ದಶಾವತಾರ: ವಿಷ್ಣುವಿನ 10 ಅವತಾರಗಳು ಯಾವುವು ಅನ್ನೊದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ದಶಾವತಾರ: ವಿಷ್ಣುವಿನ 10 ಅವತಾರಗಳು ಯಾವುವು ಅನ್ನೊದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ದಶಾವತಾರ, ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಂದಾದ ವಿಷ್ಣುವಿನ 10 ಅವತಾರಗಳು. ವಿಷ್ಣುವಿನ ಪ್ರತಿಯೊಂದು ಅವತಾರವು ಒಂದು ನಿರ್ದಿಷ್ಟ ಪುರಾಣವನ್ನು ಹೊಂದಿದೆ. ಹಿಂದೂ ಧರ್ಮದ ಪ್ರಕಾರ, ವಿಷ್ಣುವು ತ್ರಿಮೂರ್ತಿಗಳಲ್ಲಿ ಒಬ್ಬರು. ವಿಷ್ಣವು, ಕೆಟ್ಟದರ ಮೇಲೆ ಒಳಿತಿನ ವಿಜಯ ಸಾಧಿಸಲು 10 ಬಾರೀ 10 ಅವತಾರದಲ್ಲಿ ಭುಮಿಗಿಳಿದು ಬಂದಿದ್ದಾರೆ. ಹಾಗಾದ್ರೆ, ವಿಷ್ಣುವು ತಾಳಿದ ಆ 10 ಅವತಾಗಳು ಯಾವುವು ಅನ್ನೊದನ್ನಾ ಒಂದೊಂದಾಗಿ ತಿಳಿಯೊಣ ಬನ್ನಿ.

  • ಮೊದಲೆಯದಾಗಿ, ಮೊದಲ ಮನುಷ್ಯನಾದ ಮನುವನ್ನು ಜಗತ್ತನ್ನು ನಾಶಪಡಿಸಿದ ಮಹಾ ಪ್ರವಾಹದಿಂದ ರಕ್ಷಿಸಲು ಮೀನಿನ ಅವತಾರ ತಾಳಿದ, ಮತ್ಸ್ಯ ಅವರತಾರ.
  • ಎರಡನೇಯದು, ಸಮುದ್ರ ಮಂಥನದ ಸಮಯದಲ್ಲಿ ಬ್ರಹ್ಮಾಂಡದ ಭಾರವನ್ನು ಬೆಂಬಲಿಸಲು ಆಮೆಯಾಗಿ ಕಾಣಿಸಿಕೊಂಡ ಕೂರ್ಮ ಅವತಾರ.
  • ಮೂರನೇಯದು, ಭೂದೇವಿಯನ್ನು ಹಿರಣ್ಯಾಕ್ಷ ಎಂಬ ರಾಕ್ಷಸನಿಂದ ರಕ್ಷಿಸಲು ಕಾಡು ಹಂದಿಯ ರೂಪದಲ್ಲಿ ಬಂದ ವರಹ ಅವತಾರ.
  • ನಾಲ್ಕನೆಯದು, ಹಿರಣ್ಯಕಶಿಪುವನ್ನು ಕೊಲ್ಲಲು ಅರ್ಧ ಮನುಷ್ಯ, ಅರ್ಧ ಸಿಂಹವಾಗಿ ಅವತರಿಸಿದ ನರಸಿಂಹ ಅವತಾರ.
  • ಐದನೆಯದು, ರಾಕ್ಷಸ ರಾಜ ಬಲಿಯನ್ನು ಸಂಹರಿಸಲು ಬ್ರಹ್ಮಣನಾಗಿ ಕಂಡ ವಾಮನ ಅವತಾರ.
  • ಆರನೆಯದು, ನೈತಿಕ ವ್ಯವಸ್ಥೆಯನ್ನು ಸ್ಥಾಪಿಸಲು ಕೊಡಲಿಯೊಂದಿಗೆ ಉಗ್ರ ಯೋಧನಾಗಿ ಪರಶುರಾಮನ ಅವತಾರ ತಾಳುತ್ತಾನೆ.
  • ಇನ್ನು ಏಳನೆಯದು, ರಾವಣನನ್ನು ಸಂಹರಿಸಲು ತಾಳಿದ ತ್ರೆತಾಯುಗದ ರಾಮನ ಅವತಾರ.
  • ಎಂಟನೆಯದು, ಮಾನವೀಯತೆಯ ಮಾರ್ಗದರ್ಶನ ನೀಡಲು ಮತ್ತು ಕಂಸನನ್ನು ಸಂಹಾರ ಮಾಡಲು ಬುದ್ಧಿವಂತ ಶಿಕ್ಷಕನಾಗಿ ತಾಳಿದ ಕೃಷ್ಣನ ಅವತಾರ.
  • ಇನ್ನು ಒಂಬತ್ತನೆಯದು, ಕರುಣೆ, ಅಹಿಂಸೆ ಮತ್ತು ಆಧ್ಯಾತ್ಮಿಕ ಜ್ಞಾನೋದಯದ ಸಂದೇಶವನ್ನು ಹರಡಲು ಅವತರಿಸಿದ ಗೌತಮ ಬುದ್ಧನ ಅವತಾರ.
  • ಇನ್ನು ಕೊನೆಯದಾಗಿ, ಪ್ರಸ್ಥತ ಅಂದ್ರೆ ಕಲಿಯುಗದ ಅಂತ್ಯ ಮಾಡಲು ಮತ್ತು ನೈತಿಕ ಕ್ರಮವನ್ನು ಪುನಃಸ್ಥಾಪಿಸಲು, ದುಷ್ಟರನ್ನು ನಾಶಮಾಡಲು ಮತ್ತು ಹೊಸ ಸುವರ್ಣಯುಗವನ್ನು ಪ್ರಾರಂಭಿಸಲು ಕಲ್ಕಿಯ ಅವತಾರವನ್ನು ತಾಳುತ್ತಾನೆ.

Leave a Reply

Your email address will not be published. Required fields are marked *