ಚೆನ್ನಪಟ್ಟಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಸಿ ಪಿ ಯೋಗೀಶ್ವರ್ ಅಖಾಡಕ್ಕೆ ಇಳಿದಿದ್ದಾರೆ, ಆದರೆ ಸಿಪಿವೈಗೆ ಟಿಕೆಟ್ ನೀಡಿದ ವಿಚಾರವಾಗಿ ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಯೋಗೆಶ್ವರ್ ಬೆಂಬಲಿಗರು ಹಾಗು ಮೂಲ ಕಾಂಗ್ರೆಸ್ಸಿಗರ ನಡುವೆ ಸಮನ್ವಯ ತರಲು ಡಿ ಕೆ ಸುರೇಶ್ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಸಭೆ ನಡೆಸಲಾಗುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಅವರು ವ್ಯಕ್ತಿಗತ ರ‍್ಚಸ್ಸು ಬೆಳಿಸಿಕೊಂಡು ಬಂದಿದ್ದಾರೆ. ಹಾಗಾಗಿ ಅವರು ಸ್ವತಂತ್ರ ಅಭ್ಯರ್ಥಿಯಾಗಿಯೂ ಜಯ ಗಳಿಸಿದ್ದಾರೆ. ಈವರೆಗೂ ಸಿಪಿವೈ ಬಿಜೆಪಿಯಲ್ಲಿದ್ದು ಚುನಾವಣೆ ಎದುರಿಸಿರುವುದರಿಂದ ಅವರ ಬೆಂಬಲಿಗರೂ ಹಾಗೂ ಕಾಂಗ್ರೆಸ್ಸಿಗರ ನಡುವೆ ವೈರತ್ವ ಇದ್ದೇ ಇರುತ್ತದೆ. ಈಗ ಸಿಪಾಯಿ ಕಾಂಗ್ರೆಸ್ ಸೇರಿದ ಬಳಿಕ ಬೆಂಬಲಿಗರು ಕಾರ್ಯಕರ್ತರ ನಡುವೆ ಗೊಂದಲ ಅಸಮಾಧಾನ ಬುಗಿಲೆದ್ದಿದೆ.
ಈ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ಯೋಗೇಶ್ವರ್ ಬೆಂಬಲಿಗರು ಭಾಗಲಿದ್ದಾರೆ. ಹೊಂಗನೂರು – ಮಳೂರು – ಬೇವೂರು ಜಿ.ಪಂ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್ ಭಾಗಿಯಾಗಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಇಬ್ಬರೂ ನಾಯಕರು, ಎರಡೂ ಕಡೆಯ ಕಾರ್ಯಕರ್ತರ ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.