ಟಾಟಾ ನೆಕ್ಸಾನ್ ನಿಯಂತ್ರಣ ತಪ್ಪಿ 4 ಸಾ*ವು, ಫ್ಲೈಓವರ್ನಿಂದ ವ್ಯಕ್ತಿ ಕೆಳಕ್ಕೆ ಬಿದ್ದ ದೃಶ್ಯ CCTVಯಲ್ಲಿ ಸೆರೆ.

ಟಾಟಾ ನೆಕ್ಸಾನ್ ನಿಯಂತ್ರಣ ತಪ್ಪಿ 4 ಸಾ*ವು, ಫ್ಲೈಓವರ್ನಿಂದ ವ್ಯಕ್ತಿ ಕೆಳಕ್ಕೆ ಬಿದ್ದ ದೃಶ್ಯ CCTVಯಲ್ಲಿ ಸೆರೆ.

ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಅಂಬರ್ನಾಥ್ ಫ್ಲೈಓವರ್ ಮೇಲೆ ಭೀಕರ ಅಪಘಾತವೊಂದು ಸಂಭವಿಸಿದೆ. ಟಾಟಾ ನೆಕ್ಸಾನ್ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಹಲವಾರು ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ, ಕಾರು ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಚೌಬೆ ಅವರ ಪತ್ನಿ ಸುಮನ್ ಚೌಬೆ ಕೂಡ ಗಾಯಗೊಂಡಿದ್ದಾರೆ. ಚಾಲಕನಿಗೆ ಹಠಾತ್ ಹೃದಯಾಘಾತ ಸಂಭವಿಸಿರಬಹುದು ಅಥವಾ ಮದ್ಯದ ನಶೆಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಫ್ಲೈಓವರ್​ನಿಂದ ಒಬ್ಬರ ದೇಹ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಕಾಣಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *