ಬೆಂಗಳೂರು : ಬಿಬಿಎಂಪಿಯ ಕೇಂದ್ರ ಕಚೇರಿ ಮುಂದೆ ನಾಯಿಗಳಿಗೆ ಶಾಲು ಹೊದೆಸಿ, ಬಿಸ್ಕೆಟ್ ತಿನ್ನಿಸಿದರು. ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ ಬಾಡೂಟ ಹಾಕುವ ಪಾಲಿಕೆ ಯೋಜನೆಗೆ ವಿರೋಧ ವ್ಯಕ್ತವಾಗ್ತಿದೆ.

ಆದರೆ, ಪಾಲಿಕೆ ನಡೆಯನ್ನು ವ್ಯಂಗ್ಯವಾಗಿ ಸ್ವಾಗತಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬಿಬಿಎಂಪಿಯ ಕೇಂದ್ರ ಕಚೇರಿ ಮುಂದೆ ನಾಯಿಗಳಿಗೆ ಶಾಲು ಹೊದೆಸಿ, ಬಿಸ್ಕೆಟ್ ತಿನ್ನಿಸಿದರು. ಬೀದಿನಾಯಿಗಳಿಗೆ ಬಾಡೂಟ ಕೊಡಲು ಹೊರಟ ಪಾಲಿಕೆಗೆ ವ್ಯಂಗ್ಯರೀತಿಯಲ್ಲಿ ಅಭಿನಂದನೆ ಸಲ್ಲಿಸಿದ ವಾಟಾಳ್, ಒಂದು ವೇಳೆ ಸ್ವಲ್ಪ ದಿನ ಊಟ ನೀಡಿ ಮತ್ತೆ ಯೋಜನೆ ನಿಲ್ಲಿಸಿದರೆ ಪಾಲಿಕೆ ಕಚೇರಿಗೆ ಬೀದಿನಾಯಿಗಳನ್ನು ನುಗ್ಗಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದರು. ಪಾಲಿಕೆ ಯೋಜನೆಗೆ ವಿರೋಧ ಇಲ್ಲ. ಆದರೆ ಸ್ವಲ್ಪ ದಿನ ಊಟ ಕೊಟ್ಟು ಸುಮ್ಮನಾದರೆ ಬೀದಿನಾಯಿಗಳು ಜನರ ಮೇಲೆ ದಾಳಿ ಮಾಡಬಹುದು ಎಂದರು.