ಬೆಂಗಳೂರು : ದೆಹಲಿ ಹೋರಾಟದ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಹ 12ನೇ ದಿನಕ್ಕೆ ಮುಂದುವರೆದಿದೆ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಚಳುವಳಿ ನಿರತ ರೈತರು ನೆನ್ನೆದೆಹಲಿಗೆ ಕಾಲ್ನಡಿಗೆ ಮೂಲಕ ಹೋಗಲು ಯತ್ನಿಸಿದಾಗ ಪೊಲೀಸರು ತಡೆದು ಆಶ್ರುವಾಯು ಸಿಡಿಸಿ ಜಲ ಪಿರಂಗಿ ಪ್ರಯೋಗ ಮಾಡಿದ್ದಾರೆ ನೂರಾರು ರೈತರು ಆಸ್ಪತ್ರೆ ಸೇರಿದ್ದಾರೆ. ಇಂತಹ ದಬ್ಬಾಳಿಕೆಯ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇವೆ. ರೈತರು ತಿರುಗಿ ಬಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ
ನವೆಂಬರ್ 26 ರಿಂದ ದೇಶದ ರೈತರ ಹಿತಕ್ಕಾಗಿ ಉಪವಾಸ ನಡೆಸುತ್ತಿರುವ ದಲೈವಾಲಾ ಉಪವಾಸ 12 ದಿನಕ್ಕೆ. ಕಾಲಿಟ್ಟಿದೆ ಅವರ ಆರೋಗ್ಯಪರಿಸ್ಥಿತಿ ಗಂಭೀರವಾಗಿದೆ. ಸಂಸತ್ ಅಧಿವೇಶನ ನಡೆಯುತ್ತಿದ್ದರು ಯಾವುದೇ ಸಂಸದರು ಧ್ವನಿ ಎತ್ತುತ್ತಿಲ್ಲ. ಆದ್ದರಿಂದ ಇದೆ
9 ರಂದು ಸೋಮವಾರ ದೇಶದ ಎಲ್ಲ ಸಂಸದರ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಸಿ ಸಂಸದರನ್ನ ಎಚ್ಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆ ತೀರ್ಮಾನಿಸಿದೆ. ಕರ್ನಾಟಕದಲ್ಲಿ ಎಲ್ಲ ಸಂಸದರ ಮನೆ ಮುಂದೆ ಧರಣಿ ನಡೆಸಲಾಗುವುದು ಬೆಂಗಳೂರಿನ ತೇಜಸ್ವಿ ಸೂರ್ಯ ಮನೆ ಮುಂದೆ ಉಪವಾಸ ದಿನದ ರೈತರು ಧರಣಿ ನಡೆಸುತ್ತೇವೆ.
ಕೇಂದ್ರ ಸರ್ಕಾರ ಚಳುವಳಿ ನಿರತ ಮುಖಂಡರ ಜೊತೆ ಕೂಡಲೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ರೈತ ಮುಖಂಡರ ಪ್ರಾಣ ಉಳಿಸಿ ಎಂದು ಒತ್ತಾಯಿಸುತ್ತೇವೆ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು
ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು
ರೈತರ ಸಾಲ ಸಂಪೂರ್ಣ ಮನ್ನಾ ಆಗಭೇಕು.
60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು.
ರೈತರ ಮೇಲೆ ಇರುವ ಕೇಸುಗಳನ್ನು ವಾಪಸ್ ಪಡೆಯಬೇಕು
ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು ಎಂದು ದೆಹಲಿ ಗಡಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ
ಇಂದಿನ ಉಪವಾಸ ಸತ್ಯಾಗ್ರಹ ಕಲ್ಬುರ್ಗಿ ಜಿಲ್ಲೆಯ ರೈತರಿಂದ ನಡೆಸಲಾಯಿತು. ಸತ್ಯಾಗ್ರಹದಲ್ಲಿ ಕುರುಬೂರು ಶಾಂತಕುಮಾರ್.ಕಲ್ಬುರ್ಗಿ ಜಿಲ್ಲಾಧ್ಯಕ್ಷ ರಮೇಶ ಹೂಗರ್ . ರಾಜ್ಯ ಉಪಾಧ್ಯಕ್ಷ ಬಸವರಾಜ್ ಪಾಟೀಲ್ ಜಿಲ್ಲಾ ಕಾರ್ಯದರ್ಶಿ ಬರಡನಪುರ ನಾಗರಾಜ್, ಬಿಜಾಪುರ ಜಿಲ್ಲಾ ರಾಜುಗುಂದಗಿ. ಧರೆಯಪ್ಪಗೌಡ. ಬಸವರಾಜ್ ವಾಳಿ. ಸುಭಾಷ್ ಆಲಾದಿ. ರಾಜಾಹುಲಿ ಮುಂತಾದವರು ಇದ್ದರು