ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ವಿ.ಸೀತಾರಾಮಯ್ಯರಿಗೆ ಅಗೌರವ….!

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 27ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೂದಿಗೆರೆಯ ಸಾಹಿತಿ ವಿ.ಸೀತಾರಾಮಯ್ಯರಿಗೆ ಅಗೌರವ ತೋರಲಾಗಿದೆ ಎಂದು ಕನ್ನಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ವಿ.ಸೀತಾರಾಮ್ಯ ಅವರ ಹೆಸರು ನಮೂದಿಸಿಲ್ಲ. ಬೂದಿಗೆರೆಯಲ್ಲಿ ಜನಿಸಿದ ವಿ.ಸೀ ಎಂದೇ ಪ್ರಖ್ಯಾತಿ ಗಳಿಸಿದ್ದ ಅವರ ಹೆಸರಿನಲ್ಲಿ ವಿ.ಸೀ ವೇದಿಕೆ ಎಂದು ಮುದ್ರಣ ಮಾತ್ರ ಮಾಡಲಾಗಿದೆ. ಈ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ವಿ.ಸೀ ಹುಟ್ಟೂರಿನಲ್ಲಿರುವ ಅವರ ಪುತ್ಥಳಿಯನ್ನು ಸ್ವಚ್ಛ ಮಾಡಿ ಮಾಲಾರ್ಪಣೆ ಮಾಡುವಷ್ಟು ಕನಿಷ್ಠ ಸೌಜನ್ಯವೂ ಸಮ್ಮೇಳನ ಆಯೋಜಕರಿಗೆ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮೊದಲು ಬೂದಿಗೆರೆ ಗ್ರಾ.ಪಂ. ಮುಂಭಾಗದಲ್ಲಿರುವ ಪುತ್ಥಳಿಗೆಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ತದನಂತರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಮಾಡಬೇಕಾಗಿತ್ತು. ಆದರೆ ಕಸಾಪ ಈ ಕೆಲ ಮಾಡಿಲ್ಲ. ಕನಿಷ್ಠ ಪಕ್ಷ ಅವರ ಪುತ್ಥಳಿಯನ್ನು ಸ್ವಚ್ಛಗೊಳಿಸುವ ಕನಿಷ್ಠ ಪ್ರಜ್ಞೆಯೂ ಕಸಾಪಗೆ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *