ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಆಗಿದ್ದು ಅದು ಶ್ವಾಸಕೋಶದಿಂದ ದೇಹದ ಅಂಗಾಂಶಗಳು ಮತ್ತು ಅಂಗಗಳಿಗೆ ಆಮ್ಲಜನಕವನ್ನು ಒಯ್ಯುತ್ತದೆ, ಇದು ಬದುಕುಳಿಯಲು ಅವಶ್ಯಕವಾಗಿದೆ. ಪುರುಷರಿಗೆ ಸಾಮಾನ್ಯ ಹಿಮೋಗ್ಲೋಬಿನ್ ಮಟ್ಟವು ಪ್ರತಿ ಡೆಸಿಲಿಟರ್ಗೆ 14 ರಿಂದ 18 ಗ್ರಾಂ (g/dl), ಮತ್ತು ಮಹಿಳೆಯರಿಗೆ ಇದು 12 ರಿಂದ 16 g/dl ಇರಬೇಕು. ತಲೆನೋವು, ಸುಸ್ತು, ತಲೆತಿರುಗುವಿಕೆ, ತೆಳು ಚರ್ಮ, ಉಸಿರಾಟದ ತೊಂದರೆ ಮತ್ತು ದೌರ್ಬಲ್ಯ ಇವು ರಕ್ತಹೀನತೆಯ ಲಕ್ಷಣಗಳಾಗಿವೆ. ಹಿಮೋಗ್ಲೋಬಿನ್ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ….
ನೆಲ್ಲಿಕಾಯಿ – ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶದಿಂದ ಸಮೃದ್ಧವಾಗಿರುವ ಿದು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
ಒಣದ್ರಾಕ್ಷಿ – ಇದು ಆಯಾಸವನ್ನು ದೂರವಾಗಿಸುತ್ತದೆ, ರಕ್ತ ಹೆಚ್ಚಾಗಲು ಸಹಕರಿಸುತ್ತದೆ.
ಪಾಲಕ್ ಸೊಪ್ಪು – ಇದು ಹಲವು ಪೋಷಕಾಂಶಗಳನ್ನು ಒಳಗೊಂಡಿದೆ.
ಬೆಲ್ಲ – ಇದರಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣದ ಅಂಶವನ್ನು ಹೊಂದಿದ್ದು ಮೂಳೆಗಳನ್ನು ಬಲಪಡಿಸುತ್ತದೆ.