ಕೆಲವೇ ಗಂಟೆಗಳಲ್ಲಿ ಈ ರಾಜ್ಯಗಳಿಗೆ ಅಪ್ಪಳಿಸಲಿದೆ ಸೈಕ್ಲೋನ್ ‘ಡಾನಾ’, 150 ರೈಲು ಸಂಚಾರ ಬಂದ್

ಡಾನಾ ಚಂಡಮಾರುತಕ್ಕೆ ಒಡಿಶಾ, ಪಶ್ಚಿಮ ಬಂಗಾಳ ತತ್ತರ! ಭಾರೀ ಬಿರುಗಾಳಿ, ಮಳೆ ..

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರವು ‘ಡಾನಾ’ ಚಂಡಮಾರುತವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಸೈಕ್ಲೋನ್ ಗಾಳಿ ಬೀಸುವ ವೇಗ ಗಂಟೆ ಯಿಂದ ಗಂಟೆಗೆ ಬದಲಾಗಲಿದೆ. ನೆನ್ನೆ ಬುಧವಾರ ಸಂಜೆಯಿಂದಲೇ ಕರಾವಳಿ ಕಡೆಗೆ ಸಾಗುತ್ತಿರುವ ಈ ‘ಡಾನಾ’ ಚಂಡಮಾರುತವು ಇಂದು ಗುರುವಾರ (ಅ.24) ಸಂಜೆ ಹೊತ್ತಿಗೆ ಪ್ರತಿ ಗಂಟೆಗೆ 120 ಗಂಟೆ ವೇಗ ಪಡೆದು ಅಪ್ಪಳಿಸುವ ನಿರೀಕ್ಷೆ ಇದೆ.

ಹೌದು, ಸದ್ಯ ಪ್ರತಿ ಗಂಟೆಗೆ ಸುಮಾರು 60 ಕಿಲೋ ಮೀಟರ್ ವೇಗದಲ್ಲಿರುವ ಈ ಚಂಡಮಾರುತವು ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ಕಡೆಗೆ ವಾಲಿಕೊಂಡಿದೆ. ಈ ದಿಕ್ಕಿನಲ್ಲಿ ಸಾಗುತ್ತಿರುವ ಈ ಸೈಕ್ಲೋನ್ ಮುಂದಿನ ಕೆಲವೇ ಗಂಟೆಗಳಲ್ಲಿ ಭೂಮಿಗೆ (ಕರಾವಳಿ ಭಾಗ) ಅಪ್ಪಳಿಸಲಿದೆ. ಇದರಿಂದ ಆ ಎರಡು ರಾಜ್ಯಗಳಲ್ಲಿ ವ್ಯಾಪಕ ಹಾನಿ, ಅತ್ಯಧಿಕ ಮಳೆ, ಪ್ರವಾಸ ಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಂಡಮಾರುತ ಸ್ವರೂಪ ಬುಧವಾರ ಬದಲಾಗುತ್ತಿದ್ದಂತೆ, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಮಳೆ ಸುರಿಯಲಾರಂಭಿಸಿದೆ. ಇಂದು ಗುರುವಾರ ಹಾಗೂ ನಾಳೆ ಶುಕ್ರವಾರ ಇವೆರಡು ರಾಜ್ಯಗಳು ಕಂಡು ಕೇಳರಿಯದಂತಹ ಮಟ್ಟಿಗೆ ನೈಸರ್ಗಿಕ ವಿಕೋಪ, ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸದ್ಯಕ್ಕೆ ‘ಡಾನಾ’ ಚಲನೆ, ಸ್ಥಿತಿ ಹೇಗಿದೆ?

ಬುಧವಾರ ಬೆಳಗ್ಗೆಯಿಂದ ಪ್ರತಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಬಂಗಾಳಕೊಲ್ಲಿಯಿಂದ ವಾಯುವ್ಯಕ್ಕೆ ಚಲಿಸುತ್ತಿದ್ದ ‘ಡಾನಾ’ ಸೈಕ್ಲೋನ್ ಮಧ್ಯಾಹ್ನ ಮತ್ತಷ್ಟು ತೀವ್ರಗೊಂಡಿತು. ವೇಗ ಹೆಚ್ಚಾಯಿತು. ಅಕ್ಟೋಬರ್ 23ರಂದು ರಾತ್ರಿ ಪರದೀಪ್ನಿಂದ (ಒಡಿಶಾ) ಆಗ್ನೇಯಕ್ಕೆ ಸುಮಾರು 520 ಕಿಮೀ ದೂರದಲ್ಲಿ ನೆಲೆಸಿತ್ತು. ಇನ್ನೂ ಪಶ್ಚಿಮ ಬಂಗಾಳದ ದಕ್ಷಿಣ-ಆಗ್ನೇಯದಿಂದ 600 ಕಿಮೀ ಮತ್ತು ಖೇಪುಪಾರಾ (ಬಾಂಗ್ಲಾದೇಶ) ದ ಆಗ್ನೇಯಕ್ಕೆ 610 ಕಿಮೀ ದೂರದಲ್ಲಿ ಈ ಚಂಡಮಾರುತು ಕೆಂದ್ರೀಕೃತವಾಗಿದೆ.

