ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಪುತ್ರನೇ ತಾಯಿಯನ್ನ ಕೊಂದು, ಆಕೆ ಮೃತ ದೇಹಕ್ಕೆ ಬೆಂಕಿ ಹಾಕಿ ಪಕ್ಕದಲ್ಲೇ ಮಲಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡಿಕೊಂಡು ಅಮ್ಮನ ಜೊತೆಯಲ್ಲಿದ್ದ ಪವನ್ ಕಳೆದ ರಾತ್ರಿ ತಾಯಿಯನ್ನು ಕೊಂದು ಮನೆಯೊಳಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾನೆ. ಬಳಿಕ ತಾಯಿ ಮೃತದೇಹ ಬೆಂಕಿಯಲ್ಲಿ ಬೇಯುತ್ತಿದ್ದರೆ ಕೊಲೆಗಾರ ಮಗ ಪ್ರಜ್ಞೆ ಇಲ್ಲದವನಂತೆ ಅಲ್ಲೇ ಪಕ್ಕದಲ್ಲಿ ಮಲಗಿದ್ದಾನೆ.
ತಾಯಿ ಭವಾನಿ ಮೃತದೇಹ ಬಹುತೇಕ ಸುಟ್ಟುಹೋಗಿದ್ದು ಕಾಲು ಹಾಗೂ ಕೈ ಮಾತ್ರ ಉಳಿದಿದೆ. ಅಕ್ಕಪಕ್ಕದವರಿಂದ ವಿಷಯ ತಿಳಿದು ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಾಯಿಯನ್ನ ಕೊಂದ ಪುತ್ರನನ್ನು ಆಲ್ದೂರು ಪೊಲೀಸರು ಬಂಧಿಸಿದ್ದಾರೆ