ಏರ್ಪೋರ್ಟ್ಗೆ ಮೇ ತಿಂಗಳಿನಿಂದ ಎಲೆಕ್ಟ್ರಿಕ್ ಎಸಿ ಬಸ್ ಸಂಚಾರ

ಏರ್ಪೋರ್ಟ್ಗೆ ಮೇ ತಿಂಗಳಿನಿಂದ ಎಲೆಕ್ಟ್ರಿಕ್ ಎಸಿ ಬಸ್ ಸಂಚಾರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯು ವಜ್ರ ಬಸ್ಗಳನ್ನು ಓಡಿಸುತ್ತದೆ. ಕ್ಯಾಬ್, ಖಾಸಗಿ ವಾಹನದಲ್ಲಿ ನಿಲ್ದಾಣಕ್ಕೆ ಹೋಗುವ ಬದಲು ಜನರು ಸುಲಭವಾಗಿ ನಗರದ ವಿವಿಧ ಭಾಗದಿಂದ ದೇವನಹಳ್ಳಿಯಲ್ಲಿರುವ ಏರ್ಪೋರ್ಟ್ಗೆ ಬಿಎಂಟಿಸಿ ಬಸ್ನಲ್ಲಿ ಕಡಿಮೆ ಖರ್ಚಿನಲ್ಲಿ ಸಂಚಾರವನ್ನು ನಡೆಸುತ್ತಾರೆ.

ಬಿಎಂಟಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸದ್ಯ ವೊಲ್ವೋ ಎಸಿ ಬಸ್ಗಳನ್ನು ಓಡಿಸುತ್ತಿದೆ. ಆದರೆ ಮೇ ತಿಂಗಳಿನಿಂದ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲಿದ್ದು, ಅದಕ್ಕಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎಲೆಕ್ಟ್ರಿಕ್ ಎಸಿ ಬಸ್ಗಳು ಸಂಚಾರವನ್ನು ನಡೆಸುತ್ತಿವೆ. ಇದಕ್ಕಾಗಿ ಟರ್ಮಿನಲ್-2 ನಿಂದ ಒಂದು ಕಿ. ಮೀ. ದೂರದಲ್ಲಿರುವ ಪಾರ್ಕಿಂಗ್ ಲಾಟ್ನಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆ ಮಾಡಲಾಗುತ್ತಿದೆ. ಒಟ್ಟಿಗೆ ಮೂರು ಬಸ್ಗಳನ್ನು ಚಾರ್ಜ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. 320 ಇವಿ ಬಸ್ಗಳು: ಬಿಎಂಟಿಸಿ ಅಶೋಕ್ ಲೈಲ್ಯಾಂಡ್ ಅಧೀನದಲ್ಲಿ ಬರುವ ಓಹೆಚ್ಎಂ ಮೊಬಿಲಿಟಿ ಲಿಮಿಟೆಡ್ ಮೂಲಕ 320 ಎಲೆಕ್ಟ್ರಿಕ್ ಬಸ್ಗಳನ್ನು ಪಡೆಯಲಿದೆ. ಸದ್ಯ 58 ಎಸಿ ಎಲೆಕ್ಟ್ರಿಕ್ ಬಸ್ಗಳು ನಗರಕ್ಕೆ ಬರಲಿವೆ. ಇವುಗಳಲ್ಲಿ ಕೆಲವು ಬಸ್ಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಓಡಿಸುವ ಮೂಲಕ ಹಳೆಯ ವಾಯು ವಜ್ರ ಬಸ್ಗಳನ್ನು ಬದಲಾವಣೆ ಮಾಡಲಾಗುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಒಂದು ಬಸ್ ಚಾರ್ಜ್ ಆಗಲು 45 ನಿಮಿಷ ಬೇಕು ಎಂದು ಅಂದಾಜಿಸಲಾಗಿದೆ. ಬಿಎಂಟಿಸಿ ಈ ಬಸ್ಗಳನ್ನು ಒಟ್ಟು ವೆಚ್ಚದ ಒಪ್ಪಂದ (ಜಿಸಿಸಿ) ಅಡಿಯಲ್ಲಿ ಪಡೆದುಕೊಳ್ಳುತ್ತಿದೆ. ಇದಕ್ಕಾಗಿಯೇ ರಾಜ್ಯ ಸರ್ಕಾರ 150 ಕೋಟಿ ರೂ. ವಿಶೇಷ ಅನುದಾನವನ್ನು ನೀಡಿದೆ.

ಮುಂದಿನ ವಾರ ಬಸ್ಗಳು ನಗರಕ್ಕೆ ಆಗಮಿಸಲಿದ್ದು, ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮವನ್ನು ಸಹ ಮಾಡಲಾಗುತ್ತದೆ. ಪ್ರತಿದಿನ 225 ಕಿ. ಮೀ. ಸಂಚಾರ ನಡೆಸುವಂತೆ 12 ವರ್ಷಗಳ ಕಾಲ 350 ದಿನಗಳು ಬಸ್ಗಳು ಸಂಚಾರ ನಡೆಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. 60-70 ನಿಮಿಷ ಪೂರ್ಣವಾಗಿ ಬಸ್ ಚಾರ್ಜ್ ಆದರೆ 200 ಕಿ. ಮೀ. ಓಡಲಿದೆ. ಒಪ್ಪಂದದ ಪ್ರಕಾರ ಬಸ್ಗಳ ನಿರ್ವಹಣೆ, ಚಾಲಕರನ್ನು ಒದಗಿಸುವುದು ಕಂಪನಿಯ ಜವಾಬ್ದಾರಿ. ಬಿಎಂಟಿಸಿ ನಿರ್ವಾಹಕರನ್ನು ಮಾತ್ರ ನಿಯೋಜನೆ ಮಾಡುತ್ತದೆ. ಡಿಪೋ ನಂಬರ್ 18 (ಐಟಿಪಿಎಲ್)ಗೆ 58 ಎಲೆಕ್ಟ್ರಿಕ್ ಎಸಿ ಬಸ್ಗಳನ್ನು ನೀಡಲಾಗಿದೆ. ಈ ಬಸ್ಗಳು ಕಾಡುಗೋಡಿ-ಬನಶಂಕರಿ, ಮೆಜೆಸ್ಟಿಕ್-ಸಿಲ್ಕ್ ಬೋರ್ಡ್, ಹೊಸಕೋಟೆ-ಅತ್ತಿಬೆಲೆ ನಡುವೆ ಸಂಚಾರವನ್ನು ನಡೆಸಲಿವೆ. ಮುಂದಿನ ಹಂತದಲ್ಲಿ ಬರುವ ಬಸ್ಗಳನ್ನು ಸುಭಾಷ್ ನಗರ, ಕತ್ರಿಗುಪ್ಪೆ, ಹೆಚ್ಎಸ್ಆರ್ ಲೇಔಟ್ ಡಿಪೋಗಳಿಗೆ ನೀಡಲಾಗುತ್ತದೆ. ವೊಲ್ವೋ ಎಸಿ ಬಸ್ಗಳ ನಿರ್ವಹಣೆ ದುಬಾರಿಯಾಗಿದೆ. ಅದಕ್ಕೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್ ಎಸಿ ಬಸ್ಗಳ ನಿರ್ವಹಣೆ ದರ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಎಂಟಿಸಿಯಲ್ಲಿ ಮೊದಲು 560 ವೊಲ್ವೋ ಬಸ್ಗಳಿದ್ದವು, ಈಗ 450 ಬಸ್ ಇದೆ. ಇವುಗಳಲ್ಲಿ 308 ವಜ್ರ ಮತ್ತು 142 ವಾಯು ವಜ್ರ ಬಸ್ಗಳು. ವಾಯು ವಜ್ರ ಬಸ್ಗಳು ಪ್ರತಿ ಕಿ. ಮೀ. ಸಂಚಾರ ನಡೆಸಲು 84 ರೂ. ವೆಚ್ಚವಾಗುತ್ತದೆ. ಆದರೆ ಪ್ರತಿ ಕಿ. ಮೀ.ಗೆ 72.33 ರೂ. ಲಾಭಗಳಿಸುತ್ತಿವೆ. ಟೆಕ್ ಕಾರಿಡಾರ್ನಲ್ಲಿ ಸಂಚಾರ ನಡೆಸುವ ವಜ್ರ ಬಸ್ಗಳ ಪ್ರತಿ ಕಿ. ಮೀ. ವೆಚ್ಚ 90 ರೂ. ಆಗಿದೆ. ಆದರೆ ಬಸ್ಗಳು ಗಳಿಸುತ್ತಿರುವುದು 50.81 ರೂ. ಪ್ರತಿ ಕಿ. ಮೀ.ಗೆ. ಬಿಎಂಟಿಸಿ ಎಲೆಕ್ಟ್ರಿಕ್ ಎಸಿ ಬಸ್ ಪ್ರತಿ ಕಿ. ಮೀ.ಗೆ 65.8 ರೂ. ನೀಡಲಿದೆ ಮತ್ತು ಉಳಿದ 14-15 ರೂ. ವನ್ನು ಪ್ರತಿ ಕಿ. ಮೀ. ನಿರ್ವಾಹಕರ ವೆಚ್ಚಕ್ಕೆ ಬಳಸಲಿದೆ. ಸದ್ಯ ಬಿಎಂಟಿಸಿಯಲ್ಲಿ 6,875 ಬಸ್ಗಳಿದ್ದು, ಇವುಗಳಲ್ಲಿ 1,369 ಎಲೆಕ್ಟ್ರಿಕ್ ಬಸ್ಗಳು.

Leave a Reply

Your email address will not be published. Required fields are marked *