ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಫ್ಲಾಪ್ ಸ್ಟಾರ್ ಆಗಿದ್ದಾರೆ. ಅವರ ನಟನೆಯ ಏಳು ಸಿನಿಮಾಗಳು ಸತತವಾಗಿ ಸೋಲು ಕಂಡಿವೆ. ಈಗ ‘ಕಿಂಗ್ಡಮ್’ ಹೆಸರಿನ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸತತ ಸೋಲು ಕಂಡಿರುವ ವಿಜಯ್ಗೆ ಈ ಸಿನಿಮಾ ಆದರೂ ಗೆಲುವು ನೀಡುತ್ತದೆಯೇ ನೋಡಬೇಕಿದೆ. ಈ ಸಿನಿಮಾದ ಒಟಿಟಿ ಹಕ್ಕುಗಳು ಉತ್ತಮ ಮೊತ್ತಕ್ಕೆ ಮಾರಾಟವಾಗಿವೆ.

ವಿಜಯ್ ದೇವರಕೊಂಡ ಈಗ ತೆಲುಗು ಚಿತ್ರರಂಗದ ಫ್ಲಾಪ್ ಸ್ಟಾರ್. ಅವರು ನಟಿಸಿರುವ ಏಳು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸತತವಾಗಿ ಸೋಲು ಕಂಡಿವೆ. ಒಂದೇ ಒಂದು ದೊಡ್ಡ ಗೆಲುವಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ ವಿಜಯ್ ದೇವರಕೊಂಡ. ಇದೀಗ ಅವರ ನಟನೆಯ ‘ಕಿಂಗ್ಡಮ್’ ಹೆಸರಿನ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸತತ ಸೋಲುಗಳನ್ನೇ ಕಂಡರೂ ಸಹ ವಿಜಯ್ ದೇವರಕೊಂಡಗೆ ಇನ್ನೂ ಬೇಡಿಕೆ ಇದ್ದಂತಿದೆ. ‘ಕಿಂಗ್ಡಮ್’ ಸಿನಿಮಾವನ್ನು ಒಟಿಟಿ ವೇದಿಕೆಯೊಂದು ಉತ್ತಮ ಮೊತ್ತಕ್ಕೆ ಖರೀದಿ ಮಾರಿದೆ.
‘ಕಿಂಗ್ಡಮ್’ ಸಿನಿಮಾಕ್ಕೆ ಬರೋಬ್ಬರಿ 50 ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡಿದೆ ನೆಟ್ಫ್ಲಿಕ್ಸ್. ‘ಕಿಂಗ್ಡಮ್’ ಆಕ್ಷನ್ ಸಿನಿಮಾ ಆಗಿದ್ದು, ವಿಜಯ್ ದೇವರಕೊಂಡ ಹಲವು ಷೇಡ್ಗಳಲ್ಲಿ ಈ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ವಿಜಯ್ ದೇವರಕೊಂಡ ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಈಗ ಬಿಡುಗಡೆ ಆಗಿರುವ ಟೀಸರ್, ಲುಕ್ಗಳನ್ನು ನೋಡಿದರೆ ಇದು ಜೈಲು ಖೈದಿಯ ಕತೆ ಇರಬಹುದಾ ಎಂಬ ಅನುಮಾನವೂ ವ್ಯಕ್ತವಾಗುತ್ತದೆ. ಒಟ್ಟಾರೆ ಸಿನಿಮಾದ ಡಿಜಿಟಲ್ ಹಕ್ಕು ಒಳ್ಳೆಯ ಮೊತ್ತಕ್ಕೆ ಬಿಕರಿ ಅಂತು ಆಗಿದೆ.
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೊತೆ ನಟಿಸಿದ್ದ ‘ಗೀತಾ ಗೋವಿಂದಂ’ ಸಿನಿಮಾ ಬಳಿಕ ಇನ್ಯಾವ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಗೆಲುವು ಕಂಡಿಲ್ಲ. ‘ಗೀತಾ ಗೋವಿಂದಂ’ ಸಿನಿಮಾ ಬಳಿಕ ಬಿಡುಗಡೆ ಆದ ‘ನೋಟಾ’, ‘ವರ್ಲ್ಡ್ ಫೇಮಸ್ ಲವ್ವರ್’, ‘ಡಿಯರ್ ಕಾಮ್ರೆಡ್’ (ಸಾಧಾರಣ ಯಶಸ್ಸು), ‘ಟ್ಯಾಕ್ಸಿವಾಲಾ’, ‘ಲೈಗರ್’, ‘ಖುಷಿ’, ‘ಫ್ಯಾಮಿಲಿ ಸ್ಟಾರ್’ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಈಗ ‘ಕಿಂಗ್ಡಮ್’ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ ವಿಜಯ್ ದೇವರಕೊಂಡ.
ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾವನ್ನು ಗೌತಮ್ ತಿನುರೇರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ನಾಗವಂಶಿ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾದ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಸಿನಿಮಾನಲ್ಲಿ ವಿಜಯ್ ಸಹೋದರನ ಪಾತ್ರದಲ್ಲಿ ಸತ್ಯದೇವ್ ನಟಿಸಿದ್ದಾರೆ. ಸಿನಿಮಾ ಇದೇ ತಿಂಗಳ ಕೊನೆಯ ದಿನ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ.