ನವದೆಹಲಿ: ದೆಹಲಿಯಲ್ಲಿ ನವೆಂಬರ್ 10ರಂದು ನಿಗೂಢ ಸ್ಫೋಟವೊಂದು ಸಂಭವಿಸಿತ್ತು. ಘಟನೆಯಲ್ಲಿ 10ಕ್ಕೂ ಹೆಚ್ವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ಹಿಂದಿದ್ದ ಡಾ. ಉಮರ್ ನಬಿ ಮನೆಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಆತನ ಮನೆ ಇತ್ತು. ಈ ಉಮರ್ ಮೊನ್ನೆ ತಾನಿದ್ದ ಕಾರನ್ನೇ ಸ್ಫೋಟಿಸಿಕೊಂಡಿದ್ದ, ಆ ಸ್ಫೋಟದಲ್ಲಿ ತಾನೂ ಸಾವನ್ನಪ್ಪಿದ್ದ. ಡಿಎನ್ಎಯಿಂದ ಅದು ಆತನದಲ್ಲೇ ಮೃತದೇಹ ಎಂಬುದು ಕೂಡ ದೃಢಪಟ್ಟಿದೆ. ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.
For More Updates Join our WhatsApp Group :
