ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಮತ್ತೊಮ್ಮೆ ಘೋರ ಬಿರುಗಾಳಿ ಎದ್ದಿದ್ದು, ಒಂದೇ ಸಮನೆ ಸಾಲು ಸಾಲು ಸಮಸ್ಯೆಗಳು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ಎದುರಾಗುತ್ತಿವೆ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ಮಧ್ಯಂತರ ಜಾಮೀನು ಪಡೆದಿದ್ದು, ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಲ್ಲಿ ಒದ್ದಾಡುತ್ತಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ಸಮಯದಲ್ಲೇ, ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಕೆಲವೇ ಗಂಟೆಗಳಲ್ಲಿ ಮತ್ತೆ ಶಿಫ್ಟ್….
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಒಂದು ಮಾತಿಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಶೇಕ್ ಮಾಡುವಷ್ಟು ಶಕ್ತಿ ಇದೆ ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಆದರೆ ವಿರೋಧಿಗಳು ಮಾತ್ರ ಈ ಮಾತನ್ನ ಒಪ್ಪುವುದೇ ಇಲ್ಲ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ ನಂತರವೇ ಅಲ್ಲೋಲ ಕಲ್ಲೋಲ ಶುರುವಾಗಿದೆ. ಪರಿಸ್ಥಿತಿ ಇಷ್ಟು ಭಯ ಹುಟ್ಟಿಸುವಾಗಲೇ ಮತ್ತೊಂದು ಸುದ್ದಿ ಹಬ್ಬಿದ್ದು, ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಕೆಲವೇ ಗಂಟೆಗಳಲ್ಲಿ ಮತ್ತೆ ಶಿಫ್ಟ್….
ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್….
ಡಿ-ಬಾಸ್ ಅಂದ್ರೆ ಅದೊಂದು ಶಕ್ತಿ, ಡಿ-ಬಾಸ್ ಅಂದ್ರೆ ಅದೊಂದು ಬಲ, ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಡಿ-ಬಾಸ್ ಅವರೇ ಸಾಟಿ ಎಂಬ ಮಾತನ್ನ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುತ್ತಾರೆ. ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿರುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬೆನ್ನು ನೋವಿನ ಕಾರಣ ಒದ್ದಾಡುತ್ತಿದ್ದಾರೆ. ಇದೇ ಸಂಕಷ್ಟದಲ್ಲಿ ಮತ್ತೊಂದು ಸ್ಫೋಟಕ ಸುದ್ದಿ ಇದೀಗ ಹಬ್ಬಿದ್ದು, ಬಳ್ಳಾರಿ ಜೈಲಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಶಿಫ್ಟ್ ಆಗುತ್ತಾರಾ? ಮುಂದೆ ಓದಿ.
ಅಭಿಮಾನಿಗಳಿಗೆ ಕಾಡುತ್ತಿದೆ ಭಯ.. ಭಯ…
ಹೌದು, ಬಳ್ಳಾರಿ ಜೈಲಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಶಿಫ್ಟ್ ಆಗುತ್ತಾರಾ? ಎಂಬ ಪ್ರಶ್ನೆ ಮೂಡಲು ಪ್ರಮುಖ ಕಾರಣ ಬೆಂಗಳೂರು ಪೊಲೀಸರ ಅದೊಂದು ತೀರ್ಮಾನ. ಅದು ಏನಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮಧ್ಯಂತರ ಜಾಮೀನು ನೀಡಿ, ಬಳ್ಳಾರಿ ಜೈಲಿನಿಂದ ರಿಲೀಸ್ ಮಾಡಿರುವ ನಿರ್ಧಾರವನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಿದ್ದಾರೆ ಪೊಲೀಸರು.
ಈ ನಿರ್ಧಾರವೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಎದೆಯಲ್ಲಿ ಭಯ ಹುಟ್ಟಿಸಿದ್ದು, ಅಭಿಮಾನಿಗಳಿಗೆ ಚಿಂತೆ ತರಿಸಿದೆ. ಮತ್ತೊಂದು ಕಡೆ ಇಂದೇ ಬೆಂಗಳೂರು ಪೊಲೀಸರು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜಾಮೀನು ರದ್ದು ಮಾಡುವಂತೆ ಕೋರಿ, ಮಾನ್ಯ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ಈ ರೀತಿ ಬೆಂಗಳೂರು ಪೊಲೀಸರು ದರ್ಶನ್ ತೂಗುದೀಪ್ ಅವರ ವಿರುದ್ಧ ಕ್ರಮಕ್ಕೆ ಮುಂದಾದ್ರೆ, ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಕೆಲವೇ ಗಂಟೆಗಳಲ್ಲಿ ಮತ್ತೆ ಶಿಫ್ಟ್ ಆಗುವುದು ಬಹುತೇಕ ಪಕ್ಕಾ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಅಥವಾ ವಕೀಲರಿಂದ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಹೀಗಾಗಿ ಈ ವದಂತಿಯ ಸುತ್ತ ಚರ್ಚೆ ಜೋರಾಗಿದೆ.