ಬೆಂಗಳೂರು ದಕ್ಷಿಣಕ್ಕೊಂದು ಬೆಂಗಳೂರು ಉತ್ತರ ಬೇಡವೇ? ನಾಳೆ cabinet meeting ನಿರ್ಧಾರ..!

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯುವುದು ಶತಸಿದ್ದ – R. Ashok ಭವಿಷ್ಯ..!

ಬೆಂಗಳೂರು: ಹಲವು ಸಂಕಷ್ಟಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಇದನ್ನು ಮಾಡುತ್ತಿದ್ದೆಯೇ ಅಂತ ಕನ್ನಡಿಗರಲ್ಲಿ ಅನುಮಾನ ಮೂಡಿರಲಿಕ್ಕೂ ಸಾಕು. ಜಿಲ್ಲೆಗಳ ಹೆಸರು ಬದಲಾಯಿಸುವುದು ಸಹ ಅಭಿವೃದ್ಧಿಯ ದ್ಯೋತಕ ಅಂತ ಸರ್ಕಾರ ಭಾವಿಸಿರುವ ಸಾಧ್ಯತೆಯೂ ಇದೆ.

ವಿಷಯವೇನೆಂದರೆ ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಅಂತ ಬದಲಾಯಿಸಿದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಎಂದು ಮರುನಾಮಕರಣ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿದ್ದು ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಪ್ರಸ್ತಾಪಕ್ಕೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *