ದೀಪಿಕಾ ಪಡುಕೋಣೆ ಬೋಲ್ಡ್​​ ಬೇಬಿಬಂಪ್​ ಫೋಟೋಶೂಟ್​: ಹುಬ್ಬೇರಿಸಿದ ನೆಟ್ಟಿಗರು

deepika padukone

ಹೈದರಾಬಾದ್: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಗರ್ಭಾವಸ್ಥೆಯ ಅಂತಿಮ ದಿನಗಳನ್ನು ನಂಬರ್​ ಒನ್​ ನಟಿ ಖ್ಯಾತಿಯ ದೀಪಿಕಾ ಸಖತ್​​ ಎಂಜಾಯ್​​ ಮಾಡುತ್ತಿದ್ದಾರೆ. ಇದೀಗ ಬೋಲ್ಡ್​​ ಬೇಬಿ ಬಂಪ್​​ ಫೋಟೋಶೂಟ್​ ಮಾಡಿಸಿ ಗಮನ ಸೆಳೆದಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ರಣ್​​​ವೀರ್​​ ಸಿಂಗ್ ಬಾಲಿವುಡ್​ನ ಪವರ್​​ಫುಲ್​ ಕಪಲ್​​. ಪ್ರೇಮಪಕ್ಷಿಗಳೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಶೀಘ್ರದಲ್ಲೇ ಮಗುವಿಗೆ ಜನ್ಮ ಕೊಡಲಿದ್ದಾರೆ. ನಿರೀಕ್ಷೆಯಂತೆ ಇದೀಗ ಬೇಬಿ ಬಂಪ್​​ ಫೋಟೋಶೂಟ್​ ಮಾಡಿಸಿದ್ದಾರೆ.

ಸರಣಿ ಫೋಟೋಗಳು ಶೇರ್: ಅಭಿಮಾನಿಗಳಿಗಾಗಿ ನಟಿ ತಮ್ಮ ಗರ್ಭಧಾರಣೆಯ ಫೋಟೋಶೂಟ್‌ ಅನ್ನು ಹಂಚಿಕೊಂಡಿದ್ದಾರೆ. ಪ್ರೀತಿ, ಖುಷಿ, ನಿರೀಕ್ಷೆ ಮತ್ತು ಹೊಸ ಆರಂಭದ ಉತ್ಸಾಹದ ಅಂಶಗಳನ್ನು ಈ ಫೋಟೋಗಳು ಒಳಗೊಂಡಿದೆ. ತಮ್ಮ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ಹೆಸರುವಾಸಿಯಾಗಿರುವ ದೀಪ್​ವೀರ್​ ಸರಣಿ ಚಿತ್ರಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಶೇರ್ ಮಾಡಿರುವ 14 ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಖುಷಿಯ ಕ್ಷಣಗಳನ್ನು ಹಂಚಿಕೊಂಡ ತಾರಾ ದಂಪತಿ, ಕ್ಯಾಪ್ಷನ್​​​ನಲ್ಲಿ ಎವಿಲ್​ ಐ, ಹಾರ್ಟ್ ಮತ್ತು ಫಾರೆವರ್​​ ಎಮೋಜಿಯನ್ನು ಹಾಕಿದ್ದಾರೆ. ಶೀಘ್ರದಲ್ಲೇ ಪೋಷಕರಾಗಲಿರುವ ದಂಪತಿ ಮೊಗದಲ್ಲಿ ಹೆಮ್ಮೆ ಮತ್ತು ಸಂತೋಷ ಎದ್ದು ಕಾಣುತ್ತಿದೆ. ದಂಪತಿಯ ಭಾಂದವ್ಯ, ಮೊದಲ ಮಗುವಿನ ಪೋಷಕರಾಗಲಿರುವ ಅಪಾರ ಖುಷಿ ಈ ಫೋಟೋಗಳಲ್ಲಿ ಸೆರೆಯಾಗಿದೆ. ಫೋಟೋಗಳು ಭಾವನಾತ್ಮಕ ಮತ್ತು ಸಖತ್​ ಬೋಲ್ಡ್​ ಆಗಿವೆ.

Leave a Reply

Your email address will not be published. Required fields are marked *