ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..?

500 ವರ್ಷಗಳ ನಂತರ ಗಜಕೇಸರಿ ಯೋಗದಲ್ಲಿ ಆಗಮಿಸಿದ ದೀಪಾವಳಿ: ಈ 3 ಜನ್ಮರಾಶಿಗೆ ಕೈಹಿಡಿಯುವುದು ಶುಕ್ರದೆಸೆ

ದಿನಾಂಕ : 14.10.2024

ವಾರ: ಸೋಮವಾರ

ನಕ್ಷತ್ರ : ಶತಭಿಷ

ತಿಥಿ : ದ್ವಾದಶಿ

ಇಂದಿನ ವಿಶೇಷ : ದ್ವಿದಳ ವ್ರತಾರಂಭ

ಅದೃಷ್ಟ ಸಂಖ್ಯೆ : 6

ಇಂದಿನ ನಿಮ್ಮ ಭವಿಷ್ಯ ವಾಣಿ

ಮೇಷ: ಆಸ್ತಿ ವಿಚಾರದಲ್ಲಿ ಶುಭಸಮಾಚಾರ. ಸ್ಥಿರಾಸ್ತಿಯಿಂದ ಲಾಭ ಬರುವುದು. ವ್ಯಾಪಾರದಲ್ಲಿ ಅವಕಾಶಗಳು ಲಭ್ಯವಾಗಿ ಖುಷಿ. ಶುಭಸಂಖ್ಯೆ: 5

ವೃಷಭ: ಸಮಾಜ ಸೇವಕರಿಗೆ ಶುಭದಾಯಕ ದಿನ. ಷೇರಿನ ವ್ಯವಹಾರದಲ್ಲಿ ಹಿನ್ನಡೆಯಾಗುವುದು. ಅಧಿಕಾರಿಗಳ ಜೊತೆ ವಾದ ವಿವಾದ. ಶುಭಸಂಖ್ಯೆ:1

ಮಿಥುನ: ಚಿಕ್ಕ ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಲಭ್ಯ. ಹಣಕ್ಕೆ ತೊಂದರೆಯಿಲ್ಲ, ನೆಮ್ಮದಿಯ ದಿನ. ಶುಭಸಂಖ್ಯೆ: 8

ಕಟಕ: ವ್ಯಾಯಾಮ ತರಬೇತುದಾರರಿಗೆ ಅಧಿಕ ಶ್ರಮ. ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯುವುದು. ಆಭರಣ ಖರೀದಿಯ ಯೋಚನೆ.

ಸಿಂಹ: ಕುಟುಂಬದಲ್ಲಿ ಸಂತಸದ ವಾತಾವರಣ. ವಿವಾಹಾಕಾಂಕ್ಷಿಗಳಿಗೆ ಶುಭಸುದ್ದಿ ದೊರೆಯುವುದು. ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 4

ಕನ್ಯಾ: ನಿಮ್ಮ ಕನಸಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಮಾತುಗಳ ಮೇಲೆ ಹಿಡಿತವಿರಲಿ. ದಾಂಪತ್ಯದಲ್ಲಿ ಅನ್ನೋನ್ಯತೆ. ಶುಭಸಂಖ್ಯೆ: 7

ತುಲಾ: ಕಟ್ಟಡ ಸಾಮಗ್ರಿಗಳ ವ್ಯಾಪಾರದಲ್ಲಿ ಅನಿರೀಕ್ಷಿತ ಹಾನಿ ಉಂಟಾಗಬಹುದು. ಷೇರು ಮಾರುಕಟ್ಟೆಯಲ್ಲಿ ನಷ್ಟ. ಮಾನಸಿಕ ಭಯ. ಶುಭಸಂಖ್ಯೆ: 7

ವೃಶ್ಚಿಕ: ವಾಹನ ಖರೀದಿಸುವ ಕುರಿತು ಆಲೋಚಿಸುವಿರಿ. ಸಾಲದ ವ್ಯವಹಾರ ಬೇಡ. ಹಣದ ವ್ಯವಹಾರದಲ್ಲಿ ಎಚ್ಚರಿಕೆ ತೀರ ಅಗತ್ಯ. ಶುಭಸಂಖ್ಯೆ: 6

ಧನಸ್ಸು: ಪತ್ರಿಕಾ ಪ್ರತಿನಿಧಿಗಳಿಗೆ ಉತ್ತಮ ಹೆಸರು ಬರುವ ದಿನ. ಪುಸ್ತಕ ಮಾರಾಟಗಾರರಿಗೆ ಆದಾಯ. ತಾಂತ್ರಿಕ ವರ್ಗದವರಿಗೆ ಲಾಭ. ಶುಭಸಂಖ್ಯೆ: 5

ಮಕರ: ಆರ್ಥಿಕತೆಯಲ್ಲಿ ಚೇತರಿಕೆ ಕಾಣಿಸಿಕೊಳ್ಳುವುದು. ಹೊಸ ವ್ಯವಹಾರ ಆರಂಭದ ಕುರಿತು ಪರಿಶೀಲಿ ಸುವಿರಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 7

ಕುಂಭ: ಭೂ ವ್ಯಾಪಾರದಲ್ಲಿ ನಿರಾಶದಾಯಕ ದಿನ. ಸಜ್ಜನರ ಆಶೀರ್ವಾದದಿಂದ ನೆಮ್ಮದಿ. ಅಧಿಕ ಪ್ರಯತ್ನದಿಂದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1

ಮೀನ: ನಿಮ್ಮ ನಿರೀಕ್ಷೆಯಷ್ಟು ಧನಾಗಮನವಿರುತ್ತದೆ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಪರರಿಂದ ಕೆಲಸಗಳಲ್ಲಿ ವಿಘ್ನ ಬಂದೀತು. ಶುಭಸಂಖ್ಯೆ: 4

Leave a Reply

Your email address will not be published. Required fields are marked *