ಆರೋಗ್ಯ : ಎದೆನೋವು ಬಂದರೆ ಹೆಚ್ಚು ಜನರು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಇದು ಪ್ರತಿಬಾರಿ ಗಂಭೀರವಾಗಿರುತ್ತದೆ ಎಂಬುದಿಲ್ಲ. ಕೆಲವೊಮ್ಮೆ ಆಹಾರ ಅಥವಾ ಜೀವನಶೈಲಿಯಿಂದ ಇಂತಹ ನೋವು ಕಾಣಿಸಬಹುದು. ಪದೇ ಪದೇ ಬರುವ ಎದೆನೋವಿಗೆ ತಕ್ಷಣ ಮಾತ್ರೆ ತೆಗೆದುಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಅದರ ಬದಲಾಗಿ ಮನೆಯಲ್ಲಿಯೇ ಲಭ್ಯವಿರುವ ಪದಾರ್ಥಗಳಿಂದ ಮನೆಮದ್ದು ತಯಾರಿಸಿಕೊಂಡು ಉಪಯೋಗಿಸಿದರೆ ಉತ್ತಮ.

ಈ ಕೆಳಗಿನ ಮನೆಮದ್ದುಗಳು ಎದೆನೋವನ್ನು ಕಡಿಮೆ ಮಾಡಬಹುದು
ನಿಂಬೆ ರಸ ಮತ್ತು ತಣ್ಣೀರು : ಪ್ರತಿ ದಿನವೂ ಒಂದು ವಾರ ತಣ್ಣೀರಿನಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ. ಇದು ಎದೆನೋವಿಗೆ ಉತ್ತಮ ಪರಿಹಾರವಾಗಬಹುದು. ಆದರೆ, ನಿಂಬೆ ರಸ ಕೆಲವರ ದೇಹಕ್ಕೆ ಹೊಂದದ ಕಾರಣ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.
ಕೊತ್ತಂಬರಿ ಬೀಜ ಮತ್ತು ಹಾಲು : ಕೊತ್ತಂಬರಿ ಬೀಜವನ್ನು ಪುಡಿಯಾಗಿ ಮಾಡಿ, ನೀರಿನಲ್ಲಿ ನೆನೆಹಾಕಿ ಬಳಿಕ ಶೋಧಿಸಿ. ಆ ನೀರಿಗೆ ಹಾಲು ಮತ್ತು ಸಕ್ಕರೆ ಬೆರೆಸಿ ಕುಡಿದರೆ ಎದೆನೋವು ಕಡಿಮೆಯಾಗುತ್ತದೆ.
ಎಳೆಯ ಸೀಬೆಕಾಯಿ ಕಷಾಯ : ಎಳೆಯ ಸೀಬೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ. ನಂತರ ಅದಕ್ಕೆ ಮಜ್ಜಿಗೆ ಬೆರೆಸಿ ಸೇವಿಸಿದರೆ ಎದೆನೋವು ತಗ್ಗಬಹುದು.
ಕೊತ್ತಂಬರಿ ಸೊಪ್ಪಿನ ಮಿಶ್ರಣ : ಕೊತ್ತಂಬರಿ ಸೊಪ್ಪನ್ನು ಎಳನೀರಿನೊಂದಿಗೆ ರುಬ್ಬಿ, ಆ ಮಿಶ್ರಣಕ್ಕೆ ಕಲ್ಲು ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಎದೆನೋವಿಗೆ ಪರಿಹಾರ ದೊರೆಯಬಹುದು.
ಈ ಮನೆಮದ್ದುಗಳು ಸಾಮಾನ್ಯವಾಗಿ ಅಡ್ಡಪರಿಣಾಮರಹಿತವಾಗಿವೆ. ಆದರೆ ಯಾವುದೇ ಆರೋಗ್ಯ ಸಮಸ್ಯೆಗೆ ಮನೆಮದ್ದು ಆರಂಭಿಸುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.