ಬೆಂಗಳೂರು-ಕಲಬುರಗಿ ನಡುವೆ ದೀಪಾವಳಿ ವಿಶೇಷ ರೈಲು ವ್ಯವಸ್ಥೆ

ರೈಲು ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ: ಭಾರತೀಯ ರೈಲ್ವೆಯಿಂದ ಬಹು ಸೇವೆಗಳ 'ಸೂಪರ್ ಅಪ್ಲಿಕೇಶನ್' ಪ್ರಾರಂಭ

ಬೆಂಗಳೂರು : ಹಬ್ಬಗಳು ಬಂದರೆ ಸಾಕು ಬೆಂಗಳೂರಿನಿಂದ ಹೊರಹೋಗುವ ಜನರ ಸಂಖ್ಯೆ ಹೆಚ್ಚಾಗುತ್ತದೆ, ಈ ನಿಟ್ಟಿನಲ್ಲಿ ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ.

ಬೆಂಗಳೂರು-ಕಲಬುರಗಿ ಎಕ್ಸ್‌ಪ್ರೆಸ್ ವಿಶೇಷ ರೈಲು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ನಿಂದ ಅಕ್ಟೋಬರ್ 30 ಮತ್ತು ನವೆಂಬರ್ 2, 2024 ರಂದು ರಾತ್ರಿ 9.15 ಕ್ಕೆ ಹೊರಟು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಅಡೋಣಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳ ಮೂಲಕ ಮರುದಿನ ಬೆಳಿಗ್ಗೆ 7.40 ಕ್ಕೆ ಕಲಬುರಗಿ ತಲುಪಲಿದೆ ಎಂದು ಎಸ್‌ಡಬ್ಲ್ಯೂಆರ್ ತಿಳಿಸಿದೆ.

ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅಕ್ಟೋಬರ್ 31 ಮತ್ತು ನವೆಂಬರ್ 3 ರಂದು ಬೆಳಿಗ್ಗೆ 9.35 ಕ್ಕೆ ಕಲಬುರಗಿಯಿಂದ ಹೊರಟು ಅದೇ ಮಾರ್ಗದಲ್ಲಿ ಅದೇ ದಿನ ರಾತ್ರಿ 8 ಗಂಟೆಗೆ ಎಸ್‌ಎಂವಿಟಿ, ಬೆಂಗಳೂರು ತಲುಪುತ್ತದೆ.

ಈ ರೈಲು 12 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು, 3 ಸ್ಲೀಪರ್ ಕ್ಲಾಸ್ ಕೋಚ್‌ಗಳು, 2 ಎಸಿ ತ್ರೀ-ಟೈರ್ ಕೋಚ್‌ಗಳು, ಒಂದು ಲಗೇಜ್/ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರ್ ಮತ್ತು ಒಂದು ಸೆಕೆಂಡ್ ಕ್ಲಾಸ್ ಲಗೇಜ್, ಡಿಸೇಬಲ್ ಕೋಚ್‌ನೊಂದಿಗೆ ಬ್ರೇಕ್ ವ್ಯಾನ್ ಸೇರಿದಂತೆ 19 ಬೋಗಿಗಳನ್ನು ಒಳಗೊಂಡಿರುತ್ತದೆ.

Leave a Reply

Your email address will not be published. Required fields are marked *