ಡಾಲಿಯಿಂದ ಅಭಿಮಾನಿಗಳಿಗೆ ದೀಪಾವಳಿಗೆ ಗಿಫ್ಟ್!

ಡಾಲಿಯಿಂದ ಅಭಿಮಾನಿಗಳಿಗೆ ದೀಪಾವಳಿಗೆ ಗಿಫ್ಟ್!

ನಟ ಡಾಲಿ ಧನಂಜಯ ಅವರು ಈ ಬಾರಿಯ ದೀಪಾವಳಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ ಅವರ ಮುಂದಿನ ಸಿನಿಮಾದ ರಿಲೀಸ್ ಡೇಟ್ ಅನ್ನು ತಿಳಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ವಾಗಿದ್ದು ಬಹುದೊಡ್ಡ ತಾರಾಗಣ ಇದೆ. ಡಾಲಿ  ಅವರ ತಮಿಳು ಸಿನಿಮಾ ಒಂದು ಸದ್ದಿಲ್ಲದೆ ತೆರೆಕಂಡಿತ್ತು. ಈಗ ಅವರು ನಟಿಸಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಒಂದು ರಿಲೀಸ್ ಆಗೋಕೆ ಮುಹೂರ್ತ ಫಿಕ್ಸ್ ಆಗಿದೆ ಅದು ದೀಪಾವಳಿ ಹಬ್ಬದ ಸಮಯದಲ್ಲಿ. ಧನಂಜಯ್ ಮತ್ತು ತೆಲುಗು ನಟ ಸತ್ಯದ ಒಟ್ಟಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ ಆ ಸಿನಿಮಾಗೆ ಜೀಬ್ರಾ ಅಂತ ಹೆಸರಿಟ್ಟಿದ್ದಾರೆ ಅಂತ ಈ ಹಿಂದೆ ಸುದ್ದಿಯಾಗಿತ್ತು. ಇದೊಂದು ಮಲ್ಟಿ ಸ್ಟಾರರ್ ಸಿನಿಮಾ ಜೊತೆಗೆ ಪಾನ್ ಇಂಡಿಯಾ ಸಿನಿಮಾ ಕೂಡ ಹೌದು. ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 31 ರಂದು ತೆಲುಗು, ಕನ್ನಡ,ತಮಿಳು, ಮತ್ತು ಮಲಯಾಳಂ ಭಾಷೆಗಳಲ್ಲಿ ಜೀಬ್ರಾ ತೆರೆಗೆ ಬರಲಿದೆ. ರಿಲೀಸ್ ಡೇಟ್ ಘೋಷಣೆಯ ಹಿನ್ನೆಲೆಯಲ್ಲಿ ಹೊಸ ಮೋಶನ್ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಒಂದು ಸಿನಿಮಾದಲ್ಲಿ ಕಲಾವಿದರಿಗೆ ವಿಭಿನ್ನ ಲುಕ್ಕುಗಳನ್ನು ನೀಡಲಾಗಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮವಾಗಿದೆ.

Leave a Reply

Your email address will not be published. Required fields are marked *