ಬೆಂಗಳೂರು : ಸಿಎಂ ಕುರ್ಚಿ ಕದನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಹೈಕಮಾಂಡ್ ಸಿಎಂಗೆ ಕರೆ ಮಾಡಿ ಒಟ್ಟಿಗೆ ಸೇರಿ ಬ್ರೇಕ್ ಫಾಸ್ಟ್ ಮಾಡುವಂತೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರು ಡಿಸಿಎಂ ಡಿಕೆ ಶಿವಕುಮಾರ್ ಕರೆ ಮಾಡಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದರು. ಬಳಿಕ ತಮ್ಮಿಬ್ಬರ ನಡುವೆಯಾವುದೇ ಗೊಂದಲ ಇಲ್ಲ ಎಂದು ಮಾಧ್ಯಮಗಳ ಮುಂದೆ ಒಗ್ಗಟ್ಟಿನ ಪ್ರದರ್ಶಿಸಿದ್ದರು. ಇದರ ಬೆನ್ನಲ್ಲೇ ಇದೀಗ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ಬ್ರೇಕ್ ಫಾಸ್ಟ್ ಮಾಡಲು ನಾಳೆ(ಡಿಸೆಂಬರ್ 02) ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಇಂದು (ಡಿಸೆಂಬರ್ 01) ವಿಧಾನಸೌಧದ ಕಾರ್ಯಕ್ರಮ ವೇಳೆ ತಮ್ಮ ನಿವಾಸಕ್ಕೆ ನಾಳೆ ಬ್ರೇಕ್ ಫಾಸ್ಟ್ಗೆ ಬರುವಂತೆ ಆಹ್ವಾನ ನೀಡಿದರು. ಇದಕ್ಕೆ ಸಿಎಂ ಸಹ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಬ್ರೇಕ್ ಫಾಸ್ಟ್ಗೆ ಸಿದ್ದರಾಮಯ್ಯನವರಿಗೆ ಇಷ್ಟವಾದ ನಾಟಿ ಕೋಳಿ ರೆಸಿಪಿ ಸಿದ್ಧಪಡಿಸಲು ಡಿಕೆಶಿ ಸೂಚಿಸಿದ್ದಾರೆ.
For More Updates Join our WhatsApp Group :