ಇಂದು ಗುರುವಾರ ಮೂಲ ಸ್ಥಳದಲ್ಲಿ ತೀವ್ರ ಚಂಡಮಾರುತವಾಗಿ ಬದಲಾಗುವ ಜೊತೆಗೆ ಅಲ್ಲಿಂದ ವಾಯುವ್ಯ ದಿಕ್ಕಿನತ್ತ ಚಲಿಸುತ್ತದೆ. ಇಂದು ಗುರುವಾರ ರಾತ್ರಿ ಉತ್ತರ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿಯ ಪುರಿ ಹಾಗೂ ಸಾಗರ್ ದ್ವೀಪದ ನಡುವೆ ದಾಟುವ ಸಾಧ್ಯತೆಯಿದೆ. ನಾಳೆ ಅಕ್ಟೋಬರ್ 25 ರಂದು ಶುಕ್ರವಾರ ಹೊತ್ತಿಗೆ ಬೆಳಿಗ್ಗೆ 100-120 ಕಿಮೀ ವೇಗದಲ್ಲಿ ಕರಾವಳಿ ಭೂ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಜ್ಞಾನಿ, ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

ಒಡಿಶಾ, ಪಶ್ಚಿಮ ಬಂಗಾಳ ಜಿಲ್ಲೆಗಳಿಗೆ ಎಚ್ಚರಿಕೆ

ಒಡಿಶಾದ 14 ಜಿಲ್ಲೆಗಳಿಗೆ ಹಾಗೂ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರೀ ಮಳೆ, ಪ್ರವಾಹ ಎಚ್ಚರಿಕೆ ನೀಡಿದೆ. ಇಲ್ಲಿನ ಸರ್ಕಾರ ಈಗಾಗಲೇ 10ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಅಗತ್ಯ ಮುನ್ನೆಚ್ಚರಿಕೆ ವಹಿಸಿ, ವಿಕೋಪ ಎದುರಿಸಲು ತಂಡಗಳನ್ನು ರಚನೆ ಮಾಡಿದೆ. ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

150ಕ್ಕೂ ಹೆಚ್ಚು ರೈಲುಗಳ ಸಂಚಾರ ಸ್ಥಗಿತ

ಭೂಮಿಗೆ ಸೈಕ್ಲೋನ್ ಅಪ್ಪಳಿಸುತ್ತಿದ್ದಂತೆ ಸಮುದ್ರದಲ್ಲಿ ಈಗಿನಕ್ಕಿಂತ 3 ಮೂರು ಮೀಟರ್ ದೈತ್ಯಾಕಾರ ಅಲೆಗಳು ಬಂದು ದಡಕ್ಕೆ ಅಪ್ಪಳಿಸಲಿವೆ. ಸೈಕ್ಲೋನ್ ತೀವ್ರತೆ ಕಾರಣದಿಂದ 150ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸಂಚಾರ ಸೇವೆ ಈ ಭಾಗದ ಜನರಿಗೆ ಕಟ್ ಆದಂತಾಗಿದೆ. ಒಟ್ಟಾರೆ ಈ ಎರಡು ರಾಜ್ಯಗಳ ಜನ ಜೀವನ ಈಗಾಗಲೇ ಅಸ್ತವ್ಯಸ್ತವಾಗಿದ್ದು, ಮುಂದಿನ ಮೂರು ನಾಲ್ಕು ದಿನ ಜನರ ಸ್ಥಿತಿ ಮತ್ತಷ್ಟು ಬಿಗುಡಾಯಿಸುವ ಲಕ್ಷಣಗಳು ಇವೆ.

Leave a Reply

Your email address will not be published. Required fields are marked *