ಮೆನ್ಸುರೆಶನ್ ಅಂದ್ರೆ ಪಿರಿಯೆಡ್ಸ್ ಟೈಮ್ ಅಲ್ಲಿ ಹೆಣ್ಣುಮಕ್ಕಳಿಗೆ ಹಲವಾರು ರೂಲ್ಸ್ ಇರುತ್ತೆ. ಶಾಸ್ತ್ರಗಳಲ್ಲು ಇದರ ಬಗ್ಗೆ ಉಲ್ಲೆಖವಿದೆ. ಅಡುಗೆ ಮನೆಗೆ ಹೊಗ್ಬಾರ್ದು, ದೇವಸ್ಥನಕ್ಕೆ ಹೊಗ್ಬಾರ್ದು, ಮನೆಲಿ ಇರುವಂತಹ ಪಾತ್ರೆ ಉಪ್ಪಿನಕಾಯಿಗಳನ್ನ ಮುಟ್ಬಾರ್ದು ಅಂತೆಲ್ಲಾ ರೂಲ್ಸ್ ಇರುತ್ತೆ. ಇವತ್ತು ಈ ರೂಲ್ಸ್ನ ಹಿಂದಿನ ಕಾರಣವನ್ನ ತಿಳಿದುಕೊಳ್ಳೋಣ. ಹಿಂದಿನ ಕಾಲದಲ್ಲಿ ಬೀದೀ ದೀಪಗಳು ಇರ್ಲಿಲ್ಲ, ದೇವಸ್ಥಾನಗಳು ಮನೆಯಿಂದ ತುಂಬಾ ದೂರ ದೂರ ಇದ್ವು ಅದಲ್ದೆ ಆಗಿನ ಕಾಲದ ಹಣ್ಣು ಮಕ್ಕಳು ದೇವಸ್ಥಾನಕ್ಕೆ ಬೆಳಗಿನಜಾವ ೪ ರಿಂದ ೬ ಗಂಟೆ ಕಾಲದಲ್ಲಿ ಹೋಗ್ತಿದ್ರು. ಕತ್ತೆಲೆಯಲ್ಲಿ ಕಾಡಿನಲ್ಲಿ ನಡ್ಕೋಂಡು ಹೊಗ್ಬೇಕಾದ್ರೆ, ರಕ್ತದ ವಾಸ್ನೆಗೆ ಕಾಡು ಪ್ರಾಣಿಗಳು ಅಟ್ರಾಕ್ಟ್ ಆಗ್ತಿದ್ದವು ಇದರಿಂದ ಎಷ್ಟೋ ಜನ ಹೆಣ್ಣು ಮಕ್ಕಳು ಕಾಡು ಪ್ರಾಣಿಗಳಿ ಬಲಿಯಾಗ್ತಿದ್ರು ಇದೇ ಕಾರಣಕ್ಕೆ ಈ ಒಂದು ಸಮಯದಲ್ಲಿ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೊಗ್ಬಾರ್ದು ಅನ್ನೊದು ಸೃಷ್ಟಿಯಾಯ್ತು ಅನ್ನೊದು ಒಂದು ಕಾರಣವಾದ್ರೆ. ಇನ್ನೊಂದು ಕಾರಣ ದೇವಾಸ್ಥಾನದಲ್ಲಿ ಸಕಾರಾತ್ಮಕ ಅಂದ್ರೆ ಪೊಸಿಟಿವ್ ವಾತಾವರಣ ಇರುತ್ತೆ ಆದ್ರೆ ಈ ಸಮಯದಲ್ಲಿ ಹೆಣ್ಣು ಮಕ್ಕಳ ದೇಹನಲ್ಲಿ ನಕಾರಾತ್ಮಕ ಅಂದ್ರೆ ನೆಗೆಟಿವ್ ವೈಬ್ ಇರುತ್ತೆ, ಎರೆಡು ಹೊಂದದ ಕಾರಣ ಹೆಣ್ಣಿನ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು. ಇನ್ನು ಕೊನೆಯದಾಗಿ ಹೆಣ್ಣು ಮಕ್ಕಳಿಗೆ ಕೆಲವೊಂದು ದಿನಗಳ ಕಾಲ ವಿಶ್ರಾಂತಿ ಸಿಗಲಿ ಅನ್ನೋ ಕಾರಣಕ್ಕೆ ಈ ಸಂಪ್ರದಾಯ ಹುಟ್ಟುಕೊಂಡಿರಬಹುದು.
ಆ ಸಮಯದಲ್ಲಿ ಹೆಣ್ಣು-ಮಕ್ಕಳು ದೇವಸ್ಥಾನಕ್ಕೆ ಹೋಗ್ಬಾರ್ದು ಅನ್ನೊದನ್ನಾ ಹಿರಿಯರು ಯಾಕೇ ಸೃಷ್ಟಿಸಿದರು ಗೊತ್ತಾ?
