ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್ಟಿ ಸುಧಾರಣೆಗಳ ಸಂಪೂರ್ಣ ಪ್ರಯೋಜನ ಕರ್ನಾಟಕದ ಜನತೆಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ಸಿರೋಯಾ ಆರೋಪ: ಇಂಧನ ದರ ಇಳಿಕೆ ಮಾಡಿದಾಗ ರಾಜ್ಯ ಸರ್ಕಾರ ಹೆಚ್ಚುವರಿ ಸುಂಕ ವಿಧಿಸಿ ಜನರಿಗೆ ಲಾಭ ದೊರೆಯದಂತೆ ಮಾಡಿತ್ತು. ಈಗ ಜಿಎಸ್ಟಿ ಸುಧಾರಣೆಯಲ್ಲಿಯೂ ಜನರಿಗೆ ಪ್ರಯೋಜನ ಕಸಿದುಕೊಳ್ಳಬಾರದು.ರಾಜ್ಯ ಸರ್ಕಾರ ಸದಾ “ಆದಾಯ ನಷ್ಟ”ಮತ್ತು “ಸಹಕಾರಿ ಒಕ್ಕೂಟ ಕುರಿತು ಮಾತಾಡುತ್ತದಾದರೂ, ಉಚಿತ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ಕುಗ್ಗುತ್ತಿರುವ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ.
ಗ್ಯಾರಂಟಿ ಯೋಜನೆಗಳ ಟೀಕೆ: ಸಿದ್ದರಾಮಯ್ಯ ಸರ್ಕಾರ ಒಂದು ಕೈಯಿಂದ “ಉದಾರವಾಗಿ ಕೊಡುತ್ತಿರುವಂತೆ ನಟಿಸಿ, ಮತ್ತೊಂದು ಕೈಯಿಂದ ದರೋಡೆ ಮಾಡುತ್ತಿದೆ”ಎಂದು ಟೀಕಿಸಿದ ಸಿರೋಯಾ, ಜನರನ್ನು ಮೂರ್ಖರನ್ನಾಗಿಸುವ ಈ ಕ್ರಮ ನಿಲ್ಲಬೇಕು ಎಂದಿದ್ದಾರೆ.
ಕೇಂದ್ರದ ಜಿಎಸ್ಟಿ ನಿರ್ಧಾರ: ಶೇ 12 ಮತ್ತು 28ರ ಸ್ಲ್ಯಾಬ್‌ಗಳನ್ನು ರದ್ದು. ಶೇ 5 ಮತ್ತು 18ರ ಸ್ಲ್ಯಾಬ್‌ಗಳು ಮಾತ್ರ ಮುಂದುವರಿಕೆ. ಆಹಾರ ವಸ್ತುಗಳು, ಕಲಿಕಾ ಸಾಮಗ್ರಿಗಳು, ವೈಯಕ್ತಿಕ ಮತ್ತು ಆರೋಗ್ಯ ವಿಮೆಗೆ ಜಿಎಸ್ಟಿ ವಿನಾಯಿತಿ.
ಸೆಪ್ಟೆಂಬರ್ 22ರಿಂದ ಜಾರಿಗೆ. ಕೇಂದ್ರದ ಪ್ರಕಾರ, ಈ ಪರಿಷ್ಕರಣೆ ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ಯಮಗಳಿಗೆ ಉತ್ತೇಜನ ನೀಡಲಿದೆ; ರಾಜ್ಯಗಳಿಗೆ ಆದಾಯ ನಷ್ಟದ ಸಮಸ್ಯೆಯೇ ಇರುವುದಿಲ್ಲ. ಆದರೆ ಕರ್ನಾಟಕ ಸರ್ಕಾರವು “ನಷ್ಟ ಅನಿವಾರ್ಯ ಎಂದು ಆಕ್ಷೇಪಿಸಿದೆ.
For More Updates Join our WhatsApp Group :



