ನಿಮಗೆ ಗೊತ್ತಾ ಅಂಜೂರದ ಹಣ್ಣು ವೆಜಿಟೇರಿಯನ್ ಅಲ್ಲ ಅಂತ.

ನಿಮಗೆ ಗೊತ್ತಾ ಅಂಜೂರದ ಹಣ್ಣು ವೆಜಿಟೇರಿಯನ್ ಅಲ್ಲ ಅಂತ.

ಕನ್ನಡದಲ್ಲಿ ಮಾಕಿ ಹಣ್ಣು, ಅಂಜೂರದ ಹಣ್ಣು ಎಂದು ಕರೆಯಲ್ಪಡುವ ಈ ಹಣ್ಣಿಗೆ ಇಂಗ್ಲೀಷ್‌ನಲ್ಲಿ ಫಿಗ್ ಫ್ರೂಟ್ ಅಂತ ಕರಿತಾರೆ. ಇವು ಸಣ್ಣ ಮರಗಳಲ್ಲಿ ಗೊಂಚಲುಗಳಲ್ಲಿ ಬಿಡುತ್ತವೆ. ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಬೆಳೆವಂತ ಮರಗಳು. ಹಣ್ಣುಗಳು ಬಹಳ ರುಚಿಕರವಾಗಿದ್ದು, ಹಸಿಯಾದ ಹಾಗೂ ಒಣಗಿಸಿದ ಹಣ್ಣುಗಳನ್ನು ಸೇವನೆ ಮಾಡಬಹುದಾಗಿದೆ.

ಇನ್ನು ಈ ಹಣ್ಣುಗಳನ್ನು ಮಾಂಸಹಾರಿ ಜಾತಿಗೆ ಸೇರಿದ್ದು ಎನ್ನುವ ಚರ್ಚೆ ಉಂಟಾಗಿದೆ. ಇದಕ್ಕೆ ಕಾರಣ, ಒಂದು ರೀತಿಯ ಕಣಜದ ಹುಳುಗಳು ಪರಾಗಸ್ಪರ್ಶ ಮಾಡುವಾಗ, ಹೆಣ್ಣು ಹುಳುಗಳು ಅಂಜೂರದ ಹೂಗಳಲ್ಲಿ ಹೋಗಿ ತಮ್ಮ ರಕ್ಕೆಗಳನ್ನು ಕಳೆದುಕೊಳ್ಳುತ್ತವೆ. ಇದರಿಂದ ಅದು ಅಲ್ಲಿಯೇ ಸಿಕ್ಕಿ ಬೀಳುತ್ತವೆ. ಹಾಗೆಯೇ ಅಲ್ಲಿಯೇ ಮೊಟ್ಟೆಗಳನ್ನು ಇಡುತ್ತವೆ. ಕೆಲವೊಮ್ಮೆ ಇವುಗಳು ಹೊರಗೆ ಬರಲು ಸಾಧ್ಯವಾಗದೇ ಅಲ್ಲಿಯೇ ಸಾಯುತ್ತವೆ. ಹೂಗಳು ಮಾಗಿ ಕಾಯಿಯಾಗಿ ಹಣ್ಣಾಗುತ್ತವೆ. ಇದರಿಂದ ಇವು ನಿರ್ದಿಷ್ಟ ಕಿಣ್ವಗಳಿಂದ ಆಗಿವೆ ಹಾಗಾಗಿ ಇದು ಮಾಂಸಹಾರಿ” ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.

ನಟಿ ಶೆನಾಜ್ ಟ್ರೆಶರಿವಾಲಾ ಅವರು ಅಂಜೂರದ ಹಣ್ಣುಗಳು ಹೇಗೆ ಬೇಳೆಯುತ್ತವೆ ಎಂಬುದನ್ನು ಒಂದು ವೀಡಿಯೋ ಮೂಲಕ ಹಂಚಿಕೊAಡಿದ್ದಾರೆ. ಈ ಮೂಲಕ ಮೊದಲಿನಿಂದಲೂ ಇದ್ದ ಈ ಚರ್ಚೆಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಆದಾಗ್ಯೂ ಅಂಜೋರದ ಹಣ್ಣುಗಳಲ್ಲಿ ಸಮಪೂರ್ಣ ಸತ್ತ ಕಣಜಗಳನ್ನು ಹೊಂದಿರುವುದಿಲ್ಲ. ಅದರ ಹಣ್ಣಿನ ಕಿಣ್ವಗಳು ವಾಸ್ತವವಾಗಿ ಕಣಜಗಳನ್ನು ಸಾಯುವಂತೆ ಮಾಡುತ್ತವೆ. ಅಂಜೂರದ ಪೊಷಕಾಂಶಗಳಾಗಿ ಪರಿವರ್ತಿಸುತ್ತವೆ. ಕೀಟಗಳ ಪರಾಗಸ್ಪರ್ಶದ ಒಳಗೊಳ್ಳುವಿಕೆಯಿಂದ ಹೀಗೆ ಹೇಳಲಾಗಿದೆ ಎಂದು ಕೆಲವರ ಅಭಿಪ್ರಾಯ.

ಏನೇ ಆಗಲಿ, ಈ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಎ ಬಿ ಸಿ ಬಿ೬ ಕ್ಯಾಲ್ಷಿಯಂ, ಐರನ್, ಮೆಗ್ನೀಷಿಯಂ, ಪೊಟಾಷಿಯಂ ಹೇರಳವಾಗಿದ್ದು ಆರೋಗ್ಯಕ್ಕೆ ಉತ್ತಮ ಎನಿಸಿಕೊಂಡಿದೆ.

Leave a Reply

Your email address will not be published. Required fields are marked *