ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರಿಗೆ ಮತ್ತೊಂದು ಕನಸು ಭಗ್ನವಾಗಿದೆ. ತಮ್ಮ ಚಿತ್ರ ‘ಡೆವಿಲ್’ ಸಿನಿಮಾ ಶೂಟಿಂಗ್ಗೆ ವಿಘ್ನವಾಗಿದೆ. ದರ್ಶನ್ ಸಿನಿಮಾ ಚಿತ್ರೀಕರಣಕ್ಕಾಗಿ ಯುರೋಪ್‌ನ ಸ್ವಿಟ್ಜರ್ಲೆಂಡ್‌ಗೆ ಪ್ರಯಾಣಿಸಲು ವೀಸಾ ಕೋರಿದ್ದರು. ಆದರೆ, ಕೊಲೆ ಆರೋಪದ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್ ವೀಸಾ ನಿರಾಕರಣೆಗೊಂಡಿದ್ದು, ದರ್ಶನ್‌ರ ಸ್ವಿಟ್ಜರ್ಲೆಂಡ್ ಕನಸು ಭಗ್ನವಾಗಿದೆ.
ದರ್ಶನ್, ಪವಿತ್ರಾ ಗೌಡ ಮತ್ತು ಗ್ಯಾಂಗ್ನೊಂದಿಗೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಆರೋಪ ಇದ್ದು, ಇದರಿಂದಾಗಿ ಇನ್ನೂ ಕೂಡ ನ್ಯಾಯಾಲಯದಲ್ಲಿ ತನಿಖೆ ಹಂತದಲ್ಲಿದೆ.

ಕೊಲೆ ಪ್ರಕರಣದ ತನಿಖೆ ನಡುವೆಯೂ ದರ್ಶನ್ ಶೂಟಿಂಗ್ನಲ್ಲಿ ಭಾಗಿ!
ಕೊಲೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ನಡುವೆಯೂ, ದರ್ಶನ್ ತಮ್ಮ ಚಿತ್ರರಂಗದ ಕೆಲಸವನ್ನು ಮುಂದುವರೆಸಿದ್ದಾರೆ. ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ದರ್ಶನ್ ದುಬೈ ಮತ್ತು ಯುರೋಪ್‌ಗೆ ಪ್ರಯಾಣಿಸಲು ಮೇ 2025ರಲ್ಲಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಜೂನ್ 1ರಿಂದ 25ರವರೆಗೆ ದುಬೈ ಮತ್ತು ಯುರೋಪ್‌ಗೆ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಆದರೆ, ಇಸ್ರೇಲ್‌ನಲ್ಲಿ ಉಂಟಾದ ಭದ್ರತಾ ಕಾಳಜಿಯಿಂದಾಗಿ, ಚಿತ್ರತಂಡವು ಯುರೋಪ್‌ನ ಬದಲಿಗೆ ಥಾಯ್ಲೆಂಡ್‌ಗೆ ಚಿತ್ರೀಕರಣವನ್ನು ಸ್ಥಳಾಂತರಿಸಿತು.
ದರ್ಶನ್, ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೊಲೆ ಆರೋಪದ ಸ್ವಿಟ್ಜರ್ಲೆಂಡ್‌ನಲ್ಲಿ ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್ ಅಧಿಕಾರಿಗಳು ಆತನ ವೀಸಾ ಅರ್ಜಿಯನ್ನು ನಿರಾಕರಿಸಿದ್ದಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ದರ್ಶನ್‌ರ ಹಲವು ಚಿತ್ರಗಳ ಗೀತೆ ಚಿತ್ರೀಕರಣ ನಡೆದಿರುವುದರಿಂದ, ಈ ವೀಸಾ ನಿರಾಕರಣೆಯು ದರ್ಶನ್‌ಗೆ ಮತ್ತು ಚಿತ್ರತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಈ ವೀಸಾ ನಿರಾಕರಣೆ ದರ್ಶನ್‌ರ ಚಿತ್ರೀಕರಣ ಯೋಜನೆಗಳಿಗೆ ತೊಡಕನ್ನುಂಟು ಮಾಡಿದ್ದು, ಅವರ ಸ್ವಿಟ್ಜರ್ಲೆಂಡ್ ಕನಸು ಭಗ್ನವಾಗಿದೆ.
ಯೂರೋಪ್ ಬದಲು ಥಾಯ್ಲೆಂಡ್ಗೆ ಕೋರ್ಟ್ ಅನುಮತಿ
ಸ್ವಿಟ್ಜರ್ಲೆಂಡ್ ವೀಸಾ ನಿರಾಕರಣೆಯಾದ ಬೆನ್ನಲ್ಲೇ, ದರ್ಶನ್‌ರ ಕಾನೂನು ತಂಡವು ಥಾಯ್ಲೆಂಡ್‌ನ ಪುಕೆಟ್‌ನಲ್ಲಿ ಚಿತ್ರೀಕರಣಕ್ಕಾಗಿ ಜುಲೈ 11ರಿಂದ 30ರವರೆಗೆ ಪ್ರಯಾಣಕ್ಕೆ ಅನುಮತಿ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಈ ಅರ್ಜಿಯನ್ನು ಪರಿಗಣಿಸಿ, ದರ್ಶನ್‌ಗೆ ಥಾಯ್ಲೆಂಡ್‌ಗೆ ಪ್ರಯಾಣಿಸಲು ಅನುಮತಿ ನೀಡಿದ್ದು, ಆದರೆ ಕೆಲವು ಷರತ್ತುಗಳನ್ನು ಹಾಕಿದೆ.
ದರ್ಶನ್ ವಿದೇಶ ಪ್ರಯಾಣಕ್ಕೆ ಕೆಲವು ಷರತ್ತು!
ದರ್ಶನ್‌ರ ವಕೀಲರು, ಚಿತ್ರೀಕರಣಕ್ಕಾಗಿ ವಿದೇಶ ಪ್ರಯಾಣವು ಅವರ ವೃತ್ತಿಜೀವನಕ್ಕೆ ಅಗತ್ಯವಾಗಿದ್ದು, ಇದು ಆತನ ಕುಟುಂಬದ ಜೀವನಾಧಾರಕ್ಕೆ ಸಂಬಂಧಿಸಿದೆ ಎಂದು ವಾದಿಸಿದ್ದರು. ಕೋರ್ಟ್, ದರ್ಶನ್ ತಮ್ಮ ಪ್ರಯಾಣದ ವಿವರಗಳನ್ನು ಅಂದರೆ ಪ್ರಯಾಣದ ದಿನಾಂಕ, ರಾಷ್ಟ್ರ, ಮತ್ತು ಚಟುವಟಿಕೆಗಳನ್ನು ಮರಳಿ ಬಂದ ಬಳಿಕ ಸಲ್ಲಿಸಬೇಕೆಂದು ಆದೇಶಿಸಿದೆ.