ಬೆಂಗಳೂರು: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ 2028ರಲ್ಲಿ ಅಧಿಕಾರಕ್ಕೆ ಬರಲ್ಲ ಹಾಗೇನಾದರೂ ಆದರೆ ನಾನೇ ಅವರಿಗೆ ಬಟ್ಟೆ ಹೊಲಿಸಿ ಕೊಡ್ತೀನಿ ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದಕ್ಕೆ ಇಂದು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅವರ ಪಾಪದ ಹಣದಿಂದ ಯಾರಿಗೆ ಬೇಕಿದೆ ಬಟ್ಟೆ? ನಾಡಿನ ಜನತೆ ತಮಗೆ ಬಟ್ಟೆ ಕೊಡುತ್ತಾರೆ ಎಂದರು.

ಅವರಿಂದ ಬಟ್ಟೆ ಹೊಲಿಸಿಕೊಳ್ಳುವ ದಾರದ್ರ್ಯ ತನಗೆ ಬಂದಿಲ್ಲ, ಅವರಿಗೆ ದಾರಿದ್ರ್ಯ ಬಂದೊದಗಿದೆ, ಅವರಲ್ಲಿರೋದು ಪಾಪದ ಹಣ, ಅದರಿಂದ ಬಟ್ಟೆ ಹೊಲಿಸಿಕೊಳ್ಳುವ ಸ್ಥಿತಿ ರಾಜ್ಯದ ಜನ ತನಗೆ ನೀಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.