ಒಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ನಲ್ಲಿ ಜಾಮೀನು ಪಡೆಯಲು ವಕೀಲರ ಮೂಲಕ ದರ್ಶನ್ ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ದರ್ಶನ್ ಅವರ ಹಿಟ್ ಸಿನಿಮಾಗಳು ಒಂದರ ಹಿಂದೆ ಒಂದು ರೀ-ರಿಲೀಸ್ ಆಗುತ್ತಿದೆ. ಹೌದು, ದಿನಕರ್ ತೂಗುದೀಪ ನಿರ್ದೇಶನದ ”ನವಗ್ರಹ” ಚಿತ್ರ ಸಿನಿರಸಿಕರ ಮನಗೆದ್ದಿತ್ತು. ಮತ್ತು ಖ್ಯಾತ ಖಳನಟರ ಮಕ್ಕಳೆಲ್ಲಾ ಒಟ್ಟಾಗಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು ಎಂಬುದು ವಿಶೆಷವಾಗಿತ್ತು. ಇದರ ಜೋತೆಗೆ ನಾಗಣ್ಣ ನಿರ್ದೇಶನದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಚಿತ್ರ ಕೂಡ ರೀ ರಿಲೀಸ್ ಮಾಡುವ ತಯಾರಿ ನಡೆದಿದೆ. ಐತಿಹಾಸಿಕ ಕಥಾಹಂದರ ಚಿತ್ರದಲ್ಲಿ ರಾಯಣ್ಣನಾಗಿ ದರ್ಶನ್ ಅಬ್ಬರಿಸಿದ್ದರು. ಒಂದೇ ದಿನ ದರ್ಶನ್ ನಟನೆಯ 2 ಚಿತ್ರಗಳು ನವೆಂಬರ್ ೮ ರಂದು ರೀ-ರಿಲೀಸ್ ಆಗುತ್ತಿರುವುದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಎರಡೂ ಕೂಡ ದರ್ಶನ್ ನಟನೆಯ ಹಿಟ್ ಸಿನಿಮಾಗಳು. ಒಂದೇ ದಿನ ಎರಡನ್ನೂ ನೋಡುವುದು ಹೇಗೆ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಒಂದೇ ದಿನ ದರ್ಶನ್ ರವರ ಎರೆಡು ಚಿತ್ರಗಳು, ರೀ-ರಿಲಿಸ್…
