ಬಾಗಿಲು ಮುರಿಯದೇ 45 ಲಕ್ಷದ ಚಿನ್ನ ಕದ್ದ ಖತರ್ನಾಕ್ ಕಳ್ಳ!

ಬಾಗಿಲು ಮುರಿಯದೇ 45 ಲಕ್ಷದ ಚಿನ್ನ ಕದ್ದ ಖತರ್ನಾಕ್ ಕಳ್ಳ!

ಬೆಂಗಳೂರು: ನಗರದಲ್ಲಿ ಮನೆ ಕಳ್ಳರ ಆತಂಕ ಮತ್ತೆ ಹೆಚ್ಚಿದೆ. ಬಾಗಿಲು ಒಡೆದಿಲ್ಲ, ಲಾಕ್ ಮುರಿದಿಲ್ಲ – ಆದರೂ ಖತರ್ನಾಕ್ ಕಳ್ಳ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಆಭರಣ ದೋಚಿದ್ದಾನೆ.ಬಾಗಲಗುಂಟೆ ರಾಮಯ್ಯ ಬಡಾವಣೆಯಲ್ಲಿ ನಡೆದ ಈ ಕಳ್ಳತನದಲ್ಲಿ, ಮಗನ ಮದುವೆಗಾಗಿ ಮನೆಯಲ್ಲಿಟ್ಟಿದ್ದ ಸುಮಾರು ₹45 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹3 ಲಕ್ಷ ನಗದು ಪರಾರಿಯಾಗಿದೆ.

ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶೂನ್ಯ ಸುಳಿವಿನ ನಡುವೆ ಕಳ್ಳತನ ನಡೆದಿದೆ ಎನ್ನುವುದು ಪೊಲೀಸರಿಗೂ ತಲೆನೋವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *