ಹೊಸ ಅವತಾರದಲ್ಲಿ ಬಿಡುಗಡೆಯಾದ ವ್ಯಾಗನ್ ಆರ್ ನಲ್ಲಿ ಏನೆಲ್ಲಾ ಇದೆ ಗೊತ್ತಾ..?

ಹೊಸ ಅವತಾರದಲ್ಲಿ ಬಿಡುಗಡೆಯಾದ ವ್ಯಾಗನ್ ಆರ್ ನಲ್ಲಿ ಏನೆಲ್ಲಾ ಇದೆ ಗೊತ್ತಾ..?

ತಂತ್ರಜ್ಞಾನ : ಮಾರುತಿ ಸುಜುಕಿ ತನ್ನ ಜನಪ್ರಿಯ ಹ್ಯಾಚ್ಬ್ಯಾಕ್ ಕಾರು ವ್ಯಾಗನ್ ಆರ್ (Wagon R) ಅನ್ನು ಹೊಸ ಇಂಜಿನ್ ಹಾಗೂ ಅಭಿವೃದ್ಧಿಪಡಿಸಿದ ಭದ್ರತಾ ಸೌಲಭ್ಯಗಳೊಂದಿಗೆ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಈ ಬಾರಿ ಹೊಸದಾಗಿ ಎಲ್ಲ ಮಾದರಿಗಳಲ್ಲೂ ಸ್ಟಾಂಡರ್ಡ್ 6 ಏರ್ಬ್ಯಾಗ್ಗಳನ್ನು ಸೇರಿಸಲಾಗಿದ್ದು, ಕಾರು ಇನ್ನಷ್ಟು ಸುರಕ್ಷಿತವಾಗಿರಲಿದೆ.

ಹೊಸ ವ್ಯಾಗನ್ ಆರ್ ಬೆಲೆ

ಹೊಸ ಮಾದರಿಯ ಬೆಲೆ ಹಿಂದಿನ ಮಾದರಿಯ ಹೋಲಿಕೆಯಲ್ಲಿ ₹13,000 ರಷ್ಟು ಹೆಚ್ಚಾಗಿದೆ (ವೆರಿಯಂಟ್ ಅನುಸಾರ ಬದಲಾಗುತ್ತದೆ).  LXi ಬೇಸ್ ಮಾದರಿ  ಬೆಲೆ ₹5.64 ಲಕ್ಷ (ಎಕ್ಸ್-ಶೋರೂಂ)  CNG ಮಾದರಿ ಆರಂಭಿಕ ಬೆಲೆ ₹6.54 ಲಕ್ಷ , ZXi+ ಟಾಪ್ ಮಾದರಿ ₹7.35 ಲಕ್ಷದವರೆಗೆ ಇರುತ್ತದೆ.

ಇಂಜಿನ್ ಹಾಗೂ ಮೈಲೆಜ್

ವ್ಯಾಗನ್ ಆರ್ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 1.0 ಲೀಟರ್, 3 ಸಿಲಿಂಡರ್ ಇಂಜಿನ್ 68.5hp ಪವರ್, 91.1Nm ಟಾರ್ಕ್, 1.2 ಲೀಟರ್ 4 ಸಿಲಿಂಡರ್ ಇಂಜಿನ್ 90.95hp ಪವರ್, 113.7Nm ಟಾರ್ಕ್,   ಈ ಇಂಜಿನ್ಗಳು E20 ಫ್ಯುಯೆಲ್-ಕಂಪ್ಯಾಟಿಬಲ್ ಆಗಿದ್ದು, 20% ಎಥನಾಲ್ ಹಾಗೂ 80% ಪೆಟ್ರೋಲ್ನಲ್ಲಿ ಚಾಲನೆಯಾಗುತ್ತವೆ. 1.0 ಲೀಟರ್ ಇಂಜಿನ್ನಲ್ಲಿ CNG ಆಯ್ಕೆ ಲಭ್ಯವಿದ್ದು, ಅದು ಮಾತ್ರ ಮ್ಯಾನುಯಲ್ ಗಿಯರ್ಬಾಕ್ಸ್ ಜೊತೆಗೆ ಬರುತ್ತದೆ.  ಈಗಲೂ ಪೆಟ್ರೋಲ್ ಮಾದರಿಗಳು 23–24 ಕಿಮೀ/ಲೀ ಮೈಲೆಜ್ ನೀಡುವ ನಿರೀಕ್ಷೆಯಿದೆ.  CNG ಮಾದರಿ 33.47 ಕಿಮೀ/ಕೆ.ಜಿ ಮೈಲೆಜ್ ನೀಡುತ್ತದೆ.

ಭದ್ರತಾ ವೈಶಿಷ್ಟ್ಯಗಳು

ಎಲ್ಲ ಮಾದರಿಗಳಲ್ಲೂ 6 ಏರ್ಬ್ಯಾಗ್ ಸ್ಟಾಂಡರ್ಡ್ ಆಗಿ ಲಭ್ಯವಾಗಲಿವೆ.  ಹೊಸ  ಥ್ರೀ-ಪಾಯಿಂಟ್ ಸೆಂಟರ್ ಸೀಟ್ ಬೆಲ್ಟ್ , ABS, EBD, ESP, ಸೆಂಟ್ರಲ್ ಲಾಕ್, ರಿಯರ್ ಪಾರ್ಕಿಂಗ್ ಸೆನ್ಸರ್ಗಳು ಇರಲಿವೆ.

ಇತರ ಸೌಲಭ್ಯಗಳು

7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್,   ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ,   ಇಲೆಕ್ಟ್ರಿಕ್ ORVMs, 14 ಇಂಚಿನ ಅಲಾಯ್ ವೀಲ್ಸ್, ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್, ಸ್ಟೀರಿಂಗ್ ಮಾಉಂಟೆಡ್ ಕಂಟ್ರೋಲ್ಸ್ ಇರಲಿದೆ.

ಅತ್ಯಂತ ಹೆಚ್ಚು ಮಾರಾಟವಾಗುವ ಕಾರು

ವ್ಯಾಗನ್ ಆರ್ ಮೊದಲ ಬಾರಿಗೆ 18 ಡಿಸೆಂಬರ್ 1999 ರಂದು ಭಾರತದಲ್ಲಿ ಲಾಂಚ್ ಮಾಡಲ್ಪಟ್ಟಿತು.  2024–25 ಆರ್ಥಿಕ ವರ್ಷದಲ್ಲಿ ಇದು 4ನೇ ಬಾರಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಆಗಿದೆ.   33.7 ಲಕ್ಷ ಯೂನಿಟ್ ಮಾರಾಟ ಆಗಿದ್ದು, ಶೀಘ್ರದಲ್ಲೇ 40 ಲಕ್ಷ ಮಾರುಕಟ್ಟೆ ತಲುಪಲಿದೆ.  ಪ್ರತಿಯೊಬ್ಬ 4 ಗ್ರಾಹಕರಲ್ಲಿ ಒಬ್ಬನು ಮತ್ತೆ ಈ ಕಾರು ಖರೀದಿ ಮಾಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

ಈ ಕಾರಣಗಳಿಂದ ಜನಪ್ರಿಯ

ಕಡಿಮೆ ಬೆಲೆ, ಉತ್ತಮ ಮೈಲೆಜ್ , ಸ್ಪೇಶಿಯಸ್ ಇಂಟೀರಿಯರ್, ಟಾಲ್ ಬಾಯ್ ಡಿಸೈನ್, ಲೋ ಮೇಂಟನಸ್, CNG ಆಯ್ಕೆ,  ದಶಕಗಳ ನಂಬಿಕೆ. 

ಹೊಸ ಇಂಜಿನ್, ಹೆಚ್ಚಿನ ಭದ್ರತೆ ಮತ್ತು ವೈಶಿಷ್ಟ್ಯಗಳೊಂದಿಗೆ ಮಾರುತಿ ವ್ಯಾಗನ್ ಆರ್ ಇನ್ನಷ್ಟು ಭರವಸೆ ನೀಡುತ್ತಿದೆ. ಈ ಕಾರು ಈಗಲೂ ಮಿಡ್-ಬಜೆಟ್ ಕಾರು ಪ್ರಿಯರಿಗೆ ಪರಿಪೂರ್ಣ ಆಯ್ಕೆಯಾಗಿದೆ.

Leave a Reply

Your email address will not be published. Required fields are marked *