ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..?  ಬಂಧು ಮಿತ್ರರಲ್ಲಿ ಮನಸ್ತಾಪ| ವೈಯಕ್ತಿಕ ಕೆಲಸಗಳಿಗೆ ಹಿತಶತ್ರುಗಳ ಕಾಟ

ದೀಪಾವಳಿ ದಿನದಂದು ಈ ರಾಶಿಗೆ ಹಣದಿಂದ ಹಬ್ಬ.

ದಿನಾಂಕ : 26.09.2024

ವಾರ : ಗುರುವಾರ

ತಿಥಿ : ನವಮಿ

ನಕ್ಷತ್ರ : ಪುನರ್ವಸು

ಇಂದಿನ ವಿಶೇಷ : ಅವಿಧಾನವಮಿ

ಅದೃಷ್ಟ ಸಂಖ್ಯೆ : 0

ಮೇಷ: ಗುರು ಹಿರಿಯರ ದರ್ಶನ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದು. ಸಂಗಾತಿಯೊಂದಿಗೆ ಸಣ್ಣ ಮನಸ್ತಾಪ. ಶುಭಸಂಖ್ಯೆ: 9

ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ. ಕಮಿಷನ್ ವ್ಯಾಪಾರ ದಲ್ಲಿ ಒತ್ತಡ. ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು ದೊರೆಯುವುದು. ಶುಭಸಂಖ್ಯೆ: 3

ಮಿಥುನ: ಕೆಲಸಗಳಲ್ಲಿ ಆಲೋಚಿಸಿ ಮುಂದುವರಿಯಿರಿ. ತೊಂದರೆಗಳನ್ನು ನಿವಾರಿಸುವಿರಿ. ಹಳೇ ಸ್ನೇಹಿತರ ಭೇಟಿಯಾಗುವುದು. ಶುಭಸಂಖ್ಯೆ: 8

ಕಟಕ: ವಿದ್ಯುತ್ ಸಂಬಂಧೀ ಕೆಲಸದಲ್ಲಿ ಜಾಗ್ರತೆ. ಸಹೋದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳುವಿರಿ. ಕಳೆದಿದ್ದ ವಸ್ತು ಕೈ ಸೇರುವುದು. ಶುಭಸಂಖ್ಯೆ: 6

ಸಿಂಹ: ವೈಯಕ್ತಿಕ ಕೆಲಸಗಳಿಗೆ ಹಿತಶತ್ರುಗಳ ಕಾಟ. ದುಷ್ಟರ ಸಹವಾಸದಿಂದ ದೂರವಿರಿ. ಕುಟುಂಬದಲ್ಲಿ ಆಸ್ತಿ ಕಲಹ ಉಂಟಾಗಬಹುದು. ಶುಭಸಂಖ್ಯೆ: 3

ಕನ್ಯಾ: ಹಣಕಾಸಿನ ವಿಷಯಗಳಲ್ಲಿ ಎಚ್ಚರ ವಹಿಸಿ. ಧಾರ್ಮಿಕ ಕಾರ್ಯಕ್ರಮಕ್ಕೆ ಖರ್ಚು. ಕೈಗೊಂಡ ಕೆಲಸಗಳಲ್ಲಿ ಜಯ ದೊರೆತು ಖುಷಿ. ಶುಭಸಂಖ್ಯೆ:1

ತುಲಾ: ಧಾರ್ಮಿಕ ಆಚರಣೆಗಳಿಂದ ಮನಃಶಾಂತಿ. ವ್ಯಾಪಾರದ ಸ್ಥಳ ಬದಲಾವಣೆಯಾಗಬಹುದು. ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಲಾಭ. ಶುಭಸಂಖ್ಯೆ: 5

ವೃಶ್ಚಿಕ: ಪ್ರಯಾಣಕ್ಕೆ ವಿಪರೀತ ಖರ್ಚು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶ ಸಿಗದು. ವೈದ್ಯರಿಗೆ ಉತ್ತಮ ಆದಾಯದ ದಿನ. ಶುಭಸಂಖ್ಯೆ: 7

ಧನಸ್ಸು: ನಂಬಿದವರಿಂದ ಮೋಸ ಹೋಗುವಿರಿ. ಮಧ್ಯಸ್ಥಿಕೆಯಿಂದ ಲಾಭ. ನೌಕರಿಯಲ್ಲಿ ಬಡ್ತಿ ದೊರೆತು ಬಹುದಿನಗಳ ಕನಸು ಸಾಕಾರ. ಶುಭಸಂಖ್ಯೆ: 8

ಮಕರ: ದುಬಾರಿ ವಸ್ತುಗಳನ್ನು ಖರೀದಿಸುವಿರಿ. ಸ್ವಸಾಮರ್ಥ್ಯದಿಂದ ಸಾಧನೆ ಮಾಡಿದ ಸಮಾಧಾನ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ:3

ಕುಂಭ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಒಪ್ಪಂದದ ವ್ಯವಹಾರಗಳಲ್ಲಿ ಗಣನೀಯ ಲಾಭ. ನೂತನ ನಿವೇಶನ ಖರೀದಿಸುವ ಸಾಧ್ಯತೆ. ಶುಭಸಂಖ್ಯೆ: 6

ಮೀನ: ಆರಕ್ಷಕ ಅಧಿಕಾರಿಗಳಿಗೆ ಒತ್ತಡ. ಬಂಧು ಮಿತ್ರರಲ್ಲಿ ಮನಸ್ತಾಪ. ಕೃಷಿ ಉತ್ಪನ್ನಗಳಲ್ಲಿ ಅನಿರೀಕ್ಷಿತ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 9

Leave a Reply

Your email address will not be published. Required fields are marked *