ಸಂಪಾದಕೀಯ || ವನ್ಯಜೀವಿಗಳ ರಕ್ಷಣೆಯಲ್ಲಿ ಎಚ್ಚರಿಕೆಗೆ ತಜ್ಞರ ಸಲಹೆ

ಸಂಪಾದಕೀಯ || ವನ್ಯಜೀವಿಗಳ ರಕ್ಷಣೆಯಲ್ಲಿ ಎಚ್ಚರಿಕೆಗೆ ತಜ್ಞರ ಸಲಹೆ

ಕಳೆದ ವರ್ಷದ ಬಿರು ಬೇಸಗೆಯಲ್ಲಿ ಕುಡಿಯುವ ನೀರು ಮತ್ತು ಮೇವಿನ ತೀವ್ರ ಕೊರತೆಯನ್ನು ಜಿಲ್ಲೆಯ ರೈತ ಸಮುದಾಯ ಎದುರಿಸುತ್ತಿದ್ದಾಗ ಜಿಲ್ಲೆಯ ವನ್ಯ ಜೀವಿ ಧಾಮಗಳ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಪೂರೈಕೆಯ ಸಮಸ್ಯೆ ಪ್ರಸ್ತಾಪಕ್ಕೆ ಬಂದಿದ್ದು ಹಲವಾರು ಸ್ವಯಂ ಸೇವಾ ಸಂಘಟನೆಗಳು ಪರಿಹಾರ ಕ್ರಮಗಳಿಗೆ ಮುಂದಾಗಿದ್ದು ಸುದ್ದಿಯಾಗಿತ್ತು.

ಮಲೆನಾಡು ಭಾಗದ ರೈತರೊಬ್ಬರು ತಮ್ಮ ಕೊಳವೆ ಬಾವಿಯಿಂದ ಹತ್ತಿರದಲ್ಲಿ ಬತ್ತಿ ಹೋಗಿದ್ದ ಹಳ್ಳಕ್ಕೆ ನೀರು ಹಾಯಿಸುವ ಮೂಲಕ ವನ್ಯಜೀವಿಗಳ ಬಾಯಾರಿಕೆ ತಣಿಸಲು ನೆರವಾಗಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ತಮ್ಮ ಆವಾಸಸ್ಥಾನಗಳಲ್ಲಿ ಸಮಸ್ಯೆಯಾದಾಗ ಆಹಾರ ಅರಸಿ ಮಾಂಸಾಹಾರಿ ಪ್ರಾಣಿಗಳು ಜನ ವಸತಿಯ ಪ್ರದೇಶಗಳಿಗೆ ನುಗ್ಗಿ, ಕುರಿಗಳು, ದನಗಳು, ನಾಯಿಗಳನ್ನು ಬೇಟೆ ಯಾಡುವುದು ಈಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ತುಮಕೂರು, ತಿಪಟೂರು ಭಾಗದಲ್ಲಿ ಚಿರತೆ ಹಾವಳಿಗೆ ಹತ್ತಾರು ಕುರಿಗಳು ಬಳಿಯಾಗುತ್ತಿರುವ ಸುದ್ದಿ ಸಾಮಾನ್ಯವಾಗುತ್ತಿದೆ.ಕೋಲಾರ ಜಿಲ್ಲೆಯಲ್ಲಿಯೂ ಚಿರತೆಗಳ ಹಾವಳಿಗೆ ನೂರಾರು ಕುರಿಗಳು ಬಲಿಯಾಗಿ ಕುರಿ ಸಾಕುವವರಿಗೆ ಆರ್ಥಿಕ ಸಂಕಷ್ಟ ಉಂಟಾಗಿರುವುದು ಈಚಿನ ವಿದ್ಯಮಾನ.

ಹುಲಿ, ಚಿರತೆಯಂಥ ಪ್ರಾಣಿಗಳಿಗೆ ಸಾಕು ಪ್ರಾಣಿಗಳು ಬಲಿಯಾದಾಗ, ಕಾಡಾನೆಗಳು ನಾಡಿಗೆ ನುಗ್ಗಿ ಗದ್ದೆ ತೋಟಗಳನ್ನು ನಾಶ ಮಾಡಿದಾಗ, ವನ್ಯಜೀವಿಗಳಿಗೆ ಮನುಷ್ಯರು ಬಲಿಯಾದಾಗ ಸಂಬಂಧಿಸಿದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವುದು, ವನ್ಯಜೀವಿಗಳಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವ ಕೆಲಸವನ್ನು ಅರಣ್ಯಇಲಾಖೆಯ ವಿವಿಧ ವಿಭಾಗಗಳು ನಿರ್ವಹಿಸುತ್ತಿದ್ದರೂ ಈಚಿನ ದಿನಗಳಲ್ಲಿ ವನ್ಯಜೀವಿಗಳೊಂದಿಗೆ ಮಾನವ ಸಂಘರ್ಷದ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕಾಡಾನೆಗಳ ಹಾವಳಿಯಂತೂ ಹಾಸನ ಮತ್ತಿತರ ಮಲೆನಾಡು ಜಿಲ್ಲೆಗಳಲ್ಲಿ ದೊಡ್ಡ ಪಿಡುಗಿನಂತೆರೈತ ಸಮುದಾಯವನ್ನು ಬಾಧಿಸುತ್ತಿದೆ. ವನ್ಯಪ್ರಾಣಿಗಳಿಂದ ಗದ್ದೆ ತೋಟಗಳನ್ನು ರಕ್ಷಿಸಿಕೊಳ್ಳಲು ತಂತಿಬೇಲಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ, ಇಲ್ಲವೇ ಹುಲಿ, ಚಿರತೆಗಳ ಸಮಸ್ಯೆ ಬಗೆ ಹರಿಸಿಕೊಳ್ಳಲು ಬೇಟೆಯಿಂದ ಸತ್ತ ಪ್ರಾಣಿಯಲ್ಲಿ ವಿಷ ಬೆರೆಸಿ ಅವುಗಳನ್ನು ಕೊಲ್ಲುವ ದುಷ್ಕೃತ್ಯಗಳು ಬಯಲಿಗೆ ಬಂದಿವೆ. ಅರಣ್ಯಪ್ರದೇಶದಅತಿಕ್ರಮಣ ವಿಪರೀತವಾಗಿ ವನ್ಯಜೀವಿಗಳಿಗೆ ತಮ್ಮ ನೆಲೆಗೆ ತೊಂದರೆಯಾದಾಗ ಅವು ಮಾನವ ವಸತಿ ಪ್ರದೇಶಗಳಿಗೆ ಅನಿವಾರ್ಯವಾಗಿ ಪ್ರವೇಶಿಸುವುದರಿಂದ ಈ ಸಮಸ್ಯೆಗಳು ಹೆಚ್ಚಾಗುತ್ತಿರುವುದನ್ನು ಪರಿಸರತಜ್ಞರು, ವನ್ಯಜೀವಿ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಅರಣ್ಯ ಪ್ರದೇಶದ ಸಂರಕ್ಷಣೆಗೆ ಆದ್ಯತೆ ನೀಡುವುದಲ್ಲದೆ, ನೈಸರ್ಗಿಕ ವಾತಾವರಣಕ್ಕೆ ತೊಂದರೆ ಆಗದಂತೆ ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸ ಬೇಕಾಗುತ್ತದೆ. ತಮ್ಮ ನೈಸರ್ಗಿಕ ಆವಾಸಕ್ಕೆ ತೊಂದರೆಯಾಗದಿದ್ದರೆ ಯಾವ ಮಾಂಸಾಹಾರಿ ಪ್ರಾಣಿಯೂ ಮಾನವ ವಸತಿ ಪ್ರದೇಶಗಳಲ್ಲಿ ಬೇಟೆಗಾಗಿ ಬರುವುದಿಲ್ಲ ಎಂಬ ವಾಸ್ತವ ಸಂಗತಿಯನ್ನೂಅರ್ಥ ಮಾಡಿಕೊಳ್ಳಬೇಕಾಗಿದೆ.ವನ್ಯಜೀವಿಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡುವುದೇ ಅವುಗಳ ಸಂರಕ್ಷಣೆಯ ವಿಷಯದಲ್ಲಿಅನುಸರಿಸಬೇಕಾದ ಮಾರ್ಗ. ಕಾಡು ಪ್ರಾಣಿಗಳಿಗೆ ಮೇವು ಸಿಗದಿದ್ದಾಗ ಕೃತಕವಾಗಿ ಮೇವು ಒದಗಿಸುವುದಾಗಲೀ, ಮಾಂಸಾಹಾರಿ ಪ್ರಾಣಿಗಳಿಗೆ ಅವುಗಳ ಆಹಾರವನ್ನು ಪೂರೈಸುವುದಾಗಲೀ ಸರಿಯಾದಕ್ರಮವಲ್ಲ ಎಂಬ ಅಭಿಪ್ರಾಯವೂಇದೆ.

ಕಾಡು ಪ್ರಾಣಿಗಳು ವಾಹನಗಳಿಂದ ಅಪಘಾತಕ್ಕೊಳಗಾದ ಇಲ್ಲವೇ ಕಳ್ಳಬೇಟೆಯವರ ಉರುಳಿನಲ್ಲಿ ಸಿಲುಕಿದ ಸಂದರ್ಭ ಬಿಟ್ಟು ನೈಸರ್ಗಿಕವಾಗಿ ಗಾಯಗೊಂಡ ಸಂದರ್ಭದಲ್ಲಿ ಅವುಗಳಿಗೆ ಸಾಕು ಪ್ರಾಣಿಗಳಂತೆ ಚಿಕಿತ್ಸೆ ನೀಡುವ ಪದ್ಧತಿಯು ಮಾನವ ವನ್ಯಜೀವಿ ಸಂಘರ್ಷಗಳಿಗೆ ಕಾರಣವಾಗುತ್ತದೆ ಎಂಬ ಎಚ್ಚರಿಕೆಯನ್ನು ವನ್ಯಜೀವಿ ತಜ್ಞರು ನೀಡುತ್ತಾರೆ.ಈ ಸಂಬಂಧದಲ್ಲಿ ಅರಣ್ಯ, ಪರಿಸರ ಮತ್ತುಜೀವಿಶಾಸ್ತ್ರ ಸಚಿವರಿಗೆ ಪತ್ರ ಬರೆದಿರುವ ಪರಿಸರ ವಿಜ್ಞಾನಿಯೊಬ್ಬರು  ಈ ಅವೈಜ್ಞಾನಿಕ ಪದ್ಧತಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಳ್ಳುವಂತೆ ಕೋರಿದ್ದಾರೆ.ವನ್ಯಜೀವಿಗಳು ನೈಸರ್ಗಿಕ ಕಾರಣಗಳಿಂದ (ಇನ್ನೊಂದುಜೀವಿಯಿಂದ ದಾಳಿಗೆ ತುತ್ತಾಗಿಅಥವಾಕಲ್ಲು, ಮುಳ್ಳುಗಳಿಂದ ಗಾಯ) ಸಾವನ್ನಪ್ಪಿದರೆ, ಅದು ನಿಸರ್ಗದ ನಿಯಮವೇ ಆಗುತ್ತದೆ.ಇದರಿಂದ ವನ್ಯಜೀವಿಗಳ ಸಂಖ್ಯೆಯಲ್ಲಿ ಪ್ರಾಕೃತಿಕವಾಗಿ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತದೆ.

ಅದರಲ್ಲಿಯೂ ನಿಸರ್ಗದಲ್ಲಿ ನೈಸರ್ಗಿಕವಾಗಿ ಬೇಟೆಗೊಳಗಾಗುವ ಆನೆ, ಹುಲಿಗಳಂತಹ ವನ್ಯಜೀವಿಗಳ ಸಂಖ್ಯೆಯನ್ನು ಪರಿಸರದ ಸಾಮರ್ಥ್ಯಕ್ಕೆ ನಿಯಂತ್ರಣಗೊಳಿಸುವಲ್ಲಿ ಪ್ರಾಣಿಗಳು ನೈಸರ್ಗಿಕ ಕಾರಣಗಳಿಂದ ಗಾಯಗೊಂಡು ಅಸುನೀಗುವುದು ಕೂಡ ಮುಖ್ಯ ಪ್ರಕ್ರಿಯೆಯಾಗುತ್ತದೆ.ಗಾಯಗೊಂಡ ಕಾಡುಪ್ರಾಣಿಗಳಿಗೆ ನಿಸರ್ಗದಲ್ಲಿಗುಣಮುಖವಾಗುವ ಪ್ರಕ್ರಿಯೆಗಳಿರುತ್ತವೆ ಅಥವಾ ಪ್ರಾಣಿ ಮರಣ ಹೊಂದುತ್ತದೆ.ಹೀಗೆ ಸತ್ತ ಪ್ರಾಣಿಗಳ ಮೇಲೆಯೂ ಅವಲಂಬಿತವಾಗಿ ಇನ್ನಿತರ ಹಲವಾರು ಪ್ರಾಣಿಗಳು ಬದುಕುತ್ತವೆ. ಸತ್ತ ವನ್ಯಜೀವಿಗಳ ಕಳೇಬರವನ್ನು ನಿಸರ್ಗದಲ್ಲಿಯೇ ಬಿಡುವಅರಣ್ಯಇಲಾಖೆಯ ನಿರ್ಧಾರರಣಹದ್ದುವಿನಂತಹ ವನ್ಯಜೀವಿಗಳ ಪುನರುಜ್ಜೀವನಕ್ಕೆ ನೆರವಾಗುತ್ತದೆ. ಈತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳಿಗೆ ಅದರಲ್ಲಿಯೂ ಹುಲಿ ಯೋಜನೆ ಪ್ರದೇಶಗಳು, ರಾಷ್ಟ್ರೀಯಉದ್ಯಾನ, ವನ್ಯಜೀವಿಧಾಮ, ನೈಸರ್ಗಿಕವಾಗಿಗಾಯಗೊಂಡ ವನ್ಯಜೀವಿಗಳಿಗೆ ಚಿಕಿತ್ಸೆಕೊಡುವ ಪ್ರಕ್ರಿಯೆ ಹೆಚ್ಚಾಗಿದೆ. ಹಾಗಾಗಿ, ವನ್ಯಜೀವಿಗಳು ನೈಸರ್ಗಿಕ ಕಾರಣಗಳಿಂದ ಗಾಯಗೊಂಡರೆ ಅವುಗಳಿಗೆ ಚಿಕಿತ್ಸೆಕೊಡುವ ಕಾರ್ಯವಿಧಾನವನ್ನು ಮುಂದುವರಿಸ ಬಾರದು. ಇದರಿಂದ ನೈಸರ್ಗಿಕ ಸಮತೋಲನ ಪ್ರಕ್ರಿಯೆಗೆ ಅಡ್ಡಿಯಾಗುವುದನ್ನು ಮರೆಯಬಾರದು.

Leave a Reply

Your email address will not be published. Required fields are marked *