ದಾವಣಗೆರೆ || ಮೈಕ್ರೋ ಫೈನಾನ್ಸ್ ಕಿರುಕುಳ – 99 ರೂ. ಬಾಕಿ ಇರೋದಕ್ಕೆ 58,000 ಕಟ್ಟುವಂತೆ ನೋಟೀಸ್

ದಾವಣಗೆರೆ || ಮೈಕ್ರೋ ಫೈನಾನ್ಸ್ ಕಿರುಕುಳ – 99 ರೂ. ಬಾಕಿ ಇರೋದಕ್ಕೆ 58,000 ಕಟ್ಟುವಂತೆ ನೋಟೀಸ್

ದಾವಣಗೆರೆ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Microfinance) ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಕಳುಹಿಸಿದೆ. ಈ ನಡುವೆಯೂ ಸಾರ್ವಜನಿಕರ ಮೇಲೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರಿದೆ. ಅದನ್ನೋದಕ್ಕೆ ದಾವಣಗೆರೆಯ (Davangere) ಈ ಪ್ರಕರಣ ಸಾಕ್ಷಿಯಾಗಿದೆ.

ಹೌದು. ಕೇವಲ 99 ರೂ. ಬಾಕಿ ಇರೋದಕ್ಕೆ 58,000 ರೂ. ಕಟ್ಟುವಂತೆ ಬ್ಯಾಂಕೊಂದು ದಾವಣಗೆರೆ ನಗರದ ಚಂದ್ರಶೇಖರ್‌ಗೆ ನೋಟೀಸ್ ಕೊಟ್ಟು, ಹಣ ಪಾವತಿಸುವಂತೆ ಕಿರುಕುಳ ನೀಡುತ್ತಿದೆ.

ಚಂದ್ರಶೇಖರ್ ಆನ್‌ಲೈನ್ ಮೂಲಕ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ 10 ಲಕ್ಷ ರೂ. ಸಾಲ ಮಾಡಿದ್ದರು. ಪ್ರತಿ ತಿಂಗಳು ಕಂತಿನಂತೆ ಎಲ್ಲಾ ಸಾಲವನ್ನು ಕಟ್ಟಿದ್ದರು. ಉಳಿದ 99 ರೂ. ಕಟ್ಟಿಸಿಕೊಂಡು ಕ್ಲೀಯರೆನ್ಸ್ ಕೊಡಿ ಎಂದು ಕೇಳಿದಾಗ 58,000 ರೂ. ಕಟ್ಟುವಂತೆ ಒತ್ತಾಯಿಸಿದ್ದಾರೆ.

ನಿಮಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬೇಕು ಅಂದ್ರೆ 58,000 ಕಟ್ಟಬೇಕು ಎಂದು ಚಂದ್ರಶೇಖರ್‌ಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೇಳಿದ್ದಾರೆ. ದಾಖಲೆ ಪ್ರಕಾರ ಕೇವಲ 99 ರೂಪಾಯಿ ಕಟ್ಟಿದರೆ ಸಾಲ ಮುಕ್ತವಾಗುತ್ತದೆ. ಆದರೆ ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿ 58,000 ಕಟ್ಟಲೇಬೇಕು ಎಂದು ಚಂದ್ರಶೇಖರ್‌ಗೆ ಕಿರುಕುಳ ನೀಡುತ್ತಿದ್ದಾರೆ. ಚಂದ್ರಶೇಖರ್ ಕಿರುಕುಳ ತಾಳಲಾರದೆ ಈ ಬಗ್ಗೆ ಆರ್‌ಬಿಐಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಆನ್‌ಲೈನ್‌ನಲ್ಲಿ ಸಾಲ ಪಡೆದರು ಸಹ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ನಿಲ್ಲುತ್ತಿಲ್ಲ. ಎಲ್ಲಾ ಹಣವನ್ನು ಬಡ್ಡಿ ಸಮೇತ ಕಟ್ಟಿದರೂ ಕೂಡ ಇನ್ನೂ ಹಣ ಕಟ್ಟಿ ನಂತರ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡುತ್ತೇವೆ ಎಂದು ಸತಾಯಿಸುತ್ತಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ. ಜೊತೆಗೆ ದೂರು ನೀಡುವುದಾಗಿಗೂ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *