೆ ಆಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ (NHC) ಮುನ್ಸೂಚನೆ ನೀಡಿದೆ.