ಚಿತ್ರದುರ್ಗ: ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆಸಿ ವಿರೇಂದ್ರ ಪಪ್ಪಿ ಮತ್ತು ಅವರ ಸಹೋದರ ಕೆಸಿ ನಾಗರಾಜ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ದಾಳಿ ರಾತ್ರಿ 12:45 ಮುಗಿದಿದೆ. ನಾವು ವರದಿ ಮಾಡಿದ ಪ್ರಕಾರ ನಿನ್ನೆ ಬೆಳಗ್ಗೆ 5 ಗಂಟೆಗೆ ಈಡಿ ಅಧಿಕಾರಿಗಳು ಜಿಲ್ಲೆಯ ಚಳ್ಳಕೆರೆಯಲ್ಲಿರುವ ವಿರೇಂದ್ರ ಪಪ್ಪಿ ಮತ್ತು ಅವರ ಸಹೋದರನ ಮನೆ ಮೇಲೆ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದರು.
ವಿರೇಂದ್ರ ಅವರ ಚಳ್ಳಕೆರೆ, ಬೆಂಗಳೂರು ಮತ್ತು ಗೋವಾ ಸೇರಿದಂತೆ 17 ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆದಿತ್ತು. ಅಧಿಕಾರಿಗಳು ಬ್ಯಾಗುಗಳಲ್ಲಿ ಕಾಗದ ಪತ್ರಗಳನ್ನು ತೆಗೆದುಕೊಂಡು ಹೋಗಿತ್ತಿರುವುದು ದೃಶ್ಯಗಳಲ್ಲಿ ಗಮನಿಸಬಹುದು.
For More Updates Join our WhatsApp Group :