ದರ್ಶನ್ ಗ್ಯಾಂಗ್‌ನ ನಾಲ್ಕನೇ ಆರೋಪಿ ತಾಯಿ ನಿಧನ

ಆಗಸ್ಟ್ 1 ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಇದೀಗ ರೇಣುಕಾಸ್ವಾಮಿಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ರ‍್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿ ರಾಘವೇಂದ್ರನ ತಾಯಿ ನಿಧನರಾಗಿದ್ದಾರೆ. ರಾಘವೇಂದ್ರ ಅಲಿಯಾಸ್‌ ರಘು ತಾಯಿ ಮಂಜುಳಮ್ಮ (75) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ರಾಘವೇಂದ್ರ ಚಿತ್ರದರ‍್ಗ ರ‍್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ರಾಘವೇಂದ್ರನ ತಾಯಿ ಮಾನಸಿಕ ಅಸ್ವಸ್ಥತೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಇಷ್ಟೂ ದಿನ ರಘು ಸಹೋದರ ಮುರುಳಿ ಮನೆಯಲ್ಲಿದ್ದರು. ಮುರುಳಿ ಮದುವೆಯಾಗದೇ ತಾಯಿ ಆರೈಕೆ ಮಾಡುತಿದ್ದ. ಆದರೆ ರಘು ಲವ್ ಮ್ಯಾರೇಜ್ ಆಗಿ ಪತ್ನಿ ಜತೆ ಪ್ರತ್ಯೇಕವಾಗಿ ವಾಸವಾಗಿದ್ದ‌. ಆಗಾಗ ಬಂದು ತಾಯಿಯ ಕ್ಷೇಮ ವಿಚಾರಿಸುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *