ದಸರಾ ಹಬ್ಬವನ್ನು ವಿಜಯದಶಮಿ ಎಂದು ಕರೆಯುವ ಹಿಂದಿನ ಕಾರಣವೇನು ಗೊತ್ತಾ?

ದಸರಾ ಹಬ್ಬವನ್ನು ವಿಜಯದಶಮಿ ಎಂದು ಕರೆಯುವ ಹಿಂದಿನ ಕಾರಣವೇನು ಗೊತ್ತಾ?

ದಸರಾ ಹಬ್ಬ, ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಆಚರಿಸುವ ಹಬ್ಬವಾಗಿದೆ. ಹಿಂದು ಧರ್ಮದಲ್ಲಿ ದಸರಾ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ ಏಕೆಂದರೆ, ಸೀತಾದೇವಿಯನ್ನು ಅಪಹರಿಸಿದ ರಾವಣನನ್ನು ಶ್ರೀರಾಮ ಯುದ್ಧದಲ್ಲಿ ಸೋಲಿಸಿದ ದಿನವೆಂದು ವಿಜಯೋತ್ಸವದ ಸಂಕೇತವಾಗಿ ಆಚರಿಸುತ್ತಾರೆ. ಮೈಸೂರು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಈ ವರ್ಷದಲ್ಲಿ ವಿಜಯದಶಮಿ ಹಬ್ಬವು ಅಕ್ಟೋಬರ್ 12 ರಂದು ಬೆಳಿಗ್ಗೆ 10:58ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 13 ರಂದು ಬೆಳಿಗ್ಗೆ 9:08 ಕ್ಕೆ ಕೊನೆಗೊಳ್ಳುತ್ತದೆ.

ವಿುಜಯದಶಮಿ ಹಬ್ಬವನ್ನು ಆಚರಿಸಲು ಎರೆಡು ಕಾರಣವಿದೆ. ಒಂಬತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ದುರ್ಗಾ ದೇವಿಯು ವಿಜಯ ದಶಮಿಯಂದು ರಾಕ್ಷಸ ಮಹಿಷಾಸುರನನ್ನು ಕೊಂದಳು ಎನ್ನುವುದು ಒಂದು ಕಾರಣವಾದರೆ. ಮತ್ತೊಂದು ಕಾರಣ, ಮರ್ಯಾದಾ ಪುರುಷೋತ್ತಮ ರಾಮನು ದುಷ್ಟ ರಾವಣನನ್ನು ಸಂಹಾರ ಮಾಡಿದ್ದು ಇದೇ ವಿಜಯದಶಮಿ ದಿನದಂದು. ಇನ್ನು ದುರ್ಗಾ ದೇವಿಯು ವಿಜಯ ಗಳಿಸಿದ ಕಾರಣ ಈ ದಿನವನ್ನು ದೇವಿ ನವರಾತ್ರಿ ಎಂದೂ ಕರೆಯುತ್ತಾರೆ ಮತ್ತು 9 ದಿನಗಳ ಕಾಲ ದುರ್ಗಾ ಮಾತೆಯನ್ನು ವಿವಿಧ ರೂಪಗಳಲ್ಲಿ ಅಲಂಕರಿಸಿ ವಿಶೇಷ ಪುಜೆ ಸಲ್ಲಿಸಲಾಗುತ್ತದೆ.

ದಸರಾ ದಿನದಂದು ಶಮಿ ಪೂಜೆಯನ್ನು ಮಾಡಲಾಗುತ್ತದೆ.

ವಿಜಯದಶಮಿ ಶುಭಾಶಯ ಕೋರಲು ಶಮಿ ಮರದ ಎಲೆಗಳನ್ನು ಚಿನ್ನದ ರೂಪದವೆಂದು ಪರಿಗಣಿಸಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಬಂಗಾಳಿಗಳು ದುರ್ಗಾ ಪೂಜೆಯ ಹತ್ತನೇ ದಿನದಂದು ಬಿಜೋಯ್ ದಶಮಿಯನ್ನು ಆಚರಿಸುತ್ತಾರೆ. ಈ ಹಬ್ಬದಂದು ದುರ್ಗಾ ಮಾತೆಯ ವಿಗ್ರಹಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ನದಿಯಲ್ಲಿ ಮುಳುಗಿಸಲಾಗುತ್ತದೆ. ದಸರಾ ದಿನದಂದು ಶಮಿ ಪೂಜೆ, ಅಪರಾಜಿತ ಪೂಜೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *