ಕೆಲ ತಿಂಗಳ ಹಿಂದೆಯಷ್ಟೆ ಅಭಿಷೆಕ್-ಅವಿವಾ ಜೋಡಿಯಾ ಮದುವೆಯ ವಿಷಯ ಕೇಳಿ ಬಂದಂತಿತ್ತು, ನೋಡ-ನೋಡುತ್ತಿದ್ದಲೇ ಕೆಲ ದಿನಗಳ ಹಿಂದೆಯಷ್ಟೇ ಅಭಿಷೆಕ್-ಅವಿವಾ ದಂಪತಿಗೆ ಗಂಡು ಮಗು ಜನಿಸಿದ ಸುದ್ಧಿ ಕೇಳಿ ಬಂತು. ಇದನ್ನು ಕೇಳಿದ ಫ್ಯಾನ್ಸ್, ಜೂನಿಯರ್ ಅಂಬಿ ಜನಿಸಿದ್ದಾರೆ ಎಂದು ಸಂತಸಪಟ್ಟಿದ್ದರು. ಆದರೆ ಮಗುವಿನ ವಿಚಾರದ ಕುರಿತು ಅವಿವಾ ಬೇಸರ ವ್ಯಕ್ತಪಡಿಸಿದ್ದಾರೆ….
ಕೆಲ ದಿನಗಳ ಹಿಂದಯಷ್ಟೆ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್-ಅವಿವಾ ದಂಪತಿಗೆ ಗಂಡುಮಗು ಜನಿಸಿತ್ತು. ಮಗುವಿನ ಫೋಟೋ ಹಲವು ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದು ಫ್ಯಾನ್ಸ ಗೂ ಖುಷಿ ನೀಡಿತ್ತು. ಆದರೆ ಇದು ಅವಿವಾಗೆ ಬೇಸರ ತರಿಸಿದೆ. ‘ವಿವಿಧ ಸುದ್ದಿ ಮಾಧ್ಯಮಗಳು ಅನಧಿಕೃತವಾಗಿ ನಮ್ಮ ಮಗುವಿನ ಫೋಟೋ ಪ್ರಕಟಿಸಿವೆ. ಇದು ನಮಗೆ ಭಾವನತ್ಮಕವಾಗಿ ಧಕ್ಕೆ ಉಂಟು ಮಾಡಿದೆ. ಕೂಡಲೇ ಫೋಟೋ ಡಿಲೀಟ್ ಮಾಡಿ, ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡು, ತಮ್ಮ ಬೇಸರ ವ್ಯಕ್ತ ಪಡಿಸಿದ್ದಾರೆ.