ಹಿಂದೂ ಸಂಪ್ರದಾಯದಲ್ಲಿನ ಮಂಗಳಕರ ಹಬ್ಬಗಳಲ್ಲಿ ರಕ್ಷಾಬಂಧನವೂ ಒಂದು. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಷ ಪಕ್ಷದ ಹುಣ್ಣಿಮೆಯಂದು ಈ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಹೋದರ-ಸಹೋದರಿಯರ ನಡುವಿನ ಸಂಬಂಧವನ್ನು ಬಲಪಡಿಸುವ ಒಂದು ವಿಶೇಷ ಹಬ್ಬವಾಗಿದೆ. ಈ ಮಂಗಳಕರ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ತಮ್ಮನ್ನ ರಕ್ಷಿಸುವಂತೆ ಕೇಳಿಕೊಳ್ಳುತ್ತಾರೆ. ಜೊತೆಗೆ ಸಹೋದದರ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇನ್ನೂ ಹೀಗೆ ರಾಖಿ ಕಟ್ಟುವಾಗ ಮೂರು ಗಂಟು ಹಾಕುವಂತಹ ಸಂಪ್ರದಾಯವಿದೆ. ಶಾಸ್ತ್ರಗಳ ಪ್ರಕಾರ ರಾಖಿ ಕಟ್ಟುವಾಗ ಯಾಕೆ ಮೂರು ಗಂಟನ್ನು ಹಾಕಲೇಬೇಕು, ಇದರ ಹಿಂದಿನ ಧಾರ್ಮಿಕ ಮಹತ್ವವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ರಾಖಿ ಕಟ್ಟುವಾಗ ಮೂರು ಗಂಟು ಹಾಕುವುದೇಕೆ?
ಸಂಪ್ರದಾಯದ ಪ್ರಕಾರ ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುವಾಗ ಮೂರು ಗಂಟನ್ನು ಹಾಕಬೇಕು. ಮೂರು ಗಂಟು ಹಾಕದೇ ಹೋದರೆ ಆ ರಕ್ಷಾ ಸೂತ್ರವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ರಾಖಿ ಕಟ್ಟುವಾಗ ಮೂರು ಗಂಟು ಹಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಮೂರು ಗಂಟುಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ದೇವರೊಂದಿಗೆ ಸಂಬಂಧವನ್ನು ಹೊಂದಿದೆ.
ಈ ಮೂರು ಗಂಟುಗಳು ಸಂಬಂಧವನ್ನು ಬಲಪಡಿಸುತ್ತವೆ ಮತ್ತು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಸಹೋದರಿ ರಾಖಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುವುದು ಶುಭ ಮತ್ತು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗುತ್ತದೆ.
ಈ ಮೂರು ಗಂಟು ಏನನ್ನು ಪ್ರತಿನಿಧಿಸುತ್ತದೆ?
ಸಹೋದರಿ ಸಹೋದರನಿಗೆ ರಾಖಿ ಕಟ್ಟುವಾಗ ಮೂರು ಗಂಟು ಹಾಕಬೇಕು. ರಾಖಿ ಕಟ್ಟುವಾಗ ಹಾಕುವ ಮೊದಲ ಗಂಟು ಸಹೋದರನ ದೀರ್ಘಾಯುಷ್ಯ, ಸುರಕ್ಷತೆ, ಸಂತೋಷ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಎರಡನೇ ಗಂಟು ಸಹೋದರ ಮತ್ತು ಸಹೋದರಿಯ ನಡುವಿನ ದೂರ ಮಾಡಲಾಗದ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನು ಪ್ರತಿನಿಧಿಸುತ್ತದೆ. ಮೂರನೇ ಗಂಟು ಸಹೋದರನಿಗೆ ತನ್ನ ಕರ್ತವ್ಯಗಳ ಜ್ಞಾಪನೆಯಾಗಿದೆ. ಅವನು ಯಾವಾಗಲೂ ತನ್ನ ಜೀವನದಲ್ಲಿ ಧರ್ಮ, ಸತ್ಯ ಮತ್ತು ಘನತೆಯ ಮಾರ್ಗವನ್ನು ಅನುಸರಿಸಬೇಕು ಮತ್ತು ಎಂತಹದ್ದೇ ಪರಿಸ್ಥಿತಿ ಎದುರಾದರೂ ಸಹೋದರಿಯನ್ನು ರಕ್ಷಿಸಬೇಕು ಎಂಬುದರ ಜ್ಞಾಪನೆಯಾಗಿದೆ.
For More Updates Join our WhatsApp Group :