ಹೆಣ್ಣುಮಕ್ಕಳಿಗಾಗಿ ಸರ್ಕಾರದಿಂದ, ಯೋಜನೆ ರೂಪದಲ್ಲಿ ಸಿಗುವ ಸಹಕಾರಗಳು ಯಾವುವು ಗೊತ್ತಾ…

ಹೆಣ್ಣುಮಕ್ಕಳಿಗಾಗಿ ಸರ್ಕಾರದಿಂದ, ಯೋಜನೆ ರೂಪದಲ್ಲಿ ಸಿಗುವ ಸಹಕಾರಗಳು ಯಾವುವು ಗೊತ್ತಾ…

 ಹೆಣ್ಣು ಮಕ್ಕಳು ಬರಿ ಅಡುಗೆ ಮನೆಗೆ ಮಾತ್ರಾ ಸೀಮಿತವಲ್ಲ, ಆರ್ಥಿಕತೆಯ ಮುಖ್ಯ ವಾಹಿನಿಗೆ ತರಲು ಸರ್ಕಾರ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿ ಪ್ರಯತ್ನಿಸುತ್ತಿದೆ. ಹಾಗಾದ್ರೆ ಯಾವುವು ಆ ಯೋಜನೆಗಳು ಅನ್ನೊದನ್ನಾ ಒಂದೊಂದಾಗಿ ತಿಳಿಯೊಣ ಬನ್ನಿ.

1.ಸುಕನ್ಯ ಸಮೃದ್ಧಿ ಯೋಜನೆ

10 ವರ್ಷದ ಒಳಗಿನ ವಯಸ್ಸಿನ ಹೆಣ್ಣು ಮಕ್ಕಳಿಗೆ ಸರ್ಕಾರ ಸುಕನ್ಯ ಸಮೃದ್ಧಿ ಯೋಜನೆಯನ್ನು 2015 ರಲ್ಲೆ ಬಿಡುಗಡೆ ಮಾಡಿದೆ. 10 ವರ್ಷದ ಒಳಗಿನ ಹೆಣ್ಣು ಮಕ್ಕಳಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಬಹುದು. ಈ ಯೋಜನೆಯ ಸಹಾಯದಿಂದ ವರ್ಷಕ್ಕೆ 150 ರೂ ದಿಂದ 1,50,000 ರೂ ವರೆಗೆ 15 ವರ್ಷ ಹೂಡಿಕೆ ಮಾಡಬಹುದು. ಇದರಿಂದ ಶೇಕಡ 8.2 ಬಡ್ಡಿ ಸಿಗುತ್ತದೆ.

2.ಬೇಟಿ ಬಚಾವೋ ಬೇಟಿ ಪಡಾವೋ

ಕೆಲ ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇನ್ನು ತಾತ್ಸಾರದ ಮನೋಭವವು ಇದೆ. ಅವರನ್ನು ಓದಿಸುವ ಬದಲು ಮದುವೆಗೆ ಹೆಚ್ಚು ಒತ್ತಡ ಕೊಡುವ ಜನರಿದ್ದಾರೆ. ತಾತ್ಸಾರದ ಮನೋಭಾವವನ್ನು ಹೋಗಲಾಡಿಸಿ ಸಮಾನತೆಯ ಭಾವ ತರುವ ನಿಟ್ಟಿನಲ್ಲಿ ಸರ್ಕಾರವು ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನವನ್ನು 2015 ರಲ್ಲಿ ಆರಂಭಿಸಿತು.

3.ಹದಿಹರೆಯದವರು

ಹದಿಹರೆಯದ ವಯಸ್ಸಿನ 14 ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಪೌಷ್ಟಿಕಾಂಶ ಮತ್ತು ಆರೋಗ್ಯ ಪಾಲನೆಯ ನೆರವು ನೀಡಲು ಅಂಗನವಾಡಿ ಮತ್ತು ಶಾಲೆಗಳ ಮೂಲಕ ಹದಿಹರೆಗೆದ ಹುಡುಗಿಯರಲ್ಲಿ ಮುಟ್ಟಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ ಮತ್ತು ಜನೌಷಧ ಕೇಂದ್ರಗಳಲ್ಲಿ ಒಂದು ರೂಪಾಯಿಗೆ ಸ್ಯನಿಟರಿ ಪ್ಯಾಡ್ ಮಾರಲಾಗುತ್ತಿದೆ.

4.ಉಡಾನ್ ಸ್ಕೀಮ್

ಇನ್ನು ಈ ಸ್ಕೀಮ್ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಹೆಚ್ಚಿಸಲು 2016 ರಲ್ಲಿ ಬಿಡುಗಡೆ ಮಾಡಲಾಯಿತು. ಪಿಯುಸಿ ವಿದ್ಯಾರ್ಥಿನಿಯರಿಗೆ ವಿವಿಧ ಉತ್ತೇಜನಗಳನ್ನು ನೀಡಲಾಗುತ್ತದೆ. ಇನ್ನು ವಿಧ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಹೋಗದಂತೆ ತಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಈ ನಿಟ್ಟಿನಲ್ಲಿ ಎಂಟನೇ ತರಗತೆ ಪಾಸ್ ಆಗಿ 9 ನೇ ತರಗತಿಗೆ ಹೋಗುವ ಅವಿವಾಹಿತ ಹೆಣ್ಣು ಮಕ್ಕಳ ಖಾತೆಗೆ ಹಣ ಹಾಕಿ ಉತ್ತೇಜಿಸಲಾಗುತ್ತದೆ.

Leave a Reply

Your email address will not be published. Required fields are marked *