ಮಲಗುವ ಮುನ್ನ ನೆನಸಿಟ್ಟ Chia Seed ನೀರು ಕುಡಿದರೆ ರಾತ್ರಿ ಹಸಿವಾಗುವುದಿಲ್ಲ

ಮಲಗುವ ಮುನ್ನ ನೆನಸಿಟ್ಟ Chia Seed ನೀರು ಕುಡಿದರೆ ರಾತ್ರಿ ಹಸಿವಾಗುವುದಿಲ್ಲ

ಚಿಯಾ ಬೀಜಗಳ ನೀರು ಮತ್ತು ಆರೋಗ್ಯ: ಅದೆಷ್ಟೋ ಜನರಿಗೆ ಬೆಳಗಿನ ಉಪಹಾರವಾಗಿರುವ ಚಿಯಾ ಬೀಜಗಳ ಬಗ್ಗೆ ನಿಮಗೂ ತಿಳಿದಿರಬಹುದು. ಇವುಗಳ ನಿಯಮಿತ ಸೇವನೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇವುಗಳನ್ನು ಬೆಳಿಗ್ಗೆ ಸೇವನೆ ಮಾಡುವ ಬದಲು ರಾತ್ರಿ ಸೇವನೆ ಮಾಡಿದರೆ ಏನಾಗಬಹುದು ಎಂದು ಯೋಚಿಸಿದ್ದೀರಾ? ಹಾಗಾದರೆ ಮಲಗುವ ಮುನ್ನ ಚಿಯಾ ಬೀಜಗಳ ಸೇವನೆ ಮಾಡಿದರೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಚಿಯಾ ಬೀಜಗಳು ನೋಡುವುದಕ್ಕೆ ಚಿಕ್ಕದಾಗಿದ್ದರೂ ಕೂಡ ಅವುಗಳಲ್ಲಿ ಆರೋಗ್ಯ  ಪ್ರಯೋಜನಗಳು ಸಾಕಷ್ಟಿದೆ. ಅದೆಷ್ಟೋ ಜನರಿಗೆ ಬೆಳಗಿನ ಉಪಹಾರದ ಭಾಗವಾಗಿವೆ. ಇದರಲ್ಲಿ ಫೈಬರ್, ಒಮೆಗಾ- 3 ಕೊಬ್ಬಿನಾಮ್ಲಗಳು, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅಗತ್ಯ ಖನಿಜಾಂಶಗಳು ಸಮೃದ್ಧವಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಅದಲ್ಲದೆ ಚಿಯಾ ಬೀಜಗಳ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಹೃದಯದ ಆರೋಗ್ಯ , ಮೂಳೆಗೆ ಬಲ ಮತ್ತು ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತದೆ . ಆದರೆ ಈ ಸಣ್ಣ ಬೀಜಗಳನ್ನು ಬೆಳಿಗ್ಗೆ ಸೇವನೆ ಮಾಡುವ ಬದಲು ರಾತ್ರಿ ಸೇವನೆ ಮಾಡಿದರೆ ಏನಾಗಬಹುದು ಎಂದು ಯೋಚಿಸಿದ್ದೀರಾ? ಹಾಗಾದರೆ ಮಲಗುವ ಮುನ್ನ ಚಿಯಾ ಬೀಜಗಳ ಸೇವನೆ ಮಾಡಿದರೆ ಯಾವ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಚಿಯಾ ಬೀಜಗಳಲ್ಲಿ ನಾರಿನಾಂಶ ಸಮೃದ್ಧವಾಗಿದ್ದು ನಮ್ಮ ಕರುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ರಾತ್ರಿ ಸಮಯದಲ್ಲಿ ಅವುಗಳನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಅವುಗಳಲ್ಲಿರುವ ನಾರು ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಗೆಯನ್ನು ಹೆಚ್ಚಿಸುತ್ತದೆ. ಈ ಬೀಜಗಳ ಸೇವನೆಯಿಂದ ಹೊಟ್ಟೆ ಉಬ್ಬರ ಕಡಿಮೆಯಾಗಿ ರಾತ್ರಿ ನಿದ್ರೆ ಚೆನ್ನಾಗಿ ಬರುತ್ತದೆ.

ರಾತ್ರಿ ಹಸಿವಾಗದಂತೆ ನೋಡಿಕೊಳ್ಳುತ್ತದೆ

ಚಿಯಾ ಬೀಜಗಳಲ್ಲಿರುವ ಜೆಲ್ ಮತ್ತು ಫೈಬರ್ ಅಂಶವು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ, ಇದು ಮಧ್ಯರಾತ್ರಿ ತಿಂಡಿ ಅಥವಾ ಮಲಗುವ ಮುನ್ನ ಅತಿಯಾಗಿ ತಿನ್ನುವ ಅಭ್ಯಾಸವನ್ನು ತಡೆಯಲು ಸಹಾಯ ಮಾಡುತ್ತದೆ. ಅದರಲ್ಲಿಯೂ ಚಿಯಾ ಬೀಜಗಳಲ್ಲಿರುವ ನಿಧಾನವಾಗಿ ಜೀರ್ಣವಾಗುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಆಗಾಗ ಹಸಿವನ್ನು ಉಂಟುಮಾಡುವ ಬಯಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ನಿರ್ಜಲೀಕರಣ ಸಮಸ್ಯೆಯನ್ನುತಡೆಯುತ್ತದೆ

ನೆನೆಸಿದ ಚಿಯಾ ಬೀಜಗಳು 10-12 ಪಟ್ಟು ನೀರನ್ನು ಹೀರಿಕೊಳ್ಳುತ್ತವೆ, ಇದರಿಂದ ದೇಹದಲ್ಲಿ ಉಂಟಾಗುವ ನಿರ್ಜಲೀಕರಣ ಸಮಸ್ಯೆಯನ್ನು ತಡೆಯುತ್ತದೆ. ರಾತ್ರಿಯಿಡೀ ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಅದಲ್ಲದೆ ಚಿಯಾ ಬೀಜಗಳು ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ ಎಲೆಕ್ಟ್ರೋಲೈಟ್ಗಳನ್ನು ಒದಗಿಸುತ್ತವೆ. ಇದರಿಂದ ರಾತ್ರಿ ಸಮಯದಲ್ಲಿ ಕಂಡು ಬರುವ ಸೆಳೆತ, ನೋವನ್ನು ಕಡಿಮೆ ಮಾಡುತ್ತದೆ.

ಸ್ನಾಯು ಚೇತರಿಕೆ

ಈ ಬೀಜಗಳು ಒಮೆಗಾ-3ಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿದ್ದು ರಾತ್ರಿ ಸಮಯದಲ್ಲಿ ಸೇವನೆ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆಯುವಾಗ ಸ್ನಾಯುಗಳ ಚೇತರಿಕೆಗೆ ಮತ್ತು ಪೋಷಕಾಂಶಗಳ ಮರುಪೂರಣಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ.

ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ

ಚಿಯಾ ಬೀಜಗಳು ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತವೆ, ಇದು ದೇಹವು ಸಿರೊಟೋನಿನ್ ಮತ್ತು ಮೆಲಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುವ ಅಮೈನೋ ಆಮ್ಲವಾಗಿದೆ. ಈ ಎರಡೂ ಅಂಶಗಳು ಕೂಡ ನಿದ್ರೆಗೆ ಅವಶ್ಯಕ. ಹಾಗಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಮಲಗುವ ಮುನ್ನ ಒಂದು ಲೋಟ ಚಿಯಾ ಬೀಜ ನೆನೆಸಿಟ್ಟ ನೀರನ್ನು ಕುಡಿಯಿರಿ. ಇದು ದೇಹಕ್ಕೆ ವಿಶ್ರಾಂತಿ ನೀಡುವುದಲ್ಲದೆ ಒಳ್ಳೆಯ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ

ಚಿಯಾ ಬೀಜಗಳು ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುವುದರಿಂದ ಇದು ರಾತ್ರಿಯಿಡೀ ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸಲು ಮತ್ತು ಬೆಳಗಿನ ಜಾವದ ಶಕ್ತಿಯ ಕುಸಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಊಟದ ನಂತರ ರಕ್ತದಲ್ಲಿನ ಸಕ್ಕರೆಯಲ್ಲಿ ಹಠಾತ್ ಏರಿಕೆ ಮತ್ತು ಕುಸಿತವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಚಿಯಾ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿರುತ್ತವೆ, ಇವೆಲ್ಲವೂ ಇನ್ಸುಲಿನ್ ಸಂವೇದನೆ ಮತ್ತು ಒಟ್ಟಾರೆ ಚಯಾಪಚಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

Leave a Reply

Your email address will not be published. Required fields are marked *