ನಮಸ್ಕಾರ ವಿಕ್ಷಕರೇ, ನಾವು ಆಗಾಗ ಅಥವಾ ಏನಾದ್ರು ವಿಶೇಷವಿದ್ರೆ ದೇವಸ್ಥಾನಕ್ಕೆ ಹೋಗ್ತಾ ಇರ್ತಿವಿ. ಆದ್ರೆ ಎಂದಾದ್ರು ಗಮನಿಸಿದಿರಾ? ದೇವಸ್ಥಾನಕ್ಕೆ ಹೋಗೋದ್ರಿಂದ ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಏನೂ ಅಂತಾ?
ದೇವಸ್ಥಾನಕ್ಕೆ ಹೆಚ್ಚಾಗಿ ಹೋಗುವುದರಿಂದ ಆರೋಗ್ಯ ವೃದ್ಧಿಸುತ್ತದೆ, ಜೋತೆಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಅಲ್ದೆ, ದೇವಸ್ಥಾನದಲ್ಲಿ ಹೆಚ್ಚಿನ ಹೊತ್ತು ಕಾಲ ಕಳಿಯುವುದರಿಂದ ಅಥವಾ ಜಪಾ ಮಾಡುವುದರಿಂದ ದೇಹದ ಆಯಾಸಾ ಕಡಿಮೇಯಾಗಿ, ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ದೇವಸ್ಥಾನದಲ್ಲಿನ ಶಾಂತತೆಯಿಂದ, ನಮ್ಮ ಮನಸ್ಸು ಪ್ರಶಾಂತವಾಗುವುದರ ಜೋತೆಗೆ ದೇವಸ್ಥಾನಕ್ಕೆ ಬರಿಗಾಲಿನಿಂದ ಹೋಗುವುದರಿಂದ ಪಾದದ ಮೇಲೆ ಒತ್ತಡ ಬಿದ್ದು, ರಕ್ತದ ಪರಿಚಲನೆ ಉತ್ತಮವಾಗಿ, ದೇಹದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇನ್ನು ದೇವಸ್ಥಾನದಲ್ಲಿ ಸದಾ ಸಕಾರಾತ್ಮಕ ಅಂದ್ರೆ ಪೊಸಿಟೀವ್ ಎನರ್ಜಿ ಇರುತ್ತದೆ, ಇದರಿಂದ ನಾವು ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಮ್ಮ ದೇಹದಲ್ಲಿ ಪೊಸಿಟೀವ್ ಎನರ್ಜಿ ಪ್ರವೇಶಿಸುತ್ತದೆ.