ನಟಿ ನಂದಿತಾ ಶ್ವೇತಾ ಅವರು ‘ನಂದ ಲವ್ಸ್ ನಂದಿತಾ’ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರದ ‘ಜಿಂಕೆ ಮರೀನಾ..’ ಹಾಡು ಪಡೆದ ಜನಪ್ರಿಯತೆ ಅಷ್ಟಿಷ್ಟಲ್ಲ. ಆ ಬಳಿಕ ನಂದಿತಾಗೆ ಜಿಂಕೆ ಮರಿ ಎಂಬ ಟೈಟಲ್ ಫಿಕ್ಸ್ ಆಯಿತು. ಈ ಸಿನಿಮಾ ಬಳಿಕ ಅವರು ಪರಭಾಷೆಯಲ್ಲಿ ಬ್ಯುಸಿ ಇದ್ದರು. ಈಗ ಜಿಂಕೆ ಮರಿ ಕನ್ನಡ ಇಂಡಸ್ಟ್ರಿಗೆ ಮರಳಿ ಬಂದಿದೆ. ‘ಬೆನ್ನಿ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಂದಿತಾ ಶ್ವೇತಾ ನಟಿಸುತ್ತಿದ್ದಾರೆ.

ನಂದಿತಾ ಶ್ವೇತಾ ಅವರು ‘ಜಿಂಕೆ ಮರೀನಾ..’ ಹಾಡಿಗೆ ಪಡೆದ ಜನಪ್ರಿಯತೆ ಅಷ್ಟಿಷ್ಟಲ್ಲ. ‘ನಂದ ಲವ್ಸ್ ನಂದಿತ’ ಬಳಿಕ ಅವರು ಪರಭಾಷೆಯಲ್ಲಿ ಬ್ಯುಸಿ ಇದ್ದರು. ಹಲವು ವರ್ಷಗಳ ನಂತರ ‘ಬೆನ್ನಿ’ ಎಂಬ ಮಹಿಳಾ ಪ್ರಧಾನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು, ಕಿಚ್ಚ ಸುದೀಪ್ ಅವರ ಖಡಕ್ ಧ್ವನಿ ಕೂಡ ಇದೆ.
ನಂದಿತಾ ಶ್ವೇತಾ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಕೂಡ ಇದೆ. ಆದರೆ, ಅವರಿಗೆ ಸರಿ ಹೊಂದುವ ಪಾತ್ರ ಇಷ್ಟು ದಿನ ಸಿಕ್ಕಿರಲಿಲ್ಲ. ಈಗ ಕೊನೆಗೂ ಅಂಥದ್ದೊಂದು ಪಾತ್ರ ಅವರಿಗೆ ದೊರೆತಿದ್ದು, ಖುಷಿಯಿಂದ ಸಿನಿಮಾ ಮಾಡಲು ಒಪ್ಪಿದ್ದಾರೆ.