ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದಿನ ವೇಗದ ಜೀವನದಲ್ಲಿ ನಮ್ಮಲ್ಲಿ ಬಹುತೇಕ ಮಂದಿ ಜೀವನಶೈಲಿಯನ್ನೇ ಬದಲಾಯಿಸಿಕೊಂಡಿದ್ದೇವೆ. ಸಮಯ ವಿಲ್ಲ ಎಂದು ಹೆಚ್ಚಾಗಿ ಹೊರಗಿನ ತಿಂಡಿ ತಿನಿಸುಗಳ ಮೇಲೆಯೇ ಅವಲಂಬಿತರಾಗಿದ್ದೇವೆ. ಜಡ ಜೀವನಶೈಲಿ, ಒಂದೇ ಕಡೆ ಬಹು ಗಂಟೆ ಕುಳಿತು ಕೆಲಸ ಮಾಡುವುದು, ಸದಾ ಕಾಲ ಮೊಬೈಲ್ ಜಾಲಾಡುವುದು ಇತ್ಯಾದಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಹಾನಿಕಾರಕ ಪರಿಣಾಮಗಳನ್ನು ಬೀರುತ್ತಿದೆ. ಅಸಮತೋಲಿತ ಹಾಗೂ ಅನಿಯಮಿತ ಆಹಾರ ಸೇವನೆ ನಮ್ಮಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವಂತೆ ಮಾಡುತ್ತಿದೆ.
ಅಧಿಕ ಕೊಲೆಸ್ಟರಾಲ್ ಮಟ್ಟಗಳು ಹೃದ್ರೋಗ, ಪಾರ್ಶ್ವವಾಯು ಮತ್ತು ಇತರ ಆರೋಗ್ಯ ತೊಡಕುಗಳ ಅಪಾಯವನ್ನು ಹೆಚ್ಚಿಸ ಬಹುದು. ಇಂಡಿಯನ್ ಹಾರ್ಟ್ ಜರ್ನಲ್ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 15ರಿಂದ 25 ಮತ್ತು ನಗರಗಳಲ್ಲಿ ಶೇಕಡಾ 25ರಿಂದ 30ರಷ್ಟು ಮಂದಿಯಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿವೆ.
ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ನಾವು ಉತ್ತಮ ಜೀವನಶೈಲಿಯನ್ನು ಅನುಸರಿಸಬೇಕು. ಆರೋಗ್ಯಕರ ಹೃದಯದ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯ ಕರವಾಗಿಡಲು ಸಹಾಯ ಮಾಡುವ 5 ಅಗತ್ಯ ವಿಷಯಗಳು ಇಲ್ಲಿವೆ.