ದೇವನಹಳ್ಳಿ : ತಾಲ್ಲೂಕು ವಿಜಯಪುರ ಸಮೀಪದ ಚಿಕ್ಕನಹಳ್ಳಿ ಗ್ರಾಮದ ಮುತ್ಯಾಲಮ್ಮ ದೇವಿಯ ದೀಪಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ವಿಜಯಪುರ ಸಮೀಪದ ಚಿಕ್ಕನಹಳ್ಳಿ ಗ್ರಾಮದ ಮುತ್ಯಾಲಮ್ಮ ದೇವಿಯ 4೦ ನೇ ವರ್ಷದ ದೀಪಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಭಕ್ರರ ಸಮ್ಮುಖದಲ್ಲಿ ಭಜನೆ ಮಾಡುವ ಮೂಲಕ ಹಾಗೂ ಆಗಮಿಸಿದ ಮುತ್ತೈದೆಯರಿಗೆ ಬಳೆ ತೊಡಿಸಿ ಹರಿಶಿನ ಕುಂಕುಮ ನೀಡುವ ಕಾರ್ಯ ನಡೆಯಿತು.
ದೇವಾಲಯದ ಪೋಷಕರಾದ ಪಿಳ್ಳಪ್ಪ ಮಾತನಾಡಿ, 8 ತಲೆಮಾರಿನಿಂದ ಮುತ್ಯಾಲಮ್ಮ ದೇವಿಯನ್ನು ಪೂಜಿಸಿಕೊಂಡು ಆರಾಧಿಸಿಕೊಂಡು ಬರುತ್ತಿದ್ದೇವೆ ಹಾಗೂ ಚಿಕ್ಕನಹಳ್ಳಿಯ ಗ್ರಾಮ ದೇವತಯಾಗಿದ್ದು ತಾಯಿಯ ದರ್ಶನಕ್ಕೆ ಸುತ್ತಮುತ್ತಲ ಹಳ್ಳಿಗಳಿಂದ ತಾಲ್ಲೂಕು ಜಿಲ್ಲೆಯಿಂದ ಆಗಮಿಸುತ್ತಾರೆ ಯಾವ ಜಾತಿಭೇದವಿಲ್ಲದೇ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ದೇವಿಯ ಶಕ್ತಿಗೆ ನನ್ನ ಮಗನ ಉಳಿವಿಗೆ ದೇವರಲ್ಲಿ ಹರಕೆ ಮಾಡಿಕೊಂಡಿದ್ದರಿOದ ಉಳಿದಿದೆ ನಾನೆ ಸಾಕ್ಷಿ ಇಂದು ಹುಣ್ಣಿಮೆಯಾದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ತಿಳಿಸಿದರು.
ನಮ್ಮ ಸನಾತನ ಧರ್ಮದ ಉಳಿವಿಗೆ ಇಂತಹ ದೇವತಾ ಕಾರ್ಯಗಳು ಆಗಿಂದಾಗ್ಗೆ ನಡೆಯುತ್ತಿರಬೇಕು ಹಿಂದುಗಳು ಎಲ್ಲರೂ ಭಾಗಿಯಾಗು ಧರ್ಮದ ಉಳಿವಿಗೆ ಕೈಜೋಡಿಸಬೇಕು